ಶ್ರೀ ಕ್ಷೇತ್ರ ಶಂಕರಪುರ ಅನ್ನದಾಹ ಕಿಟ್ ಯೋಜನೆಗೆ ಚಾಲನೆ

Upayuktha
0

 


ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ದ್ವಾರಕಾಮಯಿ ಮಠ ಇದರ 7ನೇ ಮಹತ್ವದ ಸೇವಾ ಯೋಜನೆ ಸಾಯಿ ಅನ್ನದಾಹ ಕಿಟ್ ವಿತರಣೆಗೆ ಮಂದಿರದಲ್ಲಿ ಮೇ.14 ಗುರುವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ , ಮಠ ಮಂದಿರಗಳು ಆಧ್ಯಾತ್ಮ ಮತ್ತು ಸಮಾಜಮುಖಿ ಕೇಂದ್ರಗಳಾಗಬೇಕು, ನಿಟ್ಟಿನಲ್ಲಿ ಸಾಯಿ ಮುಖ್ಯಪ್ರಾಣ ದೇವಸ್ಥಾನ ವತಿಯಿಂದ ನಡೆಯುತ್ತಿರುವ ಅಪೂರ್ವವಾದ ಸೇವಾ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.

ಶ್ರೀ ಕ್ಷೇತ್ರ ಶಂಕರಪುರ ಏಕ ಜಾತಿ ಧರ್ಮ ಪೀಠದ ಪೀಠಾಧ್ಯಕ್ಷರಾದ ಶ್ರೀ ಸಾಯಿ ಈಶ್ವರ್ ಗುರೂಜಿ ಮಾತನಾಡಿ ನಮ್ಮ ಸಮಾಜದಲ್ಲಿ ಅನೇಕ ಮಂದಿ ಎರಡು ಹೊತ್ತಿನ ಊಟಕ್ಕೂ ಕಷ್ಟಪಡುವ ಜನರಿದ್ದಾರೆ ಇವರನ್ನು ಗುರುತಿಸಿ ಕ್ಷೇತ್ರದ ವತಿಯಿಂದ ಅವರಿಗೆ ತಿಂಗಳಿಗೆ ಬೇಕಾದ ಅಕ್ಕಿ ಸೇರಿದಂತೆ ದಿನಸಿ ಸಾಮಗ್ರಿಗಳನ್ನು ನೀಡಲಾಗುತ್ತದೆ ಸೇವಾ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಶಂಕರಪುರ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ, ಟ್ರಸ್ಟಿಗಳಾದ ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಸಮಾಜಸೇವಕ ಪ್ರಶಾಂತ್ ಪೂಜಾರಿ ಕಾಪು, ಕ್ಷೇತ್ರದ ಹಿತೈಷಿಗಳಾದ ರಾಮಣ್ಣ ಪೂಜಾರಿ, ವಿಜಯ್ ಕುಂದರ್, ರಾಘವೇಂದ್ರ ಪ್ರಭು ಕವಾ೯ಲು ಮುಂತಾದವರು ಉಪಸ್ಥಿತರಿದ್ದರು. ಸಂದರ್ಭದಲ್ಲಿ ಬಡ ಕುಟುಂಬದ ವಿದ್ಯಾರ್ಥಿನಿಗೆ ಶಿಕ್ಷಣ  ದತ್ತು ಸ್ವೀಕಾರ ಸೇರಿದಂತೆ , ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರದ ಭಕ್ತರು, ಸಿಬ್ಬಂದಿಗಳು ಉಪಸ್ಥಿತರಿದ್ದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top