ಜಾಗತಿಕ ವೇದಿಕೆಗೆ ಡಿಪಿಎಸ್ ಬೆಂಗಳೂರು ಉತ್ತರ ಶಾಲೆ: ಸಮಾವೇಶಾತ್ಮಕ ಶಿಕ್ಷಣದ ಅದ್ಭುತ ಪಯಣ

Upayuktha
0

  


ಬೆಂಗಳೂರು: ಡೆಲ್ಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು ಉತ್ತರ (DPSBN) ಶಾಲೆಯು $1 ಮಿಲಿಯನ್ ಗ್ಲೋಬಲ್ ಸ್ಕೂಲ್ ಪ್ರೈಸ್ 2026 ಟಾಪ್ 50 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ವರ್ಕಿ ಫೌಂಡೇಶನ್ ನೀಡುವ ಗೌರವವು ಭವಿಷ್ಯಮುಖಿ ಶಿಕ್ಷಣ ವ್ಯವಸ್ಥೆಗಳನ್ನು ಗುರುತಿಸುತ್ತದೆ


ಸಾಧನೆಯ ಹಿಂದೆ ಇರುವ ಚಿಂತನೆ ಮತ್ತು ದೂರದೃಷ್ಟಿಯನ್ನು ಪ್ರಾಂಶುಪಾಲರಾದ ಶ್ರೀಮತಿ ಮಂಜು ಹೀಗೆ ತೆರೆಡಿದುತ್ತಾರೆ. “ಇದು ಕೇವಲ ಪ್ರಶಸ್ತಿ ಅಲ್ಲ, ನಮ್ಮ ಶಿಕ್ಷಣ ದರ್ಶನಕ್ಕೆ ದೊರೆತ ಜಾಗತಿಕ ಗುರುತಿನ ಚಿಹ್ನೆ. ನಾವು ಮಾಡುತ್ತಿರುವ ಸಮಾವೇಶಾತ್ಮಕ  ಶಿಕ್ಷಣದ ಪ್ರಯತ್ನಗಳು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಪ್ರತಿ ವಿದ್ಯಾರ್ಥಿಯೂ ವಿಶೇಷ. ತಂತ್ರಜ್ಞಾನ, ವೈಯಕ್ತಿಕ ಕಲಿಕೆ ಮತ್ತು ಭಾವನಾತ್ಮಕ ಬೆಂಬಲದ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತೇವೆಎನ್ನುತ್ತಾರೆ.

 

ಸಾಧನೆ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿದ್ದು, ಶಿಕ್ಷಕರಲ್ಲಿ ಹೊಸ ಚೈತನ್ಯ ಮೂಡಿಸಿದೆ ಹಾಗೂ ಪೋಷಕರಿಗೆ ಹೆಮ್ಮೆ ತಂದಿದೆ. ಮುಂದೆ ಟಾಪ್ 50ರಿಂದ ಟಾಪ್ 10ಕ್ಕೆ ಬರುವ ಇಚ್ಛೆ, ಪ್ರಯತ್ನ ಇವರದ್ದು. ಪಯಣ ಮುಂದುವರಿಯುತ್ತಿದೆ.

 

ನಮ್ಮ ಶಾಲೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ನಮಗೆ ಹೆಮ್ಮೆಯ ವಿಷಯ. ಇಲ್ಲಿ ನಾವು ವಿಭಿನ್ನವಾಗಿ ಯೋಚಿಸಲು ಕಲಿಯುತ್ತೇವೆ.

-ಧೃತಿ ಆರ್ ರೆಡ್ಡಿ,   10ನೇ ತರಗತಿ

 

ಇಲ್ಲಿ ಎಲ್ಲರೂ ಒಂದೇ ಕುಟುಂಬದಂತೆ. ಸಹಾನುಭೂತಿ ಮತ್ತು ಸಹಕಾರ ನಮ್ಮಲ್ಲಿ ಬೆಳೆದಿವೆ.

-ಹಿರಿಯ ವಿದ್ಯಾರ್ಥಿ- ಐಕ್ಯ ಆರ್ ಸರಳಾಯ

 

ಪೋಷಕರ ಅಭಿಪ್ರಾಯ

 

ಪ್ರತಿ ಮಗುವಿನ ಸಾಮರ್ಥ್ಯವನ್ನು ಗುರುತಿಸಿ ಬೆಳೆಸುವ ವಾತಾವರಣ ಇಲ್ಲಿ ಇದೆ. ಇದು ಪೋಷಕರಿಗೆ ವಿಶ್ವಾಸ ನೀಡುತ್ತದೆ.

ಶ್ರೀಮತಿ ಪದ್ಮಪ್ರಿಯ

 

ಒಳಗೊಂಡ ಶಿಕ್ಷಣ ಮತ್ತು ಹೊಸತನದ ದೃಷ್ಟಿಯಿಂದ ಸಾಧನೆ ಸಂಪೂರ್ಣವಾಗಿ ಅರ್ಹವಾಗಿದೆ.

— ಶ್ರೀಮತಿ ಹನಿ ಚಂದ್ರ


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top