ಪಿಲಿಕುಳ ಪ್ರವೇಶಕ್ಕೆ ಇ-ಟಿಕೇಟಿಂಗ್ ವ್ಯವಸ್ಥೆ ಅಳವಡಿಕೆ

Upayuktha
0


ಮಂಗಳೂರು: ಕರಾವಳಿ ಕರ್ನಾಟಕದ ಪ್ರಮುಖ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಪ್ರವಾಸಿ ತಾಣವಾದ ಪಿಲಿಕುಳ ನಿಸರ್ಗಧಾಮದಲ್ಲಿ ಪ್ರವಾಸಿಗರ ಅನುಕೂಲತೆ, ಸುಗಮ ಪ್ರವೇಶ ವ್ಯವಸ್ಥೆ ಹಾಗೂ ಡಿಜಿಟಲ್ ಸೇವೆಗಳ ವಿಸ್ತರಣೆಯ ಉದ್ದೇಶದಿಂದ ಆಧುನಿಕ ಇ-ಟಿಕೇಟಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಇದುವರೆಗೆ ಪಿಲಿಕುಳದ ವಿವಿಧ ಘಟಕಗಳಿಗೆ ಪ್ರವೇಶ ಕಲ್ಪಿಸಲು ಭೌತಿಕ ಟಿಕೇಟ್ ವ್ಯವಸ್ಥೆಯನ್ನು ಬಳಸಲಾಗುತ್ತಿತ್ತು. ಇದೀಗ ತಂತ್ರಜ್ಞಾನ ಆಧಾರಿತ, ಕಾಗದ ರಹಿತ ಮತ್ತು ವೇಗವಾದ ಟಿಕೇಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗಿದೆ.


ದೇಶದ ಪ್ರಮುಖ ಬ್ಯಾಂಕಿಂಗ್ ಸಂಸ್ಥೆಯಾದ ಕೆನರಾ ಬ್ಯಾಂಕ್ ಇವರ ಪ್ರಾಯೋಜಕತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸ ಲಾಗುತ್ತಿದೆ. ಪ್ರವಾಸಿಗರು ಆನ್‌ಲೈನ್ ಹಾಗೂ ಆಫ್‌ಲೈನ್ ಎರಡೂ ವಿಧಾನಗಳ ಮೂಲಕ ಟಿಕೇಟ್ ಪಡೆಯುವಂತೆ ವ್ಯವಸ್ಥೆ ರೂಪಿಸಲಾಗಿದ್ದು, ಇದರ ಮೂಲಕ ಪ್ರವೇಶ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭ, ಪಾರದರ್ಶಕ ಹಾಗೂ ಸಮಯ ಉಳಿತಾಯವಾಗುವಂತೆ ಮಾಡಲಾಗಿದೆ.


ಈ ಯೋಜನೆಯ ಮೊದಲ ಹಂತವಾಗಿ ಪಿಲಿಕುಳದ ಮುಖ್ಯ ಪ್ರವೇಶ ದ್ವಾರದಲ್ಲಿ ಕಿಯೋಸ್ಟ್ ಆಧಾರಿತ ಕಾಗದ ರಹಿತ ಇ-ಟಿಕೇಟಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಪ್ರವಾಸಿಗರು ಕಿಯೋಸ್ಟ್ ಮೂಲಕ ತ್ವರಿತವಾಗಿ ಟಿಕೇಟ್ ಪಡೆದು ವಿವಿಧ ಘಟಕಗಳಿಗೆ ಪ್ರವೇಶಿಸಬಹುದಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆ, QR ಕೋಡ್ ಆಧಾರಿತ ಟಿಕೇಟಿಂಗ್, ಹಾಗೂ ಸ್ವಯಂ ಸೇವಾ ಸೌಲಭ್ಯಗಳನ್ನು ಒಳಗೊಂಡಿರುವ ಈ ವ್ಯವಸ್ಥೆಯು ಆಧುನಿಕ ಪ್ರವಾಸೋದ್ಯಮ ನಿರ್ವಹಣೆಯತ್ತ ಮಹತ್ವದ ಹೆಜ್ಜೆಯಾಗಿದೆ.


ಇ-ಟಿಕೇಟಿಂಗ್ ವ್ಯವಸ್ಥೆಯ ಅಳವಡಿಕೆಯಿಂದ ಟಿಕೇಟ್ ವಿತರಣೆ ಮತ್ತು ಪರಿಶೀಲನೆ ಪ್ರಕ್ರಿಯೆ ಸುಗಮಗೊಳ್ಳುವುದರ ಜೊತೆಗೆ ಕಾಗದ ಬಳಕೆಯೂ ಕಡಿಮೆಯಾಗಲಿದ್ದು, ಪರಿಸರ ಸಂರಕ್ಷಣೆಯ ದಿಕ್ಕಿನಲ್ಲಿ ಸಹ ಇದು ಸಹಕಾರಿಯಾಗಲಿದೆ. ಪ್ರವಾಸಿಗರಿಗೆ ಸರತಿ ಸಾಲಿನಲ್ಲಿ ಕಾಯುವ ಅವಶ್ಯಕತೆ ಕಡಿಮೆಯಾಗುವ ಮೂಲಕ ಉತ್ತಮ ಅನುಭವ ದೊರೆಯಲಿದೆ.


ಈ ನೂತನ ಇ-ಟಿಕೇಟಿಂಗ್ ವ್ಯವಸ್ಥೆಗೆ ದಿನಾಂಕ 13-05-2026ರಂದು ಸಂಜೆ 5.00 ಘಂಟೆಗೆ ಪಿಲಿಕುಳದ ಬಾಕ್ಸ್ ಆಫೀಸ್ ನಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖಾ ಸಚಿವ  ಎನ್.ಎಸ್. ಬೋಸರಾಜು ಇವರು ಚಾಲನೆ ನೀಡಲಿದ್ದು, ಇದರೊಂದಿಗೆ ಪಿಲಿಕುಳ ನಿಸರ್ಗಧಾಮದಲ್ಲಿ ಡಿಜಿಟಲ್ ಪ್ರವಾಸೋದ್ಯಮ ಸೇವೆಗಳ ಹೊಸ ಅಧ್ಯಾಯ ಆರಂಭವಾಗಲಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top