ಬಂಟ್ವಾಳದ ಹಲವೆಡೆ ಸಿಡಿಲಿನ ಅಬ್ಬರ: ಇಳಿಯೂರು, ಕಾರಿಂಜೇಶ್ವರ ದೇವಸ್ಥಾನಗಳಿಗೆ ಹಾನಿ

Upayuktha
0


ಬಂಟ್ವಾಳ: ಬಂಟ್ವಾಳ ತಾಲೂಕಿನ ಕೆಲವೆಡೆ ಇಂದು ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲಿನ ಅಬ್ಬರ ಜೋರಾಗಿತ್ತು. ಮಣಿನಾಲ್ಕೂರು ಗ್ರಾಮದಲ್ಲಿರುವ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಗರ್ಭಗುಡಿಯ ಪ್ರಾಕಾರಕ್ಕೆ ಸಿಡಿಲು ಬಡಿದು ಹಾನಿಯಾದ ಘಟನೆ ಶನಿವಾರ ಸಂಜೆ ಸಂಭವಿಸಿದೆ. ನಾಲ್ಕು ವರ್ಷಗಳ ಹಿಂದಷ್ಟೇ ದೇವಸ್ಥಾನ ನವೀಕರಣಗೊಂಡು ಅದ್ದೂರಿಯ ಬ್ರಹ್ಮಕಲಶೋತ್ಸವ ನೆರವೇರಿತ್ತು. ಸಿಡಿಲಾಘಾತದಿಂದ ಅಪಾರ ಆರ್ಥಿಕ ನಷ್ಟ ಸಂಭವಿಸಿದೆ.


ಸಂಜೆ ಸುಮಾರು 4ರಿಂದ 4.30ರ ವೇಳೆ ಸುರಿದ ಗಾಳಿ, ಮಳೆ ವೇಳೆ ಸಿಡಿಲು ದೊಡ್ಡ ಪ್ರಮಾಣದಲ್ಲಿ ಬಂದೆರಗಿದೆ. ಇದರ ರಭಸಕ್ಕೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಗರ್ಭಗುಡಿಯ ಮೇಲಿನ ಪ್ರಾಕಾರದ ಶಿಲಾಕಲ್ಲು ಛಿದ್ರಗೊಂಡಿದ್ದು, ನೆಲಕ್ಕೆರಗಿದೆ.


ಕಾರಿಂಜದ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲೂ ಸಿಡಿಲು ಹೊಡೆದು ಹಾನಿ ಸಂಭವಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
To Top