ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ: "ನಿಟ್ಟೆ ಆನ್ 2026" ಮ್ಯಾರಥಾನ್ ಯಶಸ್ವಿ

Upayuktha
0

 


ಬೆಂಗಳೂರು: ತಾಯಂದಿರ ದಿನದ ಸ್ಮರಣಾರ್ಥದ ಓಟ ಮಾತೃತ್ವದ ಶಕ್ತಿ ಮತ್ತು ಸಹಿಷ್ಣುತೆಗಳಿಗೆ ನಾವು ಸಲ್ಲಿಸುವ ನಮ್ರ ನಮನ, ಹಾಗೂ ನಮ್ಮ ಪಾಲಿಗೆ ಒದಗಿ ಬಂದಿರುವ ಪುಣ್ಯ. ಇಂದು ನಾವು ಇಡುವ ಪ್ರತಿ ಹೆಜ್ಜೆ, ನಾವು ಇಟ್ಟ ಮೊದಲ ತೊದಲ ಹೆಜ್ಜೆಯಿಂದ ಬೃಹತ್ ಓಟದ ತನಕ ತನ್ನ ತ್ಯಾಗದಿಂದ ಹಾಗೂ ಅಪರಿಮಿತ ಪ್ರೀತಿ ಮತ್ತು ಸಾಮರ್ಥ್ಯ ತುಂಬಿದ ತಾಯಿಗೆ ಸಮರ್ಪಣೆಯಾಗಲಿದೆ ಎಂದು ನಿಟ್ಟೆ ಶಿಕ್ಷಣ ಟ್ರಸ್ಟ್ನ ಟ್ರಸ್ಟಿ ರೋಹಿತ್ ಪೂಂಜ ನುಡಿದರು.

 

ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ತನ್ನ 25ನೇ ವರ್ಷದ ರಜತ ಮಹೋತ್ಸವ ವರ್ಷಾಚರಣೆಗೆ ಸಂಬಂಧಿಸಿದಂತೆ ಆಯೋಜನೆಗೊಂಡಿದ್ದನಿಟ್ಟೆ ಆನ್ 2026’ ಮ್ಯಾರಾಥಾನ್ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

 

ಓಟಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ನಮ್ಮ ಬೂಟುಗಳ ಶೂ ಲೇಸ್ ಗಳನ್ನು ಹಾಕುವುದರಿಂದ ಗುರಿ ತಲುಪುವವರೆಗೆ ನಮ್ಮ ಸ್ಫೂರ್ತಿ ದೇವತೆಯಾಗಿರುವ ತಾಯಂದಿರು ನಿಜಕ್ಕೂ ಆದರಣೀಯರು. ಅವರೇ ನಮ್ಮ ಮೊದಲ ಗುರುಗಳು. ನಮ್ಮ ಓಟದ ಮುಖಾಂತರ ನಮ್ಮ ಬದುಕಿನ ಅತ್ಯಂತ ಶಕ್ತಿಶಾಲಿ ಸ್ತ್ರೀ ಅಂದರೆ ಮಾತೆಗೆ ನಮಿಸೋಣ ಎಂದು ವ್ಯಾಖ್ಯಾನಿಸಿದರು

 

ಸಾಮಾಜಿಕ ಕಾಳಜಿ ಹಾಗೂ ಸಮಾಜವನ್ನು ಒಳಗೊಂಡು ಮುನ್ನಡೆಯುವ ಅಭಿಲಾಷೆಯಿಂದ ಹಾಗೂ ಅಂತಾರಾಷ್ಟ್ರೀಯ ತಾಯಂದಿರ ದಿನದ ಸ್ಮರಣಾರ್ಥ ನಮ್ಮೆಲ್ಲರ ಬದುಕನ್ನು ಹಸನುಗೊಳಿಸುವ ಜನ್ಮದಾತೆಗೆ ನಮನ ಸಲ್ಲಿಸಲುನಿಟ್ಟೆ ಆನ್ 2026’- ಓಟವನ್ನು ಬೆಂಗಳೂರಿನ ಓರಿಯಾನ್ ಮಾಲ್ ಬಳಿ ಇಂದು ಆಯೋಜಿಸಲಾಗಿತ್ತು.

 

1000ಕ್ಕೂ ಅಧಿಕ ಸಂಖ್ಯೆಯಲ್ಲಿ ಎಲ್ಲಾ ವಯೋಮಾನದ ಉತ್ಸಾಹಿಗಳು ಸ್ಮರಣೀಯ ಓಟದಲ್ಲಿ ಪಾಲ್ಗೊಂಡರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top