ಯೂಥ್ ಕಾಂಗ್ರೆಸ್ ಅಧ್ಯಕ್ಷ ದೇವರಹಳ್ಳಿ ಮಹೇಂದ್ರ ಹುಟ್ಟುಹಬ್ಬ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Upayuktha
0




ಕೆ.ಆರ್.ಪೇಟೆ: ಮಂಡ್ಯ ಜಿಲ್ಲಾ ಸಹಕಾರ ಯೂನಿಯನ್ ನೂತನ ನಿರ್ದೇಶಕ ಹಾಗೂ ಕಾಂಗ್ರೆಸ್ ಯೂತ್ ಅಧ್ಯಕ್ಷ ದೇವರಹಳ್ಳಿ ಮಹೇಂದ್ರ ಕಅವರ ಹುಟ್ಟುಹಬ್ಬ ಅಂಗವಾಗಿ ಕೆ.ಆರ್.ಪೇಟೆ ತಾಲೂಕು ಯೂತ್ ಕಾಂಗ್ರೆಸ್ ವತಿಯಿಂದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಕೆ.ಆರ್.ಪೇಟೆ ತಾಲೂಕು ಸರ್ಕಾರಿ ಆಸ್ಪತ್ರೆಯ ಹೊರರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಲಾಯಿತು.


ಬಳಿಕ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ದೀಪಕ್ ಗೌಡ, ಪಕ್ಷ ಸಂಘಟನೆಯಲ್ಲಿ ಅಪಾರ ನಿಷ್ಠೆ, ಚತುರತೆಯಿಂದ ಕಾರ್ಯನಿರ್ವಹಿಸುತ್ತಿರುವ ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಆಶಯದಂತೆ ಪ್ರತಿ ವರ್ಷದಂತೆ ಹುಟ್ಟುಹಬ್ಬವನ್ನು ಸಮಾಜ ಸೇವೆ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಬೂತ್ ಸಮಿತಿ ಬಲಪಡಿಸುವ ನಿಟ್ಟಿನಲ್ಲಿ, ಸದಸ್ಯತ್ವ ಅಭಿಯಾನ, ಪಕ್ಷದ ಸಿದ್ಧಾಂತ-ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸುವುದು ಜವಾಬ್ದಾರಿ ಜೊತೆಗೆ ಮಹೇಂದ್ರ ಅವರ ಸರಳತೆ ಅವರಂತಹ ನಿಷ್ಠಾವಂತ ನಾಯಕರ ನೇತೃತ್ವವೇ ಸಂಘಟನೆಯ ಶಕ್ತಿಯಾಗಿದ್ದಾರೆ. ಹಾಗಾಗಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇನೆ ಎಂದರು.


ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಕೆ.ಆರ್.ಪೇಟೆ ಟೌನ್ ಅಧ್ಯಕ್ಷ ಹೊಸಹೊಳಲು ಪ್ರವೀಣ್, ಕಸಬಾ ಹೋಬಳಿ ಯೂತ್ ಅಧ್ಯಕ್ಷ ಕೊಮ್ಮೆನಹಳ್ಳಿ ಅನಿಲ್,ಹೊಸಹೊಳಲು ಅಜಯ್, ನಾಗೇಶ್ ನಾಯ್ಕ, ಅಕ್ಕಿಹೆಬ್ಬಾಳು ಸಾಗರ್, ಹರಿಹರಪುರ ಮುತ್ತು, ಅಪ್ಪು, ಗಿರೀಶ್ ಸೇರಿದಂತೆ ಉಪಸ್ಥಿತರಿದ್ದರು




إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top