ಬಿರುಗಾಳಿ-ಮಳೆಗೆ ಮನೆ ಮೇಲ್ಚಾವಣಿ ನೆಲಸಮ: ಬೀದಿಗೆ ಬಂದ ಬಡ ಕುಟುಂಬ

Upayuktha
0


 

ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಗದ್ದೆಹೊಸೂರು ಗ್ರಾಮದಲ್ಲಿ  ಅಬ್ಬರಿಸಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಮಂಜುಳಾ ಎಂಬುವವರ ವಾಸದ ಮನೆಯ ಮೇಲ್ಚಾವಣಿ ಸಂಪೂರ್ಣ ಕುಸಿದು ಬಿದ್ದು ಅಪಾರ ಹಾನಿಯಾಗಿದೆ.

 

ಕೂಲಿ ಕೆಲಸ ಮಾಡಿ ಜೀವನ ಸಾಗಿಸುವುದರ ಜೊತೆಗೆ ಮಾಡಿ ಕಳೆದ ವರ್ಷ ಸುಮಾರು 5 ಲಕ್ಷ ಖರ್ಚ ಮಾಡಿ ನಿರ್ಮಿಸಿ ವಾಸವಿದ್ದ ಮಂಜುಳಾ ಅವರ ಕುಟುಂಬ, ಸಂಜೆ 5 ಗಂಟೆ ಸುಮಾರಿಗೆ ಏಕಾಏಕಿ ಬೀಸಿದ ಬಿರುಗಾಳಿ ಹಾಗೂ ಗುಡುಗು-ಮಿಂಚಿನ ಆರ್ಭಟದೊಂದಿಗೆ ಮಳೆ ಅಬ್ಬರಕ್ಕೆ   ಮನೆಯ ಮೇಲ್ಚಾವಣಿ ಸಂಪೂರ್ಣವಾಗಿ  ನೆಲಸಮಗೊಂಡಿದೆ.

 

ಘಟನೆ ನಡೆದಾಗ ಮಂಜುಳಾ ಪತ್ನಿ ವೆಂಕಟೇಶ್  ಸೇರಿದಂತೆ ಕುಟುಂಬ ಮನೆಯೊಳಗಿದ್ದರು. ಅದೃಷ್ಟವಶಾತ್ ಮೇಲ್ಚಾವಣಿ ಬೀಳುತ್ತಿದ್ದಂತೆ ಹೊರಗೆ ಓಡಿ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯಲ್ಲಿದ್ದ ಧವಸ-ಧಾನ್ಯ, ಬಟ್ಟೆ, ಪಾತ್ರೆ-ಪಗಡೆ ಸೇರಿದಂತೆ ದಿನಬಳಕೆಯ ವಸ್ತುಗಳು ಮಳೆ ನೀರಿನಲ್ಲಿ ನೆನೆದು ಹಾನಿಗೊಳಗಾಗಿವೆ. ಸದ್ಯ ಮನೆ ಕಳೆದುಕೊಂಡು ಕಂಗಾಲಾಗಿರುವ ಬಡ ಕುಟುಂಬ, ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದೆ. ಮಳೆಯಿಂದ ನೆಮ್ಮದಿಯಿಂದ ಇರೋಕೆ ಮನೆ ಇಲ್ಲದಂತಾಗಿದೆ. ಸರ್ಕಾರ ತಕ್ಷಣ ಪರಿಹಾರ ನೀಡಬೇಕುಎಂದು ಮಂಜುಳಾ ಕಣ್ಣೀರಿಟ್ಟು ಮನವಿ ಮಾಡುತ್ತಿದ್ದಾರೆ.

 

-ಮನು ಮಾಕವಳ್ಳಿ, ಕೆ.ಆರ್.ಪೇಟೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top