ಮಂಗಳೂರು:
ನಗರದ ನಂತೂರಿನ ಶ್ರೀ ಭಾರತೀ ಸಮೂಹ
ಸಂಸ್ಥೆಗಳ ಆವರಣದಲ್ಲಿ ಜೂನ್ 6 ಮತ್ತು 7 ರಂದು ಎರಡು ದಿನಗಳ
ಕಾಲ ವೈವಿಧ್ಯಮಯ 'ಹಲಸುಮೇಳ- ಆಹಾರೋತ್ಸವ' ಮತ್ತು ಸಾಂಸ್ಕೃತಿಕ ವೈಭವವನ್ನು ಆಯೋಜಿಸಲಾಗಿದೆ.
ಕರಾವಳಿಯ
ಜನರಿಗೆ ಹಲಸು, ಮಾವು ಹಾಗೂ ತಾಜಾ
ತರಕಾರಿಗಳ ಸವಿಯನ್ನು ಉಣಬಡಿಸುವ ನಿಟ್ಟಿನಲ್ಲಿ ಈ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು,
ಈ ಬಾರಿ ಸಾರ್ವಜನಿಕರಿಗಾಗಿ ಹಲವು
ವಿಶೇಷ ಆಕರ್ಷಣೆಗಳನ್ನು ಒಳಗೊಂಡಿದೆ.
ವಿವಿಧ
ತಳಿಯ ಹಣ್ಣುಗಳು ಮತ್ತು ತರಕಾರಿ ಮಾರಾಟ
ಈ ಬಾರಿಯ ಮೇಳದಲ್ಲಿ ಕೇವಲ ಹಲಸು ಮಾತ್ರವಲ್ಲದೆ,
ಮಾವಿನ ಹಣ್ಣಿನ ಪ್ರಿಯರಿಗಾಗಿ ಮಲ್ಲಿಕಾ, ದಶ್ಹೇರಿ ಸೇರಿದಂತೆ ವಿವಿಧ ತಳಿಯ ಉತ್ಕೃಷ್ಟ ಗುಣಮಟ್ಟದ
ಮಾವಿನಹಣ್ಣುಗಳು ಲಭ್ಯವಿರಲಿವೆ. ಇದರೊಂದಿಗೆ ಗ್ರಾಹಕರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಮಲೆನಾಡಿ ತಾಜಾ ತರಕಾರಿಗಳ ವಿಶೇಷ
ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸ್ಥಳದಲ್ಲೇ
ಬಿಸಿಬಿಸಿ ಆಹಾರ ತಯಾರಿ: ತೆಂಗಿನೆಣ್ಣೆಯ ವಿಶೇಷತೆ
ಆಹಾರ
ಪ್ರಿಯರಿಗಾಗಿ ಮೇಳದ ಆವರಣದಲ್ಲೇ ಬಿಸಿಬಿಸಿಯಾದ
ದೋಸೆ, ರೊಟ್ಟಿ, ಬೋಂಡಾ ಹಾಗೂ ಜಿಲೇಬಿ ಸೇರಿದಂತೆ
ಹತ್ತಾರು ಬಗೆಯ ತಿಂಡಿ-ತಿನಿಸುಗಳನ್ನು
ಸ್ಥಳದಲ್ಲೇ ಸಿದ್ಧಪಡಿಸಿ ನೀಡಲಾಗುತ್ತದೆ. ಸಾರ್ವಜನಿಕರ ಆರೋಗ್ಯ ಮತ್ತು ಸಾಂಪ್ರದಾಯಿಕ ರುಚಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಎಲ್ಲಾ ಆಹಾರ ಪದಾರ್ಥಗಳ ತಯಾರಿಕೆಗೆ
ಕೇವಲ ಶುದ್ಧ ತೆಂಗಿನೆಣ್ಣೆಯನ್ನು ಮಾತ್ರ ಬಳಸುತ್ತಿರುವುದು ಈ ಬಾರಿಯ ಆಹಾರೋತ್ಸವದ
ಪ್ರಮುಖ ವಿಶೇಷತೆಯಾಗಿದೆ. ಗುಣಮಟ್ಟಕ್ಕೆ ಇಲ್ಲಿ ಮೊದಲ ಆದ್ಯತೆ ನೀಡಲಾಗಿದೆ
ಎಂದು ಸಂಘಟಕರು ತಿಳಿಸಿದ್ದಾರೆ.
ಸಾಂಸ್ಕೃತಿಕ
ವೈಭವ
ಆಹಾರ
ಮತ್ತು ಕೃಷಿ ಮೇಳಕ್ಕೆ ಪೂರಕವಾಗಿ
ಎರಡು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ
ಕಾರ್ಯಕ್ರಮಗಳು ಜರುಗಲಿವೆ. ನಂತೂರಿನ ಶ್ರೀ ಭಾರತೀ ಸಮೂಹ
ಸಂಸ್ಥೆಗಳ 'ಶಂಕರಶ್ರೀ' ಸಭಾಂಗಣದಲ್ಲಿ ಈ ಸಾಂಸ್ಕೃತಿಕ ಸೌರಭ
ಅನಾವರಣಗೊಳ್ಳಲಿದ್ದು, ಕರಾವಳಿಯ ಕಲಾಭಿಮಾನಿಗಳಿಗೆ ರಸದೌತಣ ನೀಡಲಿದೆ.
ಜೂನ್
6ರ ಶನಿವಾರ ಮತ್ತು ಜೂನ್ 7ರ ಆದಿತ್ಯವಾರ ನಡೆಯಲಿರುವ
ಈ ಅಪರೂಪದ ಕೃಷಿ ಮತ್ತು ಆಹಾರದ
ಹಬ್ಬಕ್ಕೆ ಮಂಗಳೂರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಣೆ ಕೋರಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


