ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೨ನೇ ಸಂಸ್ಥಾಪನಾ ದಿನಾಚರಣೆಯು ತಾಲೂಕಿನ ಪ್ರಧಾನ ಕಾರ್ಯದರ್ಶಿಗಳ ನಿವಾಸ ''ಸರೋಜಿನಿ'' ಯಲ್ಲಿ ನಡೆಯಿತು.
ಸಂಸ್ಥಾಪನಾ
ದಿನಾಚರಣೆಯ ಸಂದೇಶವನ್ನು ಖ್ಯಾತ ಸಾಹಿತಿ ಹಾಗೂ ಪ್ರಕಾಶಕ ಶ್ರೀ
ಕಲ್ಲಚ್ಚು ಮಹೇಶ್ ನೀಡಿದರು. ಅವರು ಮಾತನಾಡುತ್ತಾ ದ.ಕ.ದಲ್ಲಿ ಹಲವು
ಭಾಷೆಗಳು ಇದ್ದರೂ ಕನ್ನಡಕ್ಕಾಗಿ ಹೋರಾಟ ಮಾಡುವ ಅಗತ್ಯ ಇಲ್ಲಿನ ಕನ್ನಡಿಗರಿಗೆ ಬರಲಿಲ್ಲ
ಎನ್ನುವುದು ಹೆಮ್ಮೆಯ ವಿಷಯ. ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಇನ್ನಿತರ ಕನ್ನಡ
ಪ್ರೇಮಿಗಳ ಪ್ರಯತ್ನದ ಫಲವಾಗಿ ಸ್ವಾಯತ್ತ ಸಂಸ್ಥೆಯಾಗಿ ರೂಪುತಾಳಿದ ರಾಜ್ಯ ಕಸಾಪ ಇಂದು ಆರ್ಥಿಕವಾಗಿ
ಸಬಲವಾಗಿರುವ ಸಂಸ್ಥೆಯಾಗಿದೆ.
ಮುಂದೆ ಇದು ಇನ್ನೂ
ಸಮರ್ಥವಾಗಿ ಬೆಳೆಯುವಂತಾಗಬೇಕು ಎನ್ನುವುದೇ ನಮ್ಮೆಲ್ಲರ ಆಶಯ ಎಂದರು.
ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಕಸಾಪ ತಾಲೂಕು ಅಧ್ಯಕ್ಷರಾದ ಡಾ. ಮಂಜುನಾಥ ರೇವಣಕರ
ವಹಿಸಿದ್ದರು. ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಮುರಳಿ ಮೋಹನ
ಚೂಂತಾರ್ ಪ್ರಸ್ತಾವನೆ ಮಾಡಿದರು. ಕೋಶಾಧಿಕಾರಿ ಶ್ರೀ ಸುಬ್ರಾಯ ಭಟ್
ಸ್ವಾಗತಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ
ಪ್ರಸಾದ ಜೀಯವರು ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಸನತ್ ಕುಮಾರ್
ಜೈನ್, ತಾಲೂಕು ಸಮಿತಿ ಮಹಿಳಾ ಪ್ರತಿನಿಧಿ ಡಾ. ಮೀನಾಕ್ಷಿ ರಾಮಚಂದ್ರ,
ಡಾ. ರಾಜಶ್ರೀ, ಶ್ರೀ ರವೀಂದ್ರನಾಥ್, ಶ್ರೀ
ಮುಕುಂದರಾಜ್ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


