ಮಂಗಳೂರಿನಲ್ಲಿ ಜೆಎಲ್‌ಆರ್ ಇಂಡಿಯಾದ ನೂತನ ಮಳಿಗೆ ಉದ್ಘಾಟನೆ

Upayuktha
0



ಮಂಗಳೂರು, ಮೇ 5: "ಐಷಾರಾಮಿ ಕಾರುಗಳ ವಿಭಾಗದಲ್ಲಿ ಮಂಗಳೂರು ದಕ್ಷಿಣ ಭಾರತದ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ಇಲ್ಲಿ ನಮ್ಮ ನೂತನ ಘಟಕವನ್ನು ಆರಂಭಿಸಲು ನಮಗೆ ಸಂತೋಷವಾಗಿದೆ. ಕರ್ನಾಟಕದಲ್ಲಿ ಮತ್ತು ಈ ಭಾಗದಲ್ಲಿ ನಮ್ಮ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಹೆಜ್ಜೆ ಇಟ್ಟಿದ್ದೇವೆ" ಎಂದು ಪ್ರತಿಷ್ಠಿತ ಐಷಾರಾಮಿ ಕಾರು ತಯಾರಿಕಾ ಸಂಸ್ಥೆಯಾದ ಜೆಎಲ್‌ಆರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜನ್ ಅಂಬಾ ಅವರು ತಿಳಿಸಿದ್ದಾರೆ.


ಮಂಗಳೂರಿನ ಕೊಟ್ಟಾರದಲ್ಲಿರುವ ಜೆಎಲ್‌ಆರ್ ಇಂಡಿಯಾದ ಸೇವಾ ಮತ್ತು ಬಿಡಿಭಾಗಗಳ ಕೇಂದ್ರದ ಪಕ್ಕದಲ್ಲೇ ಸಂಸ್ಥೆಯು ತನ್ನ ಈ ನೂತನ 'ಮಾಡರ್ನ್ ಲಕ್ಸುರಿ' ಮಾರಾಟ ಕೇಂದ್ರವನ್ನು ಉದ್ಘಾಟಿಸಿದ್ದು, ಈ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.


ಈ ಅತ್ಯಾಧುನಿಕ ಮಳಿಗೆಯ ಮೂಲಕ ಗ್ರಾಹಕರಿಗೆ ಮಾರಾಟ ಮತ್ತು ಸೇವೆ ಎರಡೂ ಒಂದೇ ಕಡೆ ಲಭ್ಯವಾಗಲಿದ್ದು, ಸಮಗ್ರ ಅನುಭವ ನೀಡಲಿದೆ. ಈ ಹೊಸ ಕೇಂದ್ರದೊಂದಿಗೆ ಜೆಎಲ್‌ಆರ್ ಇಂಡಿಯಾದ ವಿತರಣಾ ಜಾಲವು ಈಗ ದೇಶದ 22 ನಗರಗಳಲ್ಲಿ ಒಟ್ಟು 28 ಮಳಿಗೆಗಳಿಗೆ ಬೆಳೆದಂತಾಗಿದೆ.


ಪಾಪ್ಯುಲರ್ ಆಟೋವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ, ಮಾರ್ಕ್‌ಲ್ಯಾಂಡ್ ಅಡಿಯಲ್ಲಿ ಈ ಮಳಿಗೆ ಕಾರ್ಯಾಚರಿಸಲಿದೆ. ಇಲ್ಲಿ ರೇಂಜ್ ರೋವರ್, ಡಿಫೆಂಡರ್ ಮತ್ತು ಡಿಸ್ಕವರಿ ಬ್ರ್ಯಾಂಡ್‌ ಗಳ ಎಲ್ಲಾ ಮಾದರಿಯ ಕಾರುಗಳು ಪ್ರದರ್ಶನಕ್ಕಿರಲಿವೆ. ಇದರೊಂದಿಗೆ ಕಂಪನಿಯ ಬ್ರ್ಯಾಂಡೆಡ್ ಸರಕುಗಳು ಮತ್ತು ಪರಿಶೀಲಿಸಲ್ಪಟ್ಟ ಹಳೆಯ ಕಾರುಗಳ ಮಾರಾಟಕ್ಕೂ ಅವಕಾಶವಿದೆ. ನುರಿತ ತಂತ್ರಜ್ಞರನ್ನು ಒಳಗೊಂಡ ಸುಸಜ್ಜಿತ ಸರ್ವಿಸ್ ವರ್ಕ್‌ಶಾಪ್ ಈ ಕೇಂದ್ರದ ಪ್ರಮುಖ ಆಕರ್ಷಣೆಯಾಗಿದೆ.


ಈ ಕುರಿತು ರಾಜನ್ ಅಂಬಾ ಅವರು, "ಮಾರ್ಕ್‌ಲ್ಯಾಂಡ್ ಸಮೂಹದ ಸಹಯೋಗದೊಂದಿಗೆ ಈ ಕೇಂದ್ರವು ಗ್ರಾಹಕರಿಗೆ ಜಾಗತಿಕ ಗುಣಮಟ್ಟದ ಸೇವೆಯನ್ನು ನೀಡಲಿದ್ದು, ಅತ್ಯಾಧುನಿಕ ಹಾಗೂ ಆಕರ್ಷಕ ಪರಿಸರದಲ್ಲಿ ಕಂಪನಿಯ ಸಂಪೂರ್ಣ ಉತ್ಪನ್ನ ಶ್ರೇಣಿಯನ್ನು ಪರಿಚಯಿಸಲಿದೆ" ಎಂದು ಹೇಳಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top