ಬದಿಯಡ್ಕ:
ಬರವಣಿಗೆಯ ಕ್ಷೇತ್ರದಲ್ಲಿ ಹಿರಿಯರ ಅನುಭವವನ್ನು ಗುರುತಿಸಿ, ಹೊಸ ತಲೆಮಾರಿನ ಲೇಖಕಿಯರನ್ನು
ಪ್ರೋತ್ಸಾಹಿಸುವ ಹಾಗೂ ಗ್ರಾಮೀಣ ಭಾಗದ
ಮಹಿಳೆಯರನ್ನು ಸಾಹಿತ್ಯದ ಮುನ್ನೆಲೆಗೆ ತರುವ ಉದಾತ್ತ ಉದ್ದೇಶದ
'ಮನಸ್ವಿನಿ ಮಹಿಳಾ ವೇದಿಕೆ' (ಮನೆ-ಮನೆ-ಸಾಹಿತ್ಯ)
ಸಂಸ್ಥೆಯ ಉದ್ಘಾಟನಾ ಸಮಾರಂಭವು ಚುಳ್ಳಿಕಾನದಲ್ಲಿ ಜರುಗಿತು.
ಇಲ್ಲಿನ
ಕವಯಿತ್ರಿ ಪ್ರಮೀಳಾ ಚುಳ್ಳಿಕಾನ ಇವರ 'ನಿಸರ್ಗ' ನಿವಾಸದಲ್ಲಿ
ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಸಭಾ
ಕಾರ್ಯಕ್ರಮ, ವಿಚಾರ ಸಂಕಿರಣ, ಭಾವಗಾನ ಹಾಗೂ ಕವಿಗೋಷ್ಠಿ ಸೇರಿದಂತೆ
ವೈವಿಧ್ಯಮಯ ಸಾಹಿತ್ಯ ಚಟುವಟಿಕೆಗಳು ಯಶಸ್ವಿಯಾಗಿ ಮೂಡಿಬಂದವು.
ವಿಶ್ರಾಂತ
ಕನ್ನಡ ಪ್ರಾಧ್ಯಾಪಕರು ಹಾಗೂ ಹಿರಿಯ ಸಾಹಿತಿಗಳಾದ
ಡಾ. ಯು. ಮಹೇಶ್ವರಿ ಅವರು
ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಕತೆಗಾರ್ತಿ
ಹಾಗೂ ಸಾಹಿತಿ ಸ್ನೇಹಲತಾ ದಿವಾಕರ್ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ
ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಸೀತಾಲಕ್ಷ್ಮಿ ವರ್ಮ ವಿಟ್ಲ ಅನಿಸಿಕೆ
ಹಂಚಿಕೊಂಡರು. ಹಿರಿಯ ಸಾಹಿತಿ ಬಿ. ಸತ್ಯವತಿ ಭಟ್
ಕೊಳಚಪ್ಪು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು.
ಸಭಾ
ಕಾರ್ಯಕ್ರಮದ ನಂತರ ಮಹಿಳಾ ಸಂವೇದನೆಗಳ
ಕುರಿತು ವಿಶೇಷ ವಿಚಾರ ಸಂಕಿರಣ ಜರುಗಿತು. ನಿರ್ಮಲಾ ಶೇಷಪ್ಪ ಪೆರ್ಲ, ಜ್ಯೋತ್ಸ್ನಾ ಕಡಂದೇಲು, ಸಂಧ್ಯಾ ಕೊರೆಕ್ಕಾನ ಹಾಗೂ ಪ್ರಭಾವತಿ ಕೆದಿಲಾಯ
ಪ್ರಸ್ತುತಪಡಿಸಿದ ಭಾವಗಾನ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿತು. ಆಯ್ದ ಕವಯಿತ್ರಿಗಳ ಈ
ರಚನೆಗಳಿಗೆ ಶ್ಯಾಮಲಾ ಸಂಪತ್ತಿಲ ಅವರು ರಾಗ ಸಂಯೋಜಿಸಿದ್ದರು.
ಬಳಿಕ
ಜ್ಯೋತ್ಸ್ನಾ ಕಡಂದೇಲು ಅವರ ಅಧ್ಯಕ್ಷತೆಯಲ್ಲಿ ನಡೆದ
ಕವಿಗೋಷ್ಠಿಯಲ್ಲಿ ಬಿ. ಸತ್ಯವತಿ ಭಟ್,
ಲಕ್ಷ್ಮೀ ವಿ. ಭಟ್, ಪ್ರಮೀಳಾ
ಚುಳ್ಳಿಕಾನ, ನಿರ್ಮಲ ಶೇಷಪ್ಪ ಪೆರ್ಲ ಖಂಡಿಗೆ, ಶ್ಯಾಮಲಾ ಸಂಪತ್ತಿಲ, ಸುಶೀಲಾ ಪದ್ಯಾಣ, ಪ್ರಭಾವತಿ ಕೆದಿಲಾಯ, ಸಂಧ್ಯಾ ಕೊರೆಕ್ಕಾನ, ಸೌಮ್ಯ ಪ್ರವೀಣ್ ಹಾಗೂ ವಿಚಾರ ಸಂಕಿರಣದ
ವಕ್ತಾರರು ತಮ್ಮ ಸ್ವರಚಿತ ಕವನಗಳನ್ನು
ವಾಚಿಸಿದರು.
ಸಾಹಿತ್ಯ
ಸಾಧಕರಿಗೆ ಸನ್ಮಾನ – ಪರಿಸರ ಜಾಗೃತಿ
ಸಾಹಿತ್ಯ
ಲೋಕದಲ್ಲಿ ಕಿರಿಯರಿಗೆ ಸದಾ ಸ್ಫೂರ್ತಿಯಾಗಿರುವ ಹಿರಿಯ
ಸಾಹಿತಿಗಳಾದ ಬಿ. ಸತ್ಯವತಿ ಭಟ್
ಕೊಳಚಪ್ಪು ಹಾಗೂ ಡಾ. ಯು.
ಮಹೇಶ್ವರಿ ಇವರುಗಳನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ
ಸನ್ಮಾನಿಸಲಾಯಿತು. ಇದೇ ವೇಳೆ ಪರಿಸರ
ಪ್ರೇಮದ ಸಂಕೇತವಾಗಿ ಅತಿಥಿಗಳಾದ ಸ್ನೇಹಲತಾ ದಿವಾಕರ್, ಸೀತಾಲಕ್ಷ್ಮಿ ವರ್ಮ ವಿಟ್ಲ ಹಾಗೂ
ಶ್ಯಾಮಲಾ ಸಂಪತ್ತಿಲ ಅವರಿಗೆ ಗಿಡದ ಸಸಿಗಳನ್ನು ನೀಡಿ
ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ
ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ
ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ್
ತೊಟ್ಟೆತ್ತೋಡಿ, ಸಾಹಿತ್ಯ ಪ್ರವರ್ತಕ ಡಾ. ಕೊಳ್ಚಪ್ಪೆ ಗೋವಿಂದ
ಭಟ್, ಕವಿ ಲತೀಶ್ ಸಂಕೋಳಿಗೆ
ಸೇರಿದಂತೆ ಗಡಿನಾಡಿನ ಹಲವಾರು ಹಿರಿಯ-ಕಿರಿಯ ಸಾಹಿತ್ಯ ಬಂಧುಗಳು ಉಪಸ್ಥಿತರಿದ್ದರು.
ಕವಯಿತ್ರಿ
ಜ್ಯೋತ್ಸ್ನಾ ಕಡಂದೇಲು ಪ್ರಾರ್ಥಿಸಿ, ಪ್ರಸ್ತಾವನೆಗೈದರು. ನಿವೃತ್ತ ಶಿಕ್ಷಕಿ ಲಕ್ಷ್ಮೀ ವಿ. ಭಟ್ ಮಂಜೇಶ್ವರ
ಸ್ವಾಗತಿಸಿ, ಶಿಕ್ಷಕಿ ಸುಶೀಲಾ ಪದ್ಯಾಣ ಕಾರ್ಯಕ್ರಮ ನಿರೂಪಿಸಿದರು. ಕವಯಿತ್ರಿ ಪ್ರಮೀಳಾ ಚುಳ್ಳಿಕಾನ ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಾಹಿತ್ಯ ಸಂಭ್ರಮವು ಮಧುರ ಮುಕ್ತಾಯ ಕಂಡಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


