ಸುರತ್ಕಲ್ ರೋಟರಿ ಕ್ಲಬ್ ನ ತಿಂಗಳ ಸ್ನೇಹ ಕೂಟ

Upayuktha
0



ಸುರತ್ಕಲ್: ಸುರತ್ಕಲ್ ರೋಟರಿ ಕ್ಲಬ್ ನ ತಿಂಗಳ ಸ್ನೇಹ ಕೂಟ ಮತ್ತು ಸಾಂಸ್ಕೃತಿಕ ಸಂಜೆ ರೋಟರಿ ಕ್ಲಬ್ ಅಧ್ಯಕ್ಷ ರೊ. ರಾಮಚಂದ್ರ ಬಿ. ಕುಂದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಅರ್ಹ ಪ್ರತಿಭಾವಂತ ವಿದ್ಯಾರ್ಥಗಳಿಗಿಬ್ಬರಿಗೆ ಪ್ರಾಯೋಜಿಸುತ್ತಿರುವ ಶೈಕ್ಷಣಿಕ ಶುಲ್ಕದ ಮೊತ್ತವನ್ನು ನೀಡಲಾಯಿತು. ನಿರಂತರವಾಗಿ ಅನೇಕ ವರ್ಷಗಳಿಂದ ಆರ್ಥಿಕ ನೆರವನ್ನು ಪ್ರಾಯೋಜಿಸುತ್ತಿರುವ ರೋಟರಿಯ ಗೌರವ ಸದಸ್ಯ ಅಮೇರಿಕಾ ನಿವಾಸಿ ಕೃಷ್ಣರಾಜ ತಂತ್ರಿಯವರಿಗೆ ಕೃತಜ್ಞತೆ ಸಲ್ಲಿಸಲಾಯಿತು.


ಝೋನಲ್ ಲೆಫ್ಟ್ ನೆಂಟ್ ರೊ. ಸಂದೀಪ್ ರಾವ್ ಇಡ್ಯಾ ಶುಭ ಹಾರೈಸಿದರು. ಸಮುದಾಯ ಸೇವಾ ನಿರ್ದೇಶಕ ಚಂದ್ರಕಾಂತ್ ಮರಾಠೆ  ಶುಭಾಶಯ ಪಟ್ಟಿ ವಾಚಿಸಿದರು.


ಡಾ. ಗುರುರಾಜ್ ಸುರತ್ಕಲ್, ರಮೇಶ್ ರಾವ್ ಮಧ್ಯ, ರಾಮ್ ಮೋಹನ್ ಮತ್ತು ಪುಟಾಣಿ ಲಕ್ಷ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಪೂರ್ಣಿಮಾ ಸತೀಶ್ ರಾವ್ ವಿವಿಧ ಮನೋರಂಜನಾ ಆಟಗಳನ್ನು ನಡೆಸಿ ಕೊಟ್ಟರು. ಕಾರ್ಯದರ್ಶಿ ರಾಮ ಮೋಹನ್ ವೈ. ವಂದಿಸಿದರು. ಕ್ಲಬ್ ಸೇವಾ ನಿರ್ದೇಶಕ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top