ಮಂಗಳೂರು: ಭಾರತ ಜನಗಣತಿ 2027ರ
ಅಂಗವಾಗಿ ಮೊದಲ ಹಂತದ ಮನೆ
ಪಟ್ಟಿ ಮತ್ತು ಮನೆ ಗಣತಿ ಕ್ಷೇತ್ರ
ಕಾರ್ಯಾಚರಣೆಯು 2026ನೇ ಎಪ್ರಿಲ್ 16 ರಿಂದ
ಆರಂಭವಾಗಿದ್ದು, ಮೇ 15 ರವರೆಗೆ ನಡೆಯಲಿರುತ್ತದೆ.
ಈ ನಿಟ್ಟಿನಲ್ಲಿ ಗಣತಿ ಕಾರ್ಯಕ್ಕೆ ನಿಯೋಜಿಸಲಾದ
ಗಣತಿದಾರರು ಮನೆ ಮನೆ ಬೇಟಿ
ನೀಡಿದಾಗ ನಾಗರೀಕರು ನಿಖರವಾದ ಮಾಹಿತಿಯನ್ನು ನೀಡಿ ಜನಗಣತಿ ಪ್ರಕ್ರಿಯೆಯಲ್ಲಿ
ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ಪ್ರಸ್ತುತ ಚಾಲನೆಯಲ್ಲಿರುವ ಮೊದಲ ಹಂತದ ಗಣತಿ
ಕಾರ್ಯವು ಮುಕ್ತಾಯ ಹಂತಕ್ಕೆ ಸಮೀಪಿಸುತ್ತಿದ್ದು, ಈ ನಿಟ್ಟಿನಲ್ಲಿ ಗಣತಿಯಿಂದ
ಹೊರಗುಳಿಯದೆ ಈ ಕಾಲಮಿತಿಯೊಳಗೆ ಗಣತಿ
ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ನಿಖರ ಮಾಹಿತಿ ನೀಡುವುದು
ಪಾಲಿಕೆ ವ್ಯಾಪ್ತಿಯ ನಾಗರೀಕರ ಜವಾಬ್ದಾರಿಯುತ ಕರ್ತವ್ಯವಾಗಿರುತ್ತದೆ. ಆದುದರಿಂದ ಈ ವರೆಗೆ ಗಣತಿದಾರರು
ನಿಮ್ಮ ಮನೆಗೆ ಬೇಟಿ ನೀಡದಿದ್ದರೆ ಅಥವಾ
ನಿಮ್ಮ ಮನೆಯ ಗಣತಿ ಕಾರ್ಯ
ನಡೆಯದಿದ್ದಲ್ಲಿ ಗಣತಿ ಮಾಡಿಸಿಕೊಳ್ಳುವ ಸಲುವಾಗಿ
ಪಾಲಿಕೆಯ ಸಹಾಯವಾಣಿ ಸಂಖ್ಯೆ: 0824 2220332 ಅಥವಾ ವಾಟ್ಸ್ ಆ್ಯಪ್
ಸಂಖ್ಯೆ: 9449007722 ಸಂಪರ್ಕಿಸುವಂತೆ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು ಹಾಗೂ ಪ್ರಧಾನ ಜನಗಣತಿ
ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


