ಬಳ್ಳಾರಿ:
ನಗರದ RYMEC ಕಾಲೇಜಿನ ಮೂಲ ವಿಜ್ಞಾನ ವಿಭಾಗಗಳ
ಆಶ್ರಯದಲ್ಲಿ ಆಯೋಜಿಸಲಾದ “ಗುರು ವಿಕಾಸ್” ವಿಜ್ಞಾನ
ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಪಿಯು ಹಾಗೂ ಪದವಿ
ಕಾಲೇಜುಗಳ ಭೌತಶಾಸ್ತ್ರ ಅಧ್ಯಾಪಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಮುಖ್ಯ
ಅತಿಥಿಯಾಗಿ ಆಗಮಿಸಿದ್ದ ಖ್ಯಾತ ಹಾಗೂ ಹಿರಿಯ ಶಿಕ್ಷಣತಜ್ಞ
ಡಾ. ಸೋಮಶೇಖರ ಸಿದಿಗಿನಮಲೆ ಮಾತನಾಡಿ ವಿಜ್ಞಾನ ಅಧ್ಯಯನದ ಮಹತ್ವವನ್ನು ವಿವರಿಸಿದರು. ಭೌತಶಾಸ್ತ್ರ ವಿಷಯವು ಕೇವಲ ಪಾಠಪುಸ್ತಕಗಳಿಗೆ ಸೀಮಿತವಾಗಿರದೆ
ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ಸಂಬಂಧಿಸಿದೆ ಎಂದು ತಿಳಿಸಿದರು. ಯುವ
ಶಿಕ್ಷಕರು ಸಂಶೋಧನಾ ಮನೋಭಾವವನ್ನು ಬೆಳೆಸಿ ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಮೂಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದ ಡಾ. ಅರವಿಂದ ಪಟೇಲ್,
ಶಿಕ್ಷಕರೇ ರಾಷ್ಟ್ರ ನಿರ್ಮಾಣದ ಶಿಲ್ಪಿಗಳು ಎಂದು ಅಭಿಪ್ರಾಯಪಟ್ಟರು. ಇಂದಿನ
ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ನಿರಂತರವಾಗಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು
ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಹೇಳಿದರು. ಗುರು
ವಿಕಾಸ್ ನಂತಹ ಕಾರ್ಯಕ್ರಮಗಳು ಶಿಕ್ಷಕರಿಗೆ
ಹೊಸ ಚೈತನ್ಯವನ್ನು ನೀಡುತ್ತವೆ ಎಂದು ಅವರು ಮೆಚ್ಚುಗೆ
ವ್ಯಕ್ತಪಡಿಸಿದರು.
ಸಂಪನ್ಮೂಲ
ವ್ಯಕ್ತಿಗಳಾಗಿ ಡಾ. ನಾಗರಾಜು ಹಾಗೂ ಡಾ.
ಅಭಿರಾಮ್ ಜೆ ಎರಡೆರಡು ಅವಧಿಗಳನ್ನು ತೆಗೆದುಕೊಂಡರು.
ಕಾರ್ಯಕ್ರಮಕ್ಕೆ
ಡಾ. ಕಣೇಕಲ್ ಮಹಾಂತೇಶ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಡಾ.
ಜನೇಕುಂಟೆ ಬಸವರಾಜ, ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರು ಹಾಗೂ
ಆರ್ವೈಎಂಇಸಿ ಕಾಲೇಜಿನ ಅಧ್ಯಕ್ಷರು, ಡಾ. ಅರವಿಂದ ಪಟೇಲ್,
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳು ಸೇರಿದಂತೆ
ಎಲ್ಲಾ ಪದಾಧಿಕಾರಿಗಳು ಅಮೋಘ ಸಹಕಾರ ಮತ್ತು
ಪ್ರೋತ್ಸಾಹ ನೀಡಿದರು.
RYMEC ಪ್ರಾಂಶುಪಾಲ
ಡಾ.ಎಚ್. ಮಹಾಬಲೇಶ್ವರ, ಕಾರ್ಯಕ್ರಮ
ಸಂಯೋಜಕ ಡಾ. ನಾಗಭೂಷಣ ಎನ್ ಎಂ, ಭೌತಶಾಸ್ತ್ರ
ವಿಭಾಗದ ಮುಖ್ಯಸ್ಥರು ಹಾಗೂ ಎಫ್ಡಿಪಿ
ಸಂಯೋಜಕರು, ಡಾ. ಸುಮಂಗಲಾ ಬಿ,
ಗಣಿತ ವಿಭಾಗದ ಮುಖ್ಯಸ್ಥರು ಹಾಗೂ ಸಂಯೋಜಕರು, ಡಾ.
ಎನ್ ಎಂ ಕೊಟ್ಟೂರೇಶ್ವರ, ರಸಾಯನಶಾಸ್ತ್ರ
ವಿಭಾಗದ ಮುಖ್ಯಸ್ಥರು ಹಾಗೂ ಸಂಯೋಜಕರು, ಶ್ರೀಮತಿ
ಜಯಶ್ರೀ, ಡಾ. ಎನ್ ನಾಗರಾಜ,
ಡಾ. ಬಿ ವೀರೇಶ್ ಸೇರಿದಂತೆ
ಮೂಲ ವಿಜ್ಞಾನ ವಿಭಾಗದ ಎಲ್ಲಾ ಅಧ್ಯಾಪಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


