ಶನೈಶ್ಚರ ಜಯಂತಿ

Upayuktha
0



ಸಾಮಾನ್ಯವಾಗಿ ಜನರಲ್ಲಿ ಶನಿದೇವರು ಎಂದರೆ ಕ್ರೂರವಾದವ ಮತ್ತು ಸದಾಕಾಲ ಕಾಟ ಕೊಡಲು ಬರುವ ದೇವತೆ ಎಂಬ ತಪ್ಪು ಕಲ್ಪನೆ ಇದೆ. ಸೂರ್ಯ ಮಂಡಲದ ಒಂಭತ್ತು ಗ್ರಹಗಳಲ್ಲಿ ಶನಿ ಕೂಡ ಒಂದು ಗ್ರಹ. ಶನಿ ದೇವನ ತಂದೆ ಪ್ರಖರವಾದ ಕಿರಣಗಳಿಂದ ಜಗತ್ತಿಗೆಲ್ಲಾ ಬೆಳಕನ್ನು ನೀಡುವ ಸೂರ್ಯದೇವ ಮತ್ತು ಅವನ ತಾಯಿ ಛಾಯೆ. ಸೂರ್ಯದೇವನು ಮದುವೆಯಾಗಿದ್ದು ಸಂಧ್ಯಾ ದೇವಿಯನ್ನು ಅವಳಿಗೆ ಪತಿಯ ಶಾಖವನ್ನು ತಡೆಯಲಾಗದೇ ತನ್ನ ಛಾಯೆಯನ್ನು ತನ್ನ ಜಾಗದಲ್ಲಿಟ್ಟು ಭೂ ಲೋಕಕ್ಕೆ ಹೋಗಿ ತಪಸ್ಸನ್ನು ಆಚರಿಸಲು ಆರಂಭಿಸಿದಳು. ಸಂಧ್ಯಾ ದೇವಿಯ ಛಾಯೆಯೊಂದಿಗೆ ಸಂಸಾರ ಮಡುತ್ತಾ ಸೂರ್ಯದೇವನಿಗೆ ಹುಟ್ಟಿದವನೇ ಶನೈಶ್ಚರ. ವೈಶಾಖ ಮಾಸದ ಅಮಾವಾಸ್ಯೆಯಂದೆ ಶನಿದೇವರು ಹುಟ್ಟಿದ್ದು ಅಂದೇ ಶನಿ ಜಯಂತಿ ಆಚರಿಸಲಾಗುತ್ತದೆ.


ಶನಿ ದೇವರು ನೋಡಲು ಕಪ್ಪು, ಅವನ ವಾಹನ ಕಾಗೆ ಮತ್ತು ಅವನ ದೃಷ್ಟಿ ವಕ್ರ ಎಂಬ ನಂಬಿಕೆ ಇದೆ. ಯಾರ ಮೇಲೆ ದೃಷ್ಟಿಯು  ಬೀಳುತ್ತದೆಯೋ ಅವರಿಗೆ ಕಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಶನಿ ದೇವರು ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರಣೆ ಮಾಡುವವ, ದೇವರಲ್ಲಿ ಭಕ್ತಿಯನ್ನು ಉಂಟು ಮಾಡುವವ. ಮನುಷ್ಯ ಸುಖವಾಗಿ ಇದ್ದಾಗ ದೇವರನ್ನು ಮರೆತು ಬಿಡುತ್ತಾನೆ ಶನಿ ದೇವರು ಮನುಷ್ಯರು ದೇವರನ್ನು ಮರೆಯದೇ ಅವನ ಕೃಪೆಗೆ ಪಾತ್ರರಾಗಲೀ ಎಂದು ಅವರ ಕರ್ಮಗಳಿಗೆ ಅನುಸಾರವಾಗಿ ತೊಂದರೆಯನ್ನು ಕೊಡುತ್ತಾ ಅವರನ್ನು ಧರ್ಮ ಮಾರ್ಗಕ್ಕೆ ತರುತ್ತಾನೆ.


ಶನಿ ದೇವನಿಗೆ ನೀಲ ಮತ್ತು ಮಂದಾ ಎಂಬ ಇಬ್ಬರು ಪತ್ನಿಯರಿರುತ್ತಾರೆ. ಶನಿಯ ಪ್ರಕೋಪಕ್ಕೆ ತುತ್ತಾದವರಿಗೆ ಮತ್ತು ಶನಿಯ ಅನುಗ್ರಹ ಬೇಕದವರಿಗೆ ನೀಲಮಣಿಯನ್ನು ಧರಿಸಬೇಕೆಂದು ಹೇಳುತ್ತಾರೆ. ಶನಿ ದೇವರಿಗೆ ಎಳ್ಳು ಮತ್ತು ಎಳ್ಳಿನ ಪದಾರ್ಥಗಳು ಪ್ರೀತಿ ಅದಕ್ಕೆಂದೇ ಶನಿ ದೇವರಿಗೆ ಎಳ್ಳೆಣ್ಣೆ ದೀಪವನ್ನು ಹಚ್ಚಿ ಎಳ್ಳಿನ ಚಿತ್ರಾನ್ನವನ್ನು ನೈವೇದ್ಯ ಮಾಡುತ್ತಾರೆ.


ಶನಿವಾರವು ಶನಿದೇವನ ವಾರ ಶನಿಯ ಚಲನ ನಿಧಾನಗತಿ ಇರುವುದರಿಂದ ಸ್ಥಿರವಾಸರ ಎಂದೂ ಕರೆಯಲಾಗುತ್ತದೆ. ಶನಿಕಾಟವು 2ವರೆ ವರ್ಷ 7ವರೆ ವರ್ಷಗಳು ಇರುತ್ತವೆ. ಪಂಚಮ ಶನಿ, ಅಷ್ಟಮ ಶನಿ, ದ್ವಾದಶ ಶನಿ ಹಾಗೂ ಸಾಡೇ ಸಾತಿ ಎಂಬುದಾಗಿ ಇರುತ್ತವೆ. ಆ ಸಮಯದಲ್ಲಿ ಕಷ್ಟಗಳು ಹೆಚ್ಚು ಬಂದರೂ ಕೂಡ ನಿರಂತರ ದೇವರ, ಪ್ರಾಣದೇವರ ಹಾಗೂ ಶನೈಶ್ಚರನ ಪೂಜೆ ಮಾಡಿದಾಗ ಆ ಸಮಸ್ಯೆಗಳು ಪರಿಹಾರವಾಗುತ್ತವೆ. 


ಶನಿ ಸ್ತುತಿ:

ನೀಲಾಂಜನ ಸಮಭಾಸಂ ರವಿಪುತ್ರಂ ಯಮಾಗ್ರಜಂ | ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ||


- ಮಾಧುರಿ ದೇಶಪಾಂಡೆ, ಬೆಂಗಳೂರು

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top