ಜೂ. 4-13 ರವರೆಗೆ ‘ಮ್ಯಾವೆರಿಕ್ಸ್ ಸಮರ್ ನ್ಯಾಷನಲ್ಸ್ 2026’ ಬ್ರಿಡ್ಜ್ ಪಂದ್ಯಾವಳಿ

Upayuktha
0

 


 

ಮಂಗಳೂರು: ಪ್ರತಿಷ್ಠಿತಮ್ಯಾವೆರಿಕ್ಸ್ ಸಮರ್ ನ್ಯಾಷನಲ್ಸ್ 2026’ (Mavericks Summer Nationals 2026) ಬ್ರಿಡ್ಜ್ ಪಂದ್ಯಾವಳಿಯು 2026 ಜೂನ್ 4 ರಿಂದ ಜೂನ್ 13 ರವರೆಗೆ ಮಂಗಳೂರಿನ ಸೆಂಟ್ ಸೆಬಾಸ್ಟಿಯನ್ ಸೆಂಟಿನರಿ ಸಭಾಂಗಣದಲ್ಲಿ ನಡೆಯಲಿದೆ. ಪಂದ್ಯಾವಳಿಯನ್ನು ಭಾರತೀಯ ಬ್ರಿಡ್ಜ್ ಫೆಡರೇಷನ್ (Bridge Federation of India) ಮತ್ತು ಕರ್ನಾಟಕ ರಾಜ್ಯ ಬ್ರಿಡ್ಜ್ ಅಸೋಸಿಯೇಷನ್ ತತ್ವಾವಧಾನದಲ್ಲಿ, ಮಂಗಳೂರಿನ ಕರಾವಳಿ ಬ್ರಿಡ್ಜ್ ಅಸೋಸಿಯೇಷನ್ ಆಯೋಜಿಸಿದೆ.


ಪ್ರತಿಷ್ಠಿತ ವಾರ್ಷಿಕ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಭಾರತದಾದ್ಯಂತ ಹಾಗೂ ಪೋಲೆಂಡ್ನಿಂದ ವಿಶ್ವ ಚಾಂಪಿಯನ್ ಆಗಿರುವ ಶ್ರೀ ಬುರಾಸ್ ಕ್ರಿಸ್ತೋಫ್ ಜೆರ್ಜಿ, ಶ್ರೀ ಡೊಮಿನಿಕ್ ಫಿಲೋಪೋವಿಚ್, ಶ್ರೀ ಜಾಕೋಬ್ ಪಾತ್ರೆಹುವಾ ಮತ್ತು ಶ್ರೀ ಪ್ಯಾಟ್ರಿಕ್ ಪಾತ್ರೆಹುವಾ ಸೇರಿದಂತೆ ಸುಮಾರು 450ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕ್ರೀಡಾಕೂಟವು ಮಂಗಳೂರನ್ನು ಭಾರತದ ಮತ್ತು ವಿಶ್ವದ ಬ್ರಿಡ್ಜ್ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದೆ. ಮಂಗಳೂರಿನ ಉತ್ತಮ ವಿಮಾನ ಹಾಗೂ ರೈಲು ಪ್ರಯಾಣದ ಸಂಪರ್ಕ ವ್ಯವಸ್ಥೆ, ಅತ್ಯುತ್ತಮ ಆತಿಥ್ಯ ಮತ್ತು ಇಲ್ಲಿನ ವೈವಿಧ್ಯಮಯ ರುಚಿಕರವಾದ ಆಹಾರ ಪದ್ಧತಿಯು, ಭಾರತೀಯ ಬ್ರಿಡ್ಜ್ ಫೆಡರೇಷನ್ ರಾಷ್ಟ್ರೀಯ ಪಂದ್ಯಾವಳಿಯನ್ನು ಇಲ್ಲಿಯೇ ನಡೆಸಲು ಸೂಕ್ತ ಆಯ್ಕೆಯಾಗಿದೆ.

  

ಪಂದ್ಯಾವಳಿಯ ಯಶಸ್ಸಿಗಾಗಿ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಡೆರೆಕ್ ರೇಗೊ ಅವರು ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕರಾವಳಿ ಬ್ರಿಡ್ಜ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀಮತಿ ಮಾರ್ಜೋರಿ ಟೆಕ್ಸೇರಾ ಅವರು ಮಾತನಾಡಿ, "ಮನಸ್ಸಿನ ಆಟವಾಗಿರುವ (ಮೈಂಡ್ ಸ್ಪೋರ್ಟ್) ‘ಬ್ರಿಡ್ಜ್ಕ್ರೀಡೆಯನ್ನು ಮಂಗಳೂರಿನಲ್ಲಿ ಕಳೆದ 60 ವರ್ಷಗಳಿಂದ ಆಡಲಾಗುತ್ತಿದೆ. ಆದರೆ ಪ್ರಸ್ತುತ ತಲೆಮಾರಿನ ಯುವಕರು ಕ್ರೀಡೆಯನ್ನು ಕಲಿಯಲು ಹೆಚ್ಚಿನ ಆಸಕ್ತಿ ತೋರಿಸದ ಕಾರಣ, ಮಂಗಳೂರಿನಲ್ಲಿ ಇದರ ಆಟಗಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆಟವು ಏಷ್ಯನ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಭಾಗವಾಗಿರುವುದರಿಂದ, ನಗರದ ಯುವಜನತೆ ಇದನ್ನು ಕಲಿಯಲು ಮತ್ತು ಆಡಲು ಆಸಕ್ತಿ ವಹಿಸುತ್ತಾರೆ ಎಂದು ನಂಬಿದ್ದೇನೆ," ಎಂದು ಆಶಯ ವ್ಯಕ್ತಪಡಿಸಿದರು.

 

 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top