ನೀಲಾವರ: ಯತಿಕುಲಚಕ್ರವರ್ತಿ ಪದ್ಮವಿಭೂಷಣ ಶ್ರೀ ವಿಶ್ವೇಶತೀರ್ಥ ಸ್ಮೃತಿ ವನದ ಉದ್ಘಾಟನೆ

Upayuktha
0

 


 

ಉಡುಪಿ: ಉಡುಪಿ ಜಿಲ್ಲೆ ನೀಲಾವರ ಗ್ರಾಮದಲ್ಲಿ (ಗೋಶಾಲೆಯ ಮುಂಭಾಗದಲ್ಲಿ) ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ವತಿಯಿಂದ ನಿರ್ಮಿಸಲಾದ ಯತಿಕುಲಚಕ್ರವರ್ತಿ ಪದ್ಮವಿಭೂಷಣ ಶ್ರೀ ವಿಶ್ವೇಶತೀರ್ಥ ಸ್ಮೃತಿ ವನದ ಉದ್ಘಾಟನೋತ್ಸವ ಸೋಮವಾರ ಸಂಜೆ ನೆರವೇರಿತು. ರಾಜ್ಯ ಅರಣ್ಯ ಪರಿಸರ ಮತ್ತು ಜೀವ ಶಾಸ್ತ್ರ ಇಲಾಖೆ ಸಚಿವರ ಈಶ್ವರ ಖಂಡ್ರೆಯವರು ಉದ್ಘಾಟನೆ ನೆರವೇರಿಸಿ, ತಮ್ಮ ಉತ್ಸಾಹಪೂರ್ಣ ಶುಭ ನುಡಿಗಳನ್ನಾಡಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

 

ಸ್ಮೃತಿ ವನ ವಿಸ್ತರಿಸುವ ಮತ್ತು ಅಭಿವೃದ್ಧಿಯ ನಿಮಿತ್ತ ಮಠದ ವತಿಯಿಂದ ಶ್ರೀಗಳು ನೀಡಿದ ಹೆಚ್ಚುವರಿ ಅನುದಾನದ ಪ್ರಸ್ತಾವನೆಗೆ ಸಮ್ಮತಿಸಿ ಒಂದು ಕೋಟಿ ರೂ ಅನುದಾನದ ಭರವಸೆ ನೀಡಿದರು.‌ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನಾಡಿಗೆ ದೇಶಕ್ಕೆ ನೀಡಿದ ಅಮೂಲ್ಯ ಮಾರ್ಗದರ್ಶನ‌, ಸಲ್ಲಿಸಿದ ಸೇವೆ ಅತ್ಯಂತ ಅಮೂಲ್ಯ ಎಂದು ಬಣ್ಣಿಸಿದರು.

 

ದಿವ್ಯ ಸಾನ್ನಿಧ್ಯ ವಹಿಸಿದ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು, ಗುರುಗಳಿಗೆ ಇದಕ್ಕಿಂತ ಉತ್ತಮ ಸ್ಮಾರಕ ಬೇರೆ ನಿರ್ಮಿಸಲು ಸಾಧ್ಯವಿಲ್ಲ; ಇದನ್ನು ನಿರ್ಮಿಸಿಕೊಟ್ಟ ಸರ್ಕಾರಕ್ಕೆ ಅರಣ್ಯ ಇಲಾಖೆಗೆ ಉದ್ಘಾಟಿಸಲು ಆಗಮಿಸಿದ ಸಚಿವರಿಗೆ ಅಭಿನಂದನೆಗಳು ಎಂದರು. ಸಚಿವರನ್ನು ಶ್ರೀಗಳು ಸನ್ಮಾನಿಸಿದರು.

 

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಶ್ರೀ ವಿಶ್ವೇಶತೀರ್ಥರ ಫೋಟೋ ಗ್ಯಾಲರಿ ಉದ್ಘಾಟಿಸಿದರು.

 

ರಾಜ್ಯ ಅರಣ್ಯ ಇಲಾಖೆಯ ಹಿರಿಯ ಅಧಿಮಾರಿಗಳಾದ ಮನೋಜ್ ತ್ರಿಪಾಠಿ‌, ಉಡುಪಿ ಡಿ ಎಫ್ ರುಥ್ರೇನ್ ಪಿ, ಎಸಿ ಎಫ್ ಪ್ರಕಾಶ ಪೂಜಾರಿ, ವಲಯ ಅರಣ್ಯಾಧಿಕಾರಿ ವಾರಿಜಾ ನಾಯರಿ ಹಾಗೂ ಇತರೆ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.

 

ಸ್ಮೃತಿ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾಜಿ ಶಾಸಕ ಕೆ ರಘುಪತಿ ಭಟ್ಟರು ಹಾಗೂ ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರುಗಳು ನೀಡಿದ ವಿಶೇಷ ಸಹಕಾರವನ್ನು ಸ್ಮರಿಸಲಾಯಿತು.

 


ಸ್ಮೃತಿವನ ನಿರ್ಮಾಣಕಾರ್ಯದಲ್ಲಿ ಶ್ರಮಿಸಿದ ಆರ್ಕಿಟೆಕ್ಟ್ ಸಂಪ್ರೀತ್ ರಾವ್, ಶ್ರೀ ವಿಶ್ವೇಶತೀರ್ಥರ ಕಂಚಿನ ಪ್ರತಿಮೆ ನಿರ್ಮಿಸಿದ ಜನಾರ್ದನಹಾವಂಜೆ, ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್ ಇಂಜಿನಿಯರ್ ಗಳಾದ ಸಚಿನ್, ಪವನ್ ಪೆರುಮುಂಡ ಹಾಗೂ ಫೋಟೋಗ್ರಾಫರ್ ಪರಶುರಾಮ ಭಟ್ ಅವರನ್ನು ಶ್ರೀಗಳು ಸಂಮಾನಿಸಿದರು.

 

ಮಾಜಿ ಜಿ ಪಂ ಅಧ್ಯಕ್ಷ ಭುಜಂಗ ಶೆಟ್ಟಿ, ಸಹಕಾರಿ ಧುರೀಣ ಹೆಚ್ ರಮೇಶ ಶೆಟ್ಟಿ, ಉದ್ಯಮಿ ಭುನವೇಂದ್ರ ಕಿದಿಯೂರು‌, ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ ಹರಿಶ್ಚಂದ್ರ, ಶ್ರೀ ಮಠದ ದಿವಾನರಾದ ಎಂ ರಘುರಾಮಾಚಾರ್ಯ, ಸಿ ಸುಬ್ರಹ್ಮಣ್ಯ ಭಟ್, ಗೋವರ್ಧನ ಗಿರಿ ಟ್ರಸ್ಡ್ ಕಾರ್ಯದರ್ಶಿ ನಾಗರಾಜರಾವ್, ವಿದ್ಯೋದಯ ಟ್ರಸ್ಟ್ ಕಾರ್ಯದರ್ಶಿ ಕೆ ಗಣೇಶ ರಾವ್, ಯಕ್ಷಗಾನಕಲಾರಂಗ ಅಧ್ಯಕ್ಷ ಗಂಗಾಧರ ರಾವ್ ಕಾರ್ಯದರ್ಶಿ‌, ಮುರಳಿ ಕಡೆಕಾರ್, ಶ್ರೀ ಕೃಷ್ಣ ಬಾಲನಿಕೇತನದ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ಸ್ಥಳೀಯ ಮುಖಂಡರಾದ ಕಮಲಾಕ್ಷ ಹೆಬ್ಬಾರ್, ರಾಜು ಕುಲಾಲ್ ನಳಿನಿರಾವ್ ಮಹೇಂದ್ರ ಕುಮಾರ್ ಹರೀಶ್ ಶೆಟ್ಟಿ ಚೇರ್ಕಾಡಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು.‌

 

ಬಾಲಕಿಯರಿಂದ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು. ಅರಣ್ಯಾಧಿಕಾರಿ ಶ್ರೀಧರ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.‌ ಜಿ ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿ, ಶ್ರೀ ವಿಶ್ವೇಶತೀರ್ಥರ ಸಂಸ್ಮರಣಾ ನುಡಿಗೈದು ಧನ್ಯವಾದ ಅರ್ಪಿಸಿದರು. ಬಳಿಕ ಸಚಿವರು ಗೋಶಾಲೆಗೆ ಭೇಟಿ ನೀಡಿ ತೆರಳಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top