ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ದತ್ತಿನಿಧಿ ವಿತರಣೆ

Upayuktha
0

ಧರ್ಮತ್ತಡ್ಕ: ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕದಲ್ಲಿ 2026-27 ನೇ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಹೆತ್ತವರಿಗಾಗಿ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.


2025-26ನೇ  ಶೈಕ್ಷಣಿಕ ವರ್ಷದ SSLC ವಾರ್ಷಿಕ ಪರೀಕ್ಷೆಬರೆದ ಎಲ್ಲಾ 240 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶಾಲೆಗೆ ನೂರು ಶೇಕಡಾ ಫಲಿತಾಂಶ ಲಭಿಸಿದೆ. ಈ ಸಂದರ್ಭದಲ್ಲಿ ಎಲ್ಲಾ ವಿಷಯಗಳಲ್ಲೂ A+ ಪಡೆದ ಒಟ್ಟು 12 ವಿದ್ಯಾರ್ಥಿಗಳಿಗೆ ಹಾಗೂ ಒಂಬತ್ತು ವಿಷಯಗಳಲ್ಲಿ A+ ಪಡೆದ 5 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಲ್ಲದೇ ಆರ್ಥಿಕವಾಗಿ ಹಿಂದುಳಿದ, ಕನ್ನಡ ಮಾಧ್ಯಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ  "ಮೇಪೋಡು ಶ್ರೀ ಸುಬ್ರಾಯ ಮಯ್ಯ" ದತ್ತಿನಿಧಿಯನ್ನು ಆಯ್ದ 5 ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿ ಶ್ರೀಮತಿ ಈಶ್ವರಿ.ಡಿ ವಿತರಿಸಿದರು.


ಪಿ.ಟಿ.ಎ ಅಧ್ಯಕ್ಷ ಅಶೋಕ್ ಭಂಡಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ "ಅಧ್ಯಾಪಕರ, ಹೆತ್ತವರ ಬೆಂಬಲದಿಂದ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು" ಎಂದು ಅಭಿಪಾಯಪಟ್ಟರು.


ಶಾಲಾ‌‌ ಮೇನೇಜರ್ ಶಂಕರನಾರಾಯಣ ಭಟ್ ಗೌರವ ಉಪಸ್ಥಿತರಿದ್ದು ಮಾತನಾಡುತ್ತಾ "ಈ ವರ್ಷ ನೂತನ ಪಠ್ಯಪುಸ್ತಕ ಜಾರಿಯಾಗಿ ಹೊಸ ಪಠ್ಯಕ್ರಮದ ಕಲಿಕೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ" ಎಂದು ಅಭಿಪ್ರಾಯ ಪಟ್ಟರು. ಮುಖ್ಯೋಪಾಧ್ಯಾಯರಾದ ಶಶಿಕುಮಾರ್ ಪಿ ಪ್ರಾಸ್ತಾವಿಕ ಮಾತನಾಡಿದರು. ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ದಿವ್ಯಾಭಾರತಿ ಶುಭಹಾರೈಸಿದರು. 


ಶ್ರೀಮತಿ ಸುನಿತಾ ಕೆ ಸ್ವಾಗತಿಸಿ, ಪ್ರದೀಪ್ ಕೆ ವಂದಿಸಿದರು. ಪ್ರಶಾಂತ ಹೊಳ್ಳ ಎನ್, ನಿರೂಪಿಸಿದರು. ಸೂರ್ಯನಾರಾಯಣ ಭಟ್ ಪ್ರಾರ್ಥಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top