ಕೋರ್ಟ್ ಆದೇಶ, ಬದಲಾಗುತ್ತಿರುವ ಕ್ಷೇತ್ರದ ಶಾಸಕರು

Upayuktha
0

(ಲಘುವಾಗುತ್ತಿರುವ ವ್ಯವಸ್ಥೆಗೊಂದು ಲಘು ಬರಹ)





ನಾಲ್ಕನೇ ತರಗತಿ ವಿದ್ಯಾರ್ಥಿ: 

"ಇಲ್ಲ ಅಪ್ಪ, ನಾನು ಕರೆಕ್ಟಾಗೇ ಬರೆದಿದ್ದೆ. ವ್ಯಾಲ್ಯುಯೇಷನ್ ಮಾಡುವಾಗ ಉತ್ತರ ಬದಲಾದರೆ ನಂದೇನ್ ತಪ್ಪಿದೆ!!?. *ರೀ ಕೌಂಟಿಂಗ್* ಹಾಕ್ತೀನಿ, ಅಷ್ಟು ಹೊತ್ತಿಗೆ ಉತ್ತರ ಸರಿ ಆಗಿರಬಹುದು?, ಔಟ್ ಆಫ್ ಔಟ್ ಬರಬಹುದು." 


ಅರ್ಜಿದಾರ: 

"ನಮಸ್ಕಾರ ಸರ್. ನನ್ನ 13 ಗುಂಟೆ ಒತ್ತುವರಿಯ ಫಾರಂ 53ಗೆ ಶಾಸಕರ ಶಿಫಾರಸ್ ಸಹಿ ಬೇಕಂತೆ. ಯಾರ ಬಳಿ ತಗೋಬೇಕು ಸರ್.  ನಿಮ್ಹತ್ರನಾ? ಅವರ ಹತ್ರನಾ?"


ನ್ಯಾಯವಾದಿ: 

"ಯುವರ್ ಆನರ್, ಮುಂದಿನ ಹದಿನಾಲ್ಕು ದಿನಗಳಿಗೆ ನನ್ನ ಕಕ್ಷಿದಾರ ಜನಪ್ರತಿನಿಧಿಯನ್ನು ಶಾಸಕರಾಗಿರಲು ನ್ಯಾಯಾಲಯ ಮಧ್ಯಂತರ ಆದೇಶವನ್ನಾದರೂ ನೀಡಬೇಕು."  


ಆ ಪಕ್ಷದ/ ಈ ಪಕ್ಷದ ಕಾರ್ಯಕರ್ತ: 

"ಈ ವಾರ ನಮ್ಮ ಶಾಸಕರು ಗೆದ್ದಿದ್ದಾರೆ. ಈ ವಾರ ಸತ್ಯಕ್ಕೆ ಜಯವಾಗಿದೆ. ಸತ್ಯಮೇವ ಜಯತೆ."


ಟಿವಿ ವರದಿಗಾರ: 

"ಹಲೋ, ನಮಸ್ಕಾರ ಸರ್.  ಇವತ್ತು ನೀವು MLA ಆಗಿ ಪ್ರಮಾಣವಚನಕ್ಕೆ ವಿಧಾನ ಸೌಧಕ್ಕೆ ಹೋಗ್ತಾ ಇದ್ದೀರಾ? ಅಥವಾ ಮಾಜಿ ಆಗಿ ಪುನಃ ಕೋರ್ಟಿಗೆ ಹೋಗ್ತಾ ಇದ್ದೀರಾ? ಈ ಕ್ಷಣದ ಬ್ರೇಕಿಂಗ್ ಸುದ್ದಿಯಾಗಿ ನೀವು ಏನು ಹೇಳಲು ಬಯಸುತ್ತೀರಿ?"


ಪತ್ರಿಕಾ ಸಂಪಾದಕರು: "ನಂಜುಂಡಸ್ವಾಮಿಯವರೆ, ಮುಂದಿನ ಕೆಲವು ದಿನಗಳು ನೀವು ಎರಡೆರಡು ವ್ಯಂಗ್ಯಚಿತ್ರ ಕಳುಹಿಸಿ. ನಾವು ಪತ್ರಿಕೆ ಪ್ರಿಂಟ್‌ಗೆ ಕಳಿಸುವಾಗ ನೋಡಿ ಪ್ರಿಂಟ್ ಮಾಡ್ತೇವೆ."


ಪಟಾಕಿ ಅಂಗಡಿಯ ಮಾಲಿಕ ತನ್ನ ಸೇಲ್ಸ್‌ಮನ್‌ಗೆ: 

"ಏಯ್, ಇವತ್ತು ಎರಡೂ ಪಕ್ಷದ ಅಧ್ಯಕ್ಷರಿಗೂ ಫೋನ್ ಮಾಡಿ ಪಟಾಕಿ ಯಾರಿಗೆ ಎಷ್ಟು ಬೇಕು ಕೇಳಿ ಕಳಿಸು. ಪೂರ್ತಿ ಪೇಮೆಂಟ್ ಇಸ್ಕೊಂಡು ಕೊಡು."


ಕಂಟ್ರಾಕ್ಟರ್: 

"ಹಲೋ, ನಮಸ್ಕಾರ ಸರ್. ರಸ್ತೆ ಗುಂಡಿ ಮಚ್ಚುವ ವಿಚಾರದಲ್ಲಿ ಸ್ವಲ್ಪ ಮಾತಾಡಬೇಕಿತ್ತು, ನೀವು ಎಲ್ಲಿದ್ದೀರಿ ಸರ್? ಸರ್, ತಪ್ಪು ತಿಳ್ಕೋಬೇಡಿ, ನೀವು ಇವತ್ತು ಮಾಜಿಯಾ? ಹಾಲಿಯಾ?"


ರಾಜಕಾರಣಿಯ ಪತ್ನಿ: 

"ರೀ, ಇವತ್ತು ಮಹಿಳಾ ಕ್ಲಬ್ ಮೀಟಿಂಗ್ ಇದೆ. ನಾನು ಹೋಗ್ಬೇಕಾ?, ಬೇಡ್ವಾ? ಅಂತ ಯೋಚಿಸ್ತಿದೀನಿ. ಹೋಗೋದಾದರೆ ಯಾವ ಸೀರೆ ಉಟ್ಕೋಬೇಕು ಅನ್ನುವುದು ನಿಮ್ಮ ಪೊಲಿಟಿಕಲ್ ಸ್ಟೇಟಸ್ ಮೇಲೆ ನಿರ್ಣಯ ಆಗುವುದು. ನೀವು ಇವತ್ತು ಮಾಜಿ ಶಾಸಕರಾ?, ಹಾಲಿ ಶಾಸಕರಾ?"


ಪಕ್ಷದ ಸ್ಟೇಟ್ ಅಧ್ಯಕ್ಷರು: 

"ಸರ್, ಇವತ್ತು ನಿಮ್ಮ ಜನಪ್ರಿಯತೆಯ TRP ಹೇಗಿದೆ? ಅಂತ ಸೆಂಟ್ರಲ್ ಹೈಕಮಾಂಡ್ ಕೇಳ್ತಾ ಇದೆ. ಏನ್ ಹೇಳ್ಳಿ?"


ಪಕ್ಷದ 'ಬಿ/ಸಿ/ಡಿ ಬಣದ ನಾಯಕರು: "ಆ ಪಕ್ಷದವರು ಶಾಸಕ ಆದ್ರೆ ಮುಂದಿನ ಚುನಾವಣೆಗೆ ಈ ಪಕ್ಷದಿಂದ ನನಗೇ ಟಿಕೇಟ್ ಸಿಗುತ್ತೆ ಅಂತ ನಾನು ಅದೆಷ್ಟು ದುಡ್ ಖರ್ಚು ಮಾಡ್ತಾ ಇದೀನಿ ಅಂತ ನಂಗೇ ಲೆಕ್ಕ ಗೊತ್ತಿಲ್ಲ. ದಿನಾ ಹೀಗೆ ಒಂದೊಂದು ಪಕ್ಷದವರು ಶಾಸಕರಾದರೆ ನಾನೆಂತ ಮಾಡುವುದು? ನನ್ನ ಗತಿ ಏನು!?


ದೇವರು (ಗೀತೆಯ ಸಾರದಲ್ಲಿ):

"ಆದುದೆಲ್ಲಾ ಒಳ್ಳೆಯದಕ್ಕೇ ಆಗಿದೆ. ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ. ಆಗಲಿರುವುದು ಸಹ ಒಳ್ಳೆಯದೇ ಆಗಲಿದೆ. ರೋಧಿಸಲು ನೀನೇನು ಕಳೆದುಕೊಂಡಿರುವೆ? ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು? ನಾಶವಾಗಲು ನೀನು ಮಾಡಿರುವುದಾದರೂ ಏನು? ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ. ಏನನ್ನೇ ಅರ್ಪಿಸಿದ್ದರೂ ಅದನ್ನು ಇಲ್ಲಿಗೇ ಅರ್ಪಿಸಿರುವೆ. ನಿನ್ನೆ ಬೇರೆ ಯಾರದ್ದೋ ಆಗಿದ್ದು ಇಂದು ನಿನ್ನದಾಗಿದೆ. ಮತ್ತೆ ನಾಳೆ ಇನ್ಯಾರದ್ದೋ ಆಗಲಿದೆ. ಪರಿವರ್ತನೆ ಜಗದ ನಿಯಮ!!" 


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top