ಗುರುಪುರ ಶ್ರೀ ಜಂಗಮ ಸಂಸ್ಥಾನ ಮಠಕ್ಕೆ ಸಚಿವ ವಿ. ಸೋಮಣ್ಣ ಭೇಟಿ

Upayuktha
0

  


ಮಂಗಳೂರು: ಅಂದಾಜು 5 ಕೋ. ರೂ ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿರುವ ಗುರುಪುರ ಶ್ರೀ ಜಂಗಮ ಸಂಸ್ಥಾನ ಮಠಕ್ಕೆ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಶನಿವಾರ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.

 

ಗುರುಪುರ ಜಂಗಮ ಸಂಸ್ಥಾನ ಮಠದ ರುದ್ರಮುನಿ ಸ್ವಾಮೀಜಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಸಚಿವ ಸೋಮಣ್ಣ ಅವರನ್ನು ಸನ್ಮಾನಿಸಿ ಮನವಿ ನೀಡಿದರು.

 

ಸಂದರ್ಭ ಸಂಸದ ಬ್ರಿಜೇಶ್ ಚೌಟ, ಶಾಸಕ ಡಾ. ಭರತ್ ಶೆಟ್ಟಿ, ಜಿಜೆಪಿ ..ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶ್ರೀ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸಚಿನ್ ಅಡಪ, ಸಚಿನ್ ಶೆಟ್ಟಿ ಗುರುಪುರ, ಲಕ್ಷ್ಮಣ್ ಶೆಟ್ಟಿಗಾರ ಗುರುಪುರ, ಗೋಕುಲ್ ಪ್ರಭು, ಪ್ರಮುಖರಾದ ಜಗದೀಶ ಅಧಿಕಾರಿ, ತೋನ್ಸೆ ಜಯ ಕೃಷ್ಣ . ಶೆಟ್ಟಿ, ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು, ಚಂದ್ರಹಾಸ ಪೂಜಾರಿ ಕೌಡೂರು ಭಂಡಾರಮನೆ, ಮಾಜಿ ಮೇಯರ್ ಕವಿತಾ ಸನಿಲ್‌, ಮಾಜಿ ಉಪಮೇಯರ್ ಸುಮಂಗಲಾ ರಾವ್, ಪೂಜಾ ಪೈ, ಅಮೃತಲಾಲ್ ಡಿಸೋಜ, ಸುಧೀರ್ ಕಾಮತ್ ಗುರುಪುರ, ಶ್ರೀಕರ ವಿ. ಶೆಟ್ಟಿ ಗುರುಪುರ, ಸತೀಶ್ಪೂಜಾರಿ ಬಳ್ಳಾಜೆ, ಸತೀಶ್ ಕುಲಾಲ್, ಹರೀಶ್ ಚಾಮಣಿ, ಮಾಜಿ ಕಾರ್ಪೊರೇಟರ್ಗಳಾದ ನಯನಾ ಕೋಟ್ಯಾನ್, ಬಬಿತಾ ಆರ್., ಗುರುಪುರ ಗ್ರಾಪಂ ಮಾಜಿ ಸದಸ್ಯರಾದ ಜಿ.ಎಂ. ಉದಯ ಭಟ್, ರಾಜೇಶ್ ಸುವರ್ಣ, ಸುನಿಲ್ ಪೂಜಾರಿ ಜಲ್ಲಿಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top