ಮೇ. 31 ರಂದು ದೈವಜ್ಞ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Upayuktha
0

 


ದಾವಣಗೆರೆ: ಇಲ್ಲಿನ ದೈವಜ್ಞ ರೇವಣಕರ್ ಪರಿವಾರದಿಂದ ಪ್ರತೀ ವರ್ಷದಂತೆ ವರ್ಷವೂ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿದ ದೈವಜ್ಞ ಬ್ರಾಹ್ಮಣ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಂದಿನ ಜೀವನದ ದಿವ್ಯ ಭವ್ಯ ಭವಿಷ್ಯಕ್ಕಾಗಿ ಪ್ರೋತ್ಸಾಹಿಸುವ ಸಲುವಾಗಿ ವರ್ಣರಂಜಿತ ಅದ್ದೂರಿಯಾಗಿದೈವಜ್ಞ ವಿದ್ಯಾಸಿರಿಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಜೊತೆಗೆ ದೈವಜ್ಞ ಸಮಾಜದ ಅಂಗವಿಕಲರಿಗೆ ಸಹಾಯ ಹಸ್ತ ನೀಡಿಲಾಗುವುದು ಎಂದು ದೈವಜ್ಞ ರೇವಣಕರ್ ಪರಿವಾರದ ಪ್ರಧಾನ ಕಾರ್ಯದರ್ಶಿ ಸಂಜಯ್ ರತ್ನಾಕರ ರೇವಣಕರ್ ತಿಳಿಸಿದ್ದಾರೆ.

 

ಮೇ. 31 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಪಿ.ಬಿ.ರಸ್ತೆಯ ರೇಣುಕಾ ಬಡಾವಣೆಯಲ್ಲಿ ಇರುವ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆಯುವ ವಿಜೃಂಭಣೆಯ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಗುವುದು.

 

ಸಮಾರಂಭದ ಅಧ್ಯಕ್ಷತೆಯನ್ನು ದೈವಜ್ಞ ರೇವಣಕರ್ ಪರಿವಾರದ ನೂತನ ಅಧ್ಯಕ್ಷರಾದ ಮಂಜುನಾಥ್ ಎನ್.ರೇವಣಕರ್ ವಹಿಸಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ದಾವಣಗೆರೆಯ ನೂತನ ಶಾಸಕರಾದ ಶ್ಯಾಮನೂರು ಸಮರ್ಥ್ ಮಲ್ಲಿಕಾರ್ಜುನ್ ನೆರವೆರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋವಾದ ರೇವಣದ ಶ್ರೀ ವಿಮಲೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ರಾಮನಾಥ್ ಪ್ರಭು ದೇಸಾಯಿ, ದೈವಜ್ಞ ರೇವಣಕರ್ ಪರಿವಾರದ ಗೌರವ ಅಧ್ಯಕ್ಷರಾದ ಡಾ. ನಲ್ಲೂರು ಅರುಣಾಚಲ ಎನ್. ರೇವಣಕರ್, ದಾವಣಗೆರೆಯ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಪ್ರಶಾಂತ ವಿ. ವರ್ಣೇಕರ್, ಮೈಸೂರಿನ ಸಮಾಜ ಸೇವಕಿ ಶ್ರೀಮತಿ ಮೀರಾ ನಾಗೇಶ್ ರೇವಣಕರ್ ಆಗಮಿಸಲಿದ್ದಾರೆ. ಅಪರೂಪದ ಶಿಕ್ಷಣದ ಕ್ಷೇತ್ರದ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಕ್ಕಳಿಗೆ ಪ್ರೋತ್ಸಾಹಿಸಿ ಸಮಾರಂಭ ಯಶಸ್ವಿಗೊಳಿಸಬೇಕಾಗಿ ದೈವಜ್ಞ ಬ್ರಾಹ್ಮಣ ರೇವಣಕರ್ ಪರಿವಾರದ ಖಜಾಂಚಿ ಮದನ್ ಟಿ.ರೇವಣಕರ್ ವಿನಂತಿಸಿದ್ದಾರೆ. ಗೋಷ್ಠಿಯಲ್ಲಿ ದಾವಣಗೆರೆಯ ದೈವಜ್ಞ ರೇವಣಕರ್ ಪರಿವಾರದ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ಶೆಣೈ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top