ಮಂಗಳೂರು: ಕಾಸ್ಮೋ ಫಸ್ಟ್ ಮಂಗಳೂರಿನಲ್ಲಿ ಸನ್‍ಶೀಲ್ಡ್ ಬ್ರ್ಯಾಂಡ್ ಅಡಿಯಲ್ಲಿ ಉತ್ಪನ್ನಶ್ರೇಣಿ ವಿಸ್ತರಣೆಯನ್ನು ಪ್ರಕಟಿಸಿದೆ. ಅತ್ಯಧಿಕ ಇಂಧನ ಕ್ಷಮತೆಯ ಮೂಲಕ ಮನೆ, ಕಚೇರಿ ಹಾಗೂ ವಾಣಿಜ್ಯ ಸ್ಥಳಗಳಲ್ಲಿ ಒಳಾಂಗಣ ಪರಿಸರವನ್ನು ಸುಧಾರಿಸುವ ಗುರಿಯನ್ನು ಈ ವಿನೂತನ ಶ್ರೇಣಿ ಹೊಂದಿದೆ.
ಲಸ್ಟರ್, ರೇನ್‍ಬೊ ಮತ್ತು ಅಲ್ಟ್ರಾ ಕೂಲ್ ಸರಣಿಯ ಈ ವಿನೂತನ ಉತ್ಪನ್ನಗಳು ಬೆಳಕಿನ ಸಹಜ ಪ್ರಸರಣದೊಂದಿಗೆ ಶಾಖ/ ಬಿಸಿ ಹೊರಹಾಕುವುದನ್ನು ಸಮತೋಲನಗೊಳಿಸಲು ನೆರವಾಗುತ್ತದೆ. ಗಾಜಿನ ಮೇಲ್ಮೈ ಮೂಲಕ ಪ್ರವೇಶಿಸುವ ಶಾಖದ ಪ್ರಮಾಣವನ್ನು ಸೀಮಿತಗೊಳಿಸುವ ಈ ಫಿಲ್ಮ್ ಗಳು ಆರಾಮದಾಯಕ ಒಳಾಂಗಣ ಪರಿಸರವನ್ನು ಕಾಯ್ದುಕೊಳ್ಳುವ ಜತೆಗೆ ಹವಾನಿಯಂತ್ರಣ ಕ್ಷಮತೆ ಗರಿಷ್ಠಮಟ್ಟದಲ್ಲಿ ಉಳಿಯಲು ಸಹಕಾರಿ ಎಂದು ಕಾಸ್ಮೋ ಗ್ರಾಹಕ ವ್ಯವಹಾರ ಮುಖ್ಯಸ್ಥ ಅಭಿನೀಶ್ ದಾಸ್ ಹೇಳಿದ್ದಾರೆ.
ಈ ವಿಶಿಷ್ಟ ಸನ್‍ಸ್ಕ್ರೀನ್, ಹವಾನಿಯಂತ್ರಣ ದಕ್ಷತೆ ಹೆಚ್ಚಿಸುವ ಜತೆಗೆ ಪೀಠೋಪಕರಣ, ನೆಲಹಾಸು ಮತ್ತು ಒಳಾಂಗಣ ಅಲಂಕಾರಿಕ ಸಾಮಗ್ರಿಗಳು ಕ್ರಮೇಣ ಮಸುಕಾಗುವುದಕ್ಕೆ ಕಾರಣವಾಗುವ ಅತಿನೇರಳೆ ಕಿರಣಗಳನ್ನು ತಡೆಯುತ್ತದೆ. ನೈಸರ್ಗಿಕ ಬೆಳಕನ್ನೇ ಹೆಚ್ಚು ಅವಲಂಬಿಸುವ ಆಧುನಿಕ ಮನೆ, ಕಚೇರಿಗಳು ಎದುರಿಸುವ ಅತಿಯಾದ ಶಾಖ ಮತ್ತು ಪ್ರಖರತೆಯ ಸವಾಲುಗಳಿಗೆ ಇದು ಉತ್ತರವಾಗಿರುತ್ತದೆ ಎಂದು ವಿವರಿಸಿದ್ದಾರೆ.
ಹವಾನಿಯಂತ್ರಣ ವ್ಯವಸ್ಥೆ ಮೇಲಿನ ಅವಲಂಬನೆ ಹಾಗೂ ಇಂಧನ ಬಳಕೆ ಬಗೆಗಿನ ಜಾಗೃತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಿಟಕಿಗಳ ಮೂಲಕ ಶಾಖದ ಪ್ರವೇಶ ನಿರ್ವಹಿಸುವುದು ಒಳಾಂಗಣ ಸೌಕರ್ಯ ಸುಧಾರಣೆ ನಿಟ್ಟಿನಲ್ಲಿ ಮಹತ್ವದ ಅಂಶವಾಗಿದೆ. ಕಾಸ್ಮೋ ಸನ್‍ಶೀಲ್ಡ್ ಫಿಲ್ಮ್‍ಗಳು ಸೂರ್ಯನ ಶಾಖ ಒಳಪ್ರವೇಶಿಸುವುದನ್ನು ಕಡಿಮೆ ಮಾಡುವ, ತಂಪುಗೊಳಿಸುವ ಪ್ರಕ್ರಿಯೆಗೆ ವಿದ್ಯುತ್ ಬಳಕೆಯನ್ನು ಮಿತಗೊಳಿಸುತ್ತದೆ ಎಂದು ಪ್ರಕಟಣೆ ಹೇಳಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


