ಸ್ಫೂರ್ತಿ ಸೆಲೆ: ತಾಯಿಯಂದಿರ ದಿನ

Upayuktha
0


ಮ್ಮ ದಿನಚರಿ ಶುರುವಾಗುವುದು ಅಮ್ಮನ ಕೈಯಲ್ಲಿನ ಟೀ ಕುಡಿದಾಗ. ಪಾಶ್ಚಿಮಾತ್ಯರ ಅವರು ಮದರ್ಸ್ ಡೇ, ಫಾದರ್ಸ್ ಡೇ ಹೀಗೆಲ್ಲ ಆಚರಿಸುತ್ತಾರೆ. ನಮ್ಮ ಜೀವನದಲ್ಲಿ ಪ್ರತಿಯೊಂದೂ ದಿನವೂ ಕೂಡ ತಾಯಿಯ ದಿನವೇ ಎಂದು. ಹೇಳ ಬಹುದು. ಅಷ್ಟು ನಮ್ಮ ಜೀವನದಲ್ಲಿ ಅಮ್ಮ ಹಾಸು ಹೊಕ್ಕಾಗಿ ಇರುತ್ತಾಳೆ.


ಜಗತ್ತಿನಲ್ಲಿ ದೇವರಿಗೆ ಎಲ್ಲ ಕಡೆಗೆ ಇರಲು ಆಗದೆ ಅಮ್ಮನನ್ನು ಸೃಷ್ಟಿಸಿದ ಎಂದು ಹೇಳುತ್ತಾರೆ. ಅಮ್ಮ ಭಗವಂತನ ಪ್ರತೀಕ. ಮನುಷ್ಯ ಮಾತ್ರವಲ್ಲ, ಪ್ರಾಣಿಗಳಿಗೂ ಕೂಡ ತಾಯಿ ಮತ್ತು ಮಕ್ಕಳ ಸಂಬಂಧವನ್ನು ಕಾಣಬಹುದು.


ನಮಗೆ ನಿದ್ದೆಯಲ್ಲಿ ಕೆಟ್ಟ ಕನಸು ಬಿದ್ದಾಗ ಕೂಡಾ ಅಮ್ಮ ಎಂದು ಕನವರಿಸುತ್ತೇವೆ. ನಮ್ಮ ಜೀವನದ ಆಗು ಹೋಗುಗಳನ್ನು ಅಮ್ಮನ ಮುಂದೆ ಹಂಚಿಕೊಂಡಾಗ ಮನಸ್ಸಿಗೆ ಏನೋ ಸಮಾಧಾನ.


ಯತಿಗಳು ಕೂಡ ಈ ಸಂಬಂಧದಿಂದ ಹೊರತಾಗಿಲ್ಲ. ಎಷ್ಟೋ ಯತಿಗಳು ತಾಯಿಗೆ ಆಶ್ರಮ ಸ್ವೀಕರಿಸಿದ ಮೇಲೆಯೂ ದೀರ್ಘ ದಂಡ ಪ್ರಣಾಮ ಮಾಡುವುದನ್ನು ಕಾಣಬಹುದು. ಶಂಕರಾಚಾರ್ಯರಿಂದ ತೊಡಗಿ ಈಗಿನ ಯತಿಗಳ ವರೆಗೆ ಎಲ್ಲರೂ ಮಾತೃ ಭಕ್ತಿಯನ್ನು ಎತ್ತಿ ಹಿಡಿದಿದ್ದಾರೆ. ತನ್ನ ತಾಯಿಯ ಸಲುವಾಗಿ ಶಿವನ ಆತ್ಮ ಲಿಂಗ ತಂದ ರಾವಣ ತಾಯಿಯ ಮೇಲಿನ ಅಗಾಧವಾದ ಪ್ರೀತಿಗೆ ಒಂದು ಉದಾಹರಣೆ ಎಂದು ಹೇಳ ಬಹುದು.


ಇದಕ್ಕೆ ನನ್ನ ಜೀವನವು ಕೂಡ  ಹೊರತಾಗಿಲ್ಲ. ಬದುಕಿನ ಪಾಠಗಳನ್ನು ಕಲಿಸಿ ಕೊಟ್ಟ ನನ್ನ ತಾಯಿ, "ಬೀಳಬಾರದು, ಬಿದ್ದರೂ, ಯಾರ ಮುಂದೆ ಹೇಳ ಬಾರದು, ಎಲ್ಲರೂ ಮೊದಲೇ ಎದ್ದೇಳಬೇಕು" ಎಂದು ಜೀವನದ ಗುಟ್ಟನ್ನು ಬಿಚ್ಚಿ ಕೊಟ್ಟ ತಾಯಿ, ಯಾವಾಗಲೂ    

ಜೀವನದ ಒಂದು ಭಾಗ.


ಮಾತೃ ದೇವೋ ಭವ. ಏನಂತೀರಾ?


-ಗಾಯತ್ರಿ ಸುಂಕದ, ಬದಾಮಿ.



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top