ಮಂಗಳೂರು ವಿವಿ: ಮೇ 21 ರಂದು ಪ್ರೊ. ಬಿ.ಎ. ವಿವೇಕ ರೈ ‘ಎಂಬತ್ತರ ಸಂಭ್ರಮ’ ಮತ್ತು ಕಲಾಭಿನಂದನೆ

Upayuktha
0


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಪಂಪ ಪ್ರಶಸ್ತಿ ಪುರಸ್ಕೃತ, ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಬಿ.ಎ. ವಿವೇಕ ರೈ ಅವರ ‘ಎಂಬತ್ತರ ಸಂಭ್ರಮ’ದ ಪ್ರಯುಕ್ತ ಅವರ ವಿದ್ಯಾರ್ಥಿ ಕಲಾವಿದರಿಂದ ಕಲಾಭಿನಂದನೆ ಕಾರ್ಯಕ್ರಮವು ಮೇ 21ರಂದು ನಡೆಯಲಿದೆ.


ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯದ ಹಳೇ ಸೆನೆಟ್ ಸಭಾಂಗಣವಾದ ಡಾ. ಯು.ಆರ್. ರಾವ್ ಸಭಾಂಗಣದಲ್ಲಿ ಮೇ 21ರ ಗುರುವಾರ ಮಧ್ಯಾಹ್ನ 2.30ಕ್ಕೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಗಣ್ಯರ ಉಪಸ್ಥಿತಿ: ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಸಿದ್ಧ ಲೇಖಕರು ಹಾಗೂ ಯಕ್ಷಗಾನ ಅರ್ಥಧಾರಿಗಳಾದ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ಅಭಿವಂದನಾ ನುಡಿಗಳನ್ನಾಡಲಿದ್ದಾರೆ.


‘ಭೀಷ್ಮಾರ್ಜುನ ಕಾಳಗ’ ತಾಳಮದ್ದಳೆ:

ಕಲಾಭಿನಂದನೆಯ ಅಂಗವಾಗಿ ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ಕೃತಿ ಆಧಾರಿತ ‘ಭೀಷ್ಮಾರ್ಜುನ ಕಾಳಗ’ ಯಕ್ಷಗಾನ ತಾಳಮದ್ದಳೆ ಜರುಗಲಿದೆ.


ಹಿಮ್ಮೇಳದಲ್ಲಿ: ಭಾಗವತರಾಗಿ ಸುಬ್ರಾಯ ಸಂಪಾಜೆ ಹಾಗೂ ಅತಿಥಿ ಕಲಾವಿದರಾಗಿ ಚಂಡೆ/ಮದ್ದಳೆಯಲ್ಲಿ ಪದ್ಮನಾಭ ಶಂಕರನಾರಾಯಣ ಭಟ್ ಮತ್ತು ಮುರಳೀಧರ ಕಲ್ಲೂರಾಯ ಸಹಕರಿಸಲಿದ್ದಾರೆ.


ಅರ್ಥಧಾರಿಗಳಾಗಿ: ಶ್ರೀಕೃಷ್ಣನಾಗಿ ಗಣರಾಜ ಕುಂಬ್ಳೆ, ಭೀಷ್ಮನಾಗಿ ರಾಧಾಕೃಷ್ಣ ಕಲ್ಚಾರ್ ಹಾಗೂ ಅರ್ಜುನನ ಪಾತ್ರದಲ್ಲಿ ನಾಗವೇಣಿ ಮಂಚಿ ಭಾಗವಹಿಸಲಿದ್ದಾರೆ.


ಕಾರ್ಯಕ್ರಮಕ್ಕೆ ಎಲ್ಲರಿಗೂ ಆತ್ಮೀಯ ಆಮಂತ್ರಣವಿದೆಯೆಂದು ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಧನಂಜಯ ಕುಂಬ್ಳೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ (ಪ್ರಭಾರ) ಡಾ. ಗಣೇಶ್ ಸಂಜೀವ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top