ಭಾರತದ ರಕ್ಷಣೆ, ಸರ್ವತೋಮುಖ ಪ್ರಗತಿ ಮತ್ತು ಲೋಕಕಲ್ಯಾಣಕ್ಕಾಗಿ 'ಶ್ರೀ ರಾಜಮಾತಂಗಿ ಮಹಾಯಜ್ಞ'

Upayuktha
0

 


ಯಜ್ಞವು ಸನಾತನ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿದೆ. ಧರ್ಮಗ್ರಂಥಗಳಲ್ಲಿ ವಿವರಿಸಲಾದ ಯಜ್ಞಗಳ ಲಾಭವು ಸಮಾಜಕ್ಕೆ ದೊರೆಯಲಿ ಎಂಬ ಉದ್ದೇಶದಿಂದ ಅನೇಕ ಸಂತರು ಶ್ರಮಿಸುತ್ತಿದ್ದಾರೆ. ಸಂತರ ಈ ಅವಿರತ ಪ್ರಯತ್ನದಿಂದಾಗಿಯೇ ಯಜ್ಞ ಸಂಸ್ಕೃತಿಯು ಇಂದು ಜೀವಂತವಾಗಿದೆ. ವಿಶ್ವಕಲ್ಯಾಣಕ್ಕಾಗಿ ಯಜ್ಞ-ಯಾಗಾದಿಗಳನ್ನು ಮಾಡುವುದು ನಮ್ಮ ಪರಂಪರೆಯಾಗಿದೆ. ಪ್ರಸ್ತುತ ಸಮಯದಲ್ಲಿ ಇಡೀ ವಿಶ್ವದ ಮೇಲೆ ಮೂರನೇ ಮಹಾಯುದ್ಧದ ಸಂಕಟವು ಎದುರಾಗಿದೆ. ರಾಜಕೀಯ ಮತ್ತು ಬೌದ್ಧಿಕ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿದ್ದರೂ, ಆಧ್ಯಾತ್ಮಿಕ ಬಲವು ಅತ್ಯಂತ ಮಹತ್ವದ್ದಾಗಿದೆ. ಇದೇ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸನಾತನ ಸಂಸ್ಥೆಯ ವತಿಯಿಂದ ‘ಶ್ರೀ ರಾಜಮಾತಂಗಿ ಮಹಾಯಜ್ಞ’ವನ್ನು ಆಯೋಜಿಸಲಾಗಿದೆ, ಈ ಕುರಿತಾದ ಲೇಖನ ಇಲ್ಲಿದೆ.

 

ಯಜ್ಞ ಸಂಸ್ಕೃತಿ

ಭಾರತೀಯ ಸಂಸ್ಕೃತಿಯಲ್ಲಿ ಯಜ್ಞವನ್ನು ‘ಬ್ರಹ್ಮಾಂಡದ ನಾಭಿ’ ಎಂದು ಪರಿಗಣಿಸಲಾಗಿದೆ. ಅಂದರೆ ಯಜ್ಞವು ಸೃಷ್ಟಿಯ ಕೇಂದ್ರಬಿಂದುವಾಗಿದೆ, ಆದ್ದರಿಂದಲೇ ವೈದಿಕ ಕಾಲದಿಂದಲೂ ಯಜ್ಞಗಳಿಗೆ ವಿಶೇಷ ಮಹತ್ವವಿದೆ. ಯಜ್ಞಗಳ ಮೂಲಕ ದೇವತೆಗಳ ಆಶೀರ್ವಾದವನ್ನು ಪಡೆದು ಇಚ್ಛಿತ ಗುರಿಯನ್ನು ಸುಲಭವಾಗಿ ಸಾಧಿಸಬಹುದು. ರಾಜಸೂಯ, ಅಶ್ವಮೇಧ, ಪುತ್ರಕಾಮೇಷ್ಟಿ ಮುಂತಾದ ಯಜ್ಞಗಳ ವಿವರವಾದ ವರ್ಣನೆಯು ಹಿಂದೂ ಧರ್ಮಗ್ರಂಥಗಳಲ್ಲಿ ಕಂಡುಬರುತ್ತದೆ. ಯಜ್ಞದಲ್ಲಿ ಅಗ್ನಿ ಮತ್ತು ಮಂತ್ರೋಚ್ಚಾರಣೆಯ ಮೂಲಕ ಪರಿಸರದ ನಕಾರಾತ್ಮಕತೆಯನ್ನು ಹೋಗಲಾಡಿಸಲಾಗುತ್ತದೆ. ಯಜ್ಞದಿಂದ ಪರಿಸರದ ಸಮತೋಲನವಾಗುತ್ತದೆ ಮತ್ತು ಶುದ್ಧಿಯಾಗುತ್ತದೆ. ಯಜ್ಞವು ಪರಿಸರ ಮತ್ತು ಮನುಕುಲದ ಮೇಲೆ ಅತ್ಯಂತ ಸಕಾರಾತ್ಮಕ ಪ್ರಭಾವ ಬೀರುತ್ತದೆ ಎಂಬುದು ಈಗ ವೈಜ್ಞಾನಿಕ ಸಂಶೋಧನೆಗಳಿಂದಲೂ ಸಾಬೀತಾಗಿದೆ.

 

ಸನಾತನ ಸಂಸ್ಥೆಯ ಆಶ್ರಮದಲ್ಲಿ ಇದುವರೆಗೆ ರಾಮರಾಜ್ಯದ ಸ್ಥಾಪನೆ ಮತ್ತು ಸಮಾಜದ ಕಲ್ಯಾಣಕ್ಕಾಗಿ 300 ಕ್ಕೂ ಹೆಚ್ಚು ಯಜ್ಞಗಳು ಮತ್ತು 1,000 ಕ್ಕೂ ಹೆಚ್ಚು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗಿದೆ. ಇದರಲ್ಲಿ ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗ, ಉಚ್ಛಿಷ್ಟ ಗಣಪತಿ ಯಜ್ಞ, ಚಂಡಿ ಯಾಗ, ಧನ್ವಂತರಿ ಯಾಗ, ಸಂಜೀವಿನಿ ಹೋಮ, ಪಂಚಮಹಾಭೂತ ಯಾಗ ಮುಂತಾದವುಗಳು ಸೇರಿವೆ. ಈ ಯಜ್ಞಗಳ ಸಂಕಲ್ಪವು ಧರ್ಮಕಾರ್ಯದಲ್ಲಿ ಬರುವ ಅಡೆತಡೆಗಳ ನಿವಾರಣೆ ಮತ್ತು ರಾಮರಾಜ್ಯದಂತಹ ಹಿಂದೂ ರಾಷ್ಟ್ರದ ಸ್ಥಾಪನೆ, ಅಂದರೆ ಸಮಷ್ಟಿ ಕಲ್ಯಾಣದ್ದಾಗಿತ್ತು. ಮೇ 2025 ರಲ್ಲಿ ಗೋವಾದಲ್ಲಿ ಆಯೋಜಿಸಲಾದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಭಾರತದ ರಕ್ಷಣೆ ಮತ್ತು ವಿಜಯಕ್ಕಾಗಿ ಶತಚಂಡಿ ಯಜ್ಞ ಹಾಗೂ ಇಡೀ ಮಾನವಕುಲದ ಕಲ್ಯಾಣಕ್ಕಾಗಿ ‘ಶ್ರೀ ಮಹಾಧನ್ವಂತರಿ ಯಾಗ’ವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ದೇಶ-ವಿದೇಶಗಳ ಸಂತರು ಸೇರಿದಂತೆ 30 ಸಾವಿರಕ್ಕೂ ಹೆಚ್ಚು ಭಕ್ತರು ಮತ್ತು ಹಿಂದೂ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.

 

 

ಶ್ರೀ ರಾಜಮಾತಂಗಿ ದೇವಿಯ ಕಾರ್ಯ ಮತ್ತು ಮಹಾಯಜ್ಞದ ಉದ್ದೇಶ

ಆದಿಶಕ್ತಿ ಸತೀ ದೇವಿಯ ಕೋಪದಿಂದ ಉದ್ಭವಿಸಿದ ಶಕ್ತಿಯ ಹತ್ತು ಸ್ವರೂಪಗಳನ್ನು ‘ದಶಮಹಾವಿದ್ಯಾ’ ಎಂದು ಕರೆಯಲಾಗುತ್ತದೆ. ಕಾಳಿ, ತಾರಾ, ಷೋಡಶಿ, ಭುವನೇಶ್ವರಿ, ತ್ರಿಪುರಭೈರವಿ, ಛಿನ್ನಮಸ್ತ, ಧೂಮಾವತಿ, ಬಗಲಾಮುಖಿ, ಮಾತಂಗಿ ಮತ್ತು ಕಮಲಾ ಇವು ದಶಮಹಾವಿದ್ಯೆಗಳಾಗಿವೆ. ಮಾತಂಗಿಯನ್ನು ಆದಿಶಕ್ತಿಯ ಪ್ರಧಾನ ಮಂತ್ರಿ (ಸಲಹೆಗಾರ್ತಿ) ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಅವರನ್ನು ‘ಶ್ರೀ ರಾಜಮಾತಂಗಿ’ ಎಂದು ಕರೆಯಲಾಗುತ್ತದೆ. ಈ ದೇವಿಯ ಉಪಾಸನೆಯಿಂದ ಶತ್ರುಗಳ ಮೇಲೆ ನಿಯಂತ್ರಣ ಸಾಧಿಸಬಹುದು, ಆದ್ದರಿಂದ ಪ್ರಸ್ತುತ ಯುದ್ಧದಂತಹ ಪರಿಸ್ಥಿತಿಯಲ್ಲಿ ತಪೋಭೂಮಿ ಭಾರತದ ರಕ್ಷಣೆಗಾಗಿ ಶ್ರೀ ರಾಜಮಾತಂಗಿ ದೇವಿಯ ಸಂರಕ್ಷಣಾ ಕವಚವು ಅವಶ್ಯಕವೆಂದು ಪರಿಗಣಿಸಲಾಗಿದೆ. ಭಗವಾನ್ ವಿಷ್ಣುವಿನ ವಿವಿಧ ದಶಾವತಾರಗಳ ಸಮಯದಲ್ಲಿಯೂ ದಶಮಹಾವಿದ್ಯೆಗಳು ಕಾರ್ಯನಿರ್ವಹಿಸುತ್ತವೆ. ತ್ರೇತಾಯುಗದಲ್ಲಿ ಭಗವಾನ್ ಶ್ರೀರಾಮನ ಅವತಾರ ಕಾಲದಲ್ಲಿ ಶ್ರೀ ರಾಜಮಾತಂಗಿ ದೇವಿಯ ತತ್ವವು ಸಕ್ರಿಯವಾಗಿದ್ದರಿಂದಲೇ ಆದರ್ಶ ರಾಮರಾಜ್ಯದ ಸ್ಥಾಪನೆಯಾಯಿತು. ಪ್ರಸ್ತುತ ಸಮಯದಲ್ಲಿಯೂ ರಾಮರಾಜ್ಯದ ಸ್ಥಾಪನೆಗೆ ಶ್ರೀ ರಾಜಮಾತಂಗಿ ದೇವಿಯ ಕೃಪೆ ಅತ್ಯಗತ್ಯವಾಗಿದೆ.

 

ರಾಜಮಾತಂಗಿಯನ್ನು ‘ವಿಜಯಪ್ರದಾ’ ಎಂದು ಕರೆಯಲಾಗುತ್ತದೆ. ಪ್ರಸ್ತುತ ಯುದ್ಧಕಾಲದ ಪರಿಸ್ಥಿತಿಯಲ್ಲಿ ಭಾರತಕ್ಕೆ ಸಂರಕ್ಷಣಾ ಕವಚವು ದೊರೆಯಲಿ ಮತ್ತು ಭಾರತವು ಸರ್ವತೋಮುಖ ಪ್ರಗತಿಯನ್ನು ಸಾಧಿಸಲಿ ಎಂಬ ಉದ್ದೇಶದಿಂದ ಸನಾತನ ಸಂಸ್ಥೆಯು ‘ಶ್ರೀ ರಾಜಮಾತಂಗಿ ಮಹಾಯಜ್ಞ’ವನ್ನು ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಶ್ರೀ ರಾಜಮಾತಂಗಿ ದೇವಿಯನ್ನು ಸ್ತುತಿಸಿ ಭಾರತದ ರಕ್ಷಣೆ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಲಾಗುವುದು. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಯಾವ ಮುಂಬೈ ನಗರಿಯಲ್ಲಿ ಧರ್ಮಕಾರ್ಯವನ್ನು ಪ್ರಾರಂಭಿಸಿದರೋ, ಅದೇ ಮುಂಬಾದೇವಿಯ ನಗರಿಯಲ್ಲಿ ಆಯೋಜಿಸಲಾದ ಈ ಮಹಾಯಜ್ಞವು ‘ರಾಮರಾಜ್ಯ ನಿರ್ಮಾಣ’ದ ದಿಶೆಯಲ್ಲಿ ಇಡಲಾದ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಈ ಯಜ್ಞದ ಆಧ್ಯಾತ್ಮಿಕ ಲಾಭವನ್ನು ನಿಮ್ಮ ಕುಟುಂಬದೊಂದಿಗೆ ಉಪಸ್ಥಿತರಿದ್ದು ಪಡೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ.

 

ಸ್ಥಳ : ನರ್ದುಲ್ಲಾ ಟ್ಯಾಂಕ್ ಮೈದಾನ, ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಹಿಂದೆ, ಪ್ರಭಾದೇವಿ, ಮುಂಬೈ.

ದಿನಾಂಕ : ಭಾನುವಾರ, 17 ಮೇ 2026

ಸಮಯ : ಮಧ್ಯಾಹ್ನ 3:30 ರಿಂದ ಸಂಜೆ 7:30 ರವರೆಗೆ

ಸಂಪರ್ಕ ಸಂಖ್ಯೆ: 7208130830

 

ಸಂಕಲನಕಾರರು

ಶ್ರೀ. ಅಭಯ್ ವರ್ತಕ್,

ವಕ್ತಾರರು, ಸನಾತನ ಸಂಸ್ಥೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top