ಪರ್ಕಳ:
ಮಂಗಳ ಕಲಾ ಸಾಹಿತ್ಯ ವೇದಿಕೆ
ಪರ್ಕಳ ಇದರ 23ನೇ ವರ್ಷದ ಸಂಭ್ರಮ
“ಕಲಾ ಕೌಸ್ತುಭ” ಕಾರ್ಯಕ್ರಮ ಮೇ 17 ರಂದು ಭಾನುವಾರ
ಪರ್ಕಳದ ಶ್ರೀ ವಿಶ್ವೇಶ್ವರ ಸಬಾಭವನದಲ್ಲಿ
ನಡೆಯಲಿದೆ.
ಮಧ್ಯಾಹ್ನ
ಘಂಟೆ 3.30ಕ್ಕೆ ಉಡುಪಿ ನಗರ
ಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ
ಸುಮಿತ್ರಾ ಆರ್. ನಾಯಕ್ ದೀಪ
ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
ನೀಡಲಿದ್ದಾರೆ. 3.45ಕ್ಕೆ ಖ್ಯಾತ ಭಾಗವತರಾದ
ಶ್ರೀ ಗಣೇಶ ಆಚಾರ್ಯ ಬಿಲ್ಲಾಡಿ
ಇವರಿಂದ ಯಕ್ಷ-ಗಾನ ವೈಭವ
ಯಕ್ಷಗಾನ ಹಾಡುಗಾರಿಕೆ ನಡೆಯಲಿದೆ. ಸಂಜೆ 4.45ಕ್ಕೆ ನಡೆಯುವ ಸಭಾ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷರಾದ ನಟರಾಜ ಪರ್ಕಳ ವಹಿಸಲಿದ್ದಾರೆ.
ಮುಖ್ಯ
ಅತಿಥಿಗಳಾಗಿ ಮಾಜಿ ಸಚಿವರಾದ ಶ್ರೀ
ಪ್ರಮೋದ್ ಮಧ್ವರಾಜ್, ಮಂಗಳೂರು ಆಕಾಶವಾಣಿಯ ನಿವೃತ್ತ ಸಹಾಯಕ ನಿರ್ದೇಶಕಿ, ಹಿರಿಯ ಲೇಖಕಿ, ಹಿಂದಿ ಭಾಷಾ ತಜ್ಞರಾದ ಡಾ।
ಮಾಲತಿ ಆರ್. ಭಟ್, ಕಾರ್ಯನಿರತ
ಪತ್ರಕರ್ತರ ಸಂಘ ಉಡುಪಿ ಇದರ
ಅಧ್ಯಕ್ಷ ಸುಬ್ರಮಣ್ಯ ಜಿ. ಭಟ್ ಕುರ್ಯ,
ಅಂತರಾಷ್ಟ್ರೀಯ ಮಯೂರ ವಿದ್ಯಾರತ್ನ ಪ್ರಶಸ್ತಿ
ಪುರಸ್ಕೃತ ಶಿಕ್ಷಕಿ ಶ್ರೀಮತಿ ವಂದನಾ ರೈ ಕಾರ್ಕಳ, ಡಿಜಿಟಲ್
ಕ್ರಿಯೇಟರ್, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಿದ್ದಿ ಪಡೆದ
ಶಿಕ್ಷಕಿ ಶ್ರೀಮತಿ ಸಂಧ್ಯಾ ಕಾಮತ್, ಮಾಜಿ ನಗರಸಭಾ ಸದಸ್ಯ
ಶ್ರೀ ಮಹೇಶ್ ಠಾಕೂರ್ ಪರ್ಕಳ ಇವರು ಭಾಗವಹಿಸಲಿರುವರು.
ಜೊತೆಗೆ
ವೇದಿಕೆಯ ಗೌರವ ಅಧ್ಯಕ್ಷರುಗಳಾದ ಪ್ರಕಾಶ್
ಶೆಣೈ ಪರ್ಕಳ, ಶ್ರೀನಿವಾಸ ಉಪಾಧ್ಯ ಪರ್ಕಳ, ಸಂಚಾಲಕರಾದ ಮಂಜುನಾಥ ಉಪಾಧ್ಯ, ಪೋಷಕರಾದ ಶ್ರೀಧರ್ ಭಟ್ ನೆಲ್ಲಿಕಟ್ಟೆ, ಸರ್ವೋದಯ
ಶೆಟ್ಟಿಗಾರ್, ಭುವನ ಪ್ರಸಾದ್ ಹೆಗ್ಡೆ
ಮಣಿಪಾಲ ಇವರು ವೇದಿಕೆಯಲ್ಲಿ ಉಪಸ್ಥಿತಲಿರುವರು.
ಈ ಸಂದರ್ಭದಲ್ಲಿ ಗಣಪತಿ ವಿಗ್ರಹ ತಯಾರಕರಾದ ದೇವರಾಜ್ ನಾಯಕ್ ಸಣ್ಣಕ್ಕಿಬೆಟ್ಟು ಹಾಗೂ ಸೃಜನಶೀಲ ಛಾಯಾಗ್ರಾಹಕರಾದ
ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ನಿಧೀಶ್ ಕುಮಾರ್ ಪರ್ಕಳ ಇವರನ್ನು ಸನ್ಮಾನಿಸಲಾಗುವುದು.
ಸಂಜೆ
6.15ಕ್ಕೆ ಶ್ರೀ ಮಹಾಲಿಂಗೇಶ್ವರ ನಾಟ್ಯ
ತಂಡ ಮರ್ಣೆ ಇದರ ಕಲಾವಿದರಿಂದ ದೀಕ್ಷಾ
ಗುಂಡುಪಾದೆ ಇವರ ನಿರ್ದೇಶನದಲ್ಲಿ 'ಧರೆಗಿಳಿದ
ಜಗನ್ಮಾತೆ' ಎಂಬ ವಿಭಿನ್ನ ಭಕ್ತಿಪ್ರದಾನ
ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ಹಾಗೂ ರಾತ್ರಿ 7.15ಕ್ಕೆ
ಡೆನ್ನಾನ ಕಲಾವಿದರು ಕಾರ್ಕಳ ಇದರ ಕಲಾವಿದರಿಂದ ತುಳು
ಜಾನಪದ ಶೈಲಿಯ ಹಾಸ್ಯಮಯ ನಾಟಕ 'ಡೆನ್ನಾನ' ಪ್ರದರ್ಶನಗೊಳ್ಳಲಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


