ಪುತ್ತೂರು:
ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಇನೋವೇಶನ್ ಹಬ್ – ಸೆಂಟರ್ ಫಾರ್ ಇನೋವೇಶನ್ ಅಂಡ್
ಎಂಟ್ರಪ್ರಿನರ್ಶಿಪ್ (CIE) ಹಾಗೂ ನ್ಯೂ ಏಜ್
ಇಂಕ್ಯೂಬೇಷನ್ ನೆಟ್ವರ್ಕ್ ಸಹಯೋಗದಲ್ಲಿ
ಮೂರು ದಿನಗಳ ಕಾಲ ನಡೆಯಲಿರುವ “ಐಡಿಯೇಶನ್
ಬೂಟ್ಕ್ಯಾಂಪ್ 2026” ಕಾರ್ಯಕ್ರಮಕ್ಕೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಭವನದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ
ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ
ಮೆಡೋರಾ ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಹ್ಯೂಮನಾಯ್ಡ್ ಎಐ
ಸಂಸ್ಥೆಯ ಸಹ-ಸ್ಥಾಪಕರಾದ ಉರೂಜ್
ಅಖ್ತರ್ ಖಾನ್ ಭಾಗವಹಿಸಿದರು. ಅವರು
ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಡಿಜಿಟಲ್ ಹೆಲ್ತ್ಕೇರ್ ಹಾಗೂ ಸ್ಟಾರ್ಟ್ಅಪ್ ಕ್ಷೇತ್ರಗಳಲ್ಲಿ ಉದಯೋನ್ಮುಖ
ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಉಪನ್ಯಾಸ ನೀಡಿದರು. ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ
ತರುವ ಧೈರ್ಯ, ಸಮಸ್ಯೆಗಳನ್ನು ಗುರುತಿಸಿ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ರೂಪಿಸುವ ಮನೋಭಾವ ಹಾಗೂ ಉದ್ಯಮಶೀಲತೆಯ ಮಹತ್ವವನ್ನು
ವಿವರಿಸಿದರು.
ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆ್ಯಂಟನಿ ಪ್ರಕಾಶ್
ಮೊಂತೇರೊ ಮಾತನಾಡಿ ತಂತ್ರಜ್ಞಾನವನ್ನು
ಕೇವಲ ಕಲಿಯುವುದಕ್ಕಷ್ಟೇ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯುಕ್ತವಾಗುವ ಹೊಸ ಆವಿಷ್ಕಾರಗಳತ್ತ ಗಮನಹರಿಸಬೇಕು
ಸಮಾಜಕ್ಕೆ ಕೊಡುಗೆ ನೀಡುವಂತಹ ಸಕಾರಾತ್ಮಕ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು. Think Big.
Innovate Bold. Build the Future ಎಂಬ
ಧ್ಯೇಯವಾಕ್ಯವು ಕಾಲೇಜಿನ ನವೀನತೆ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ
ಧೋರಣೆಗೆ ಸಂಪೂರ್ಣ ಹೊಂದಿಕೆಯಾಗಿದ್ದು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ
ಸೃಜನಶೀಲ ಚಿಂತನೆ, ನಾಯಕತ್ವ ಗುಣಗಳು ಹಾಗೂ ಭವಿಷ್ಯಮುಖಿ ದೃಷ್ಟಿಕೋನವನ್ನು
ಬೆಳೆಸಲು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಮೂರು
ದಿನಗಳ ಕಾಲ ನಡೆಯಲಿರುವ ಬೂಟ್ಕ್ಯಾಂಪ್ನಲ್ಲಿ ವಿದ್ಯಾರ್ಥಿಗಳಿಗಾಗಿ ಐಡಿಯಾ ಪಿಚಿಂಗ್, ಮೆಂಟರಿಂಗ್, ಸ್ಟಾರ್ಟ್ಅಪ್ ಮಾರ್ಗದರ್ಶನ, ನವೀನತೆಯ
ಕಾರ್ಯಾಗಾರಗಳು ಹಾಗೂ ಸಂವಾದಾತ್ಮಕ ಚಟುವಟಿಕೆಗಳನ್ನು
ಆಯೋಜಿಸಲಾಗಿದೆ. ಬಿಸಿಎ, ಬಿಸಿಎ(ಎಐ & ಎಂಲ್), ಬಿಸಿಎ ಡೇಟಾ ಅನಲಿಟಿಕ್ಸ್ ಹಾಗೂ
ಬಿಎಸ್ಸಿ ಡೇಟಾ ಸಯನ್ಸ್ ತರಗತಿಗಳ
100 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.
ಕಾಲೇಜಿನ
ಇನೋವೇಶನ್ ಮತ್ತು ಇನ್ಕ್ಯೂಬೇಷನ್ ಕೇಂದ್ರದ
ಡಿಐಎ ಅಭಿಷೇಕ್
ಸುವರ್ಣ ಸ್ವಾಗತಿಸಿದರು. ನೈನ್
ಯೋಜನಾ ಸಂಯೋಜಕರಾದ ಡಾ| ವಿನಯಚಂದ್ರ ಮೂರು
ದಿನಗಳ ಕಾಲ ನಡೆಯಲಿರುವ ವಿವಿಧ
ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶೋಧನ್ ಪಿ ಜಿ ವಂದಿಸಿದರು.
ಇನ್ಕ್ಯೂಬೇಷನ್ ಕೇಂದ್ರದ ಎಂ ಐ ಸ್
ಕಾರ್ಡಿನೇಟರ್ ಡಾ| ಗೀತಾ ಪೂರ್ಣಿಮಾ
ಕೆ ಕಾರ್ಯಕ್ರಮ ನಿರೂಪಿಸಿದರು. ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಕ್ಷತಾ ಬಿ ಹಾಗೂ ನೀಲಮ್
ಕುಟ್ಟಪ್ಪ ಸಹಕಾರ ನೀಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

