ಎಸ್.ಸಿ/ಎಸ್ಟಿ ಹಾಸ್ಟೆಲ್ ಗಳಲ್ಲಿ ಪ್ರವೇಶ ಹೆಚ್ಚಿಸಲು ಸಮುದಾಯ ಮುಖಂಡರ ಒತ್ತಾಯ

Upayuktha
0



ಮಂಗಳೂರು:  ಮಂಗಳೂರು  ಮತ್ತು ಉಳ್ಳಾಲ ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ  ಕುಂದುಕೊರತೆ ಸಭೆ ಶುಕ್ರವಾರ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳೂರು  ಮತ್ತು ಉಳ್ಳಾಲ ತಹಶೀಲ್ದಾರ್  ಅಧ್ಯಕ್ಷತೆಯಲ್ಲಿ  ನಡೆಯಿತು.


ದಕ್ಷಿಣ ಕನ್ನಡ ಜಿಲ್ಲೆಗೆ ಹೊರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಆಗಮಿಸುತ್ತಿದ್ದು, ವಿದ್ಯಾರ್ಥಿ ನಿಲಯಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜಿಲ್ಲೆಯಲ್ಲಿ ವಿದ್ಯಾರ್ಥಿ ನಿಲಯಗಳ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ಸಾಕಷ್ಟು  ಎಸ್.ಸಿ/ ಎಸ್.ಟಿ  ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡಚಣೆಯಾಗುತ್ತದೆ. ಹಾಗಾಗಿ ವಿದ್ಯಾರ್ಥಿ ನಿಲಯಗಳ ಸಂಖ್ಯೆಯನ್ನು  ಹೆಚ್ಚಿಸಲು ದಲಿತ ಮುಖಂಡರು  ಸಭೆಯಲ್ಲಿ ಆಗ್ರಹಿಸಿದರು.

ಇದಕ್ಕೆ  ಸಮಾಜ ಕಲ್ಯಾಣ ಇಲಾಖೆ  ಸಹಾಯಕ ನಿರ್ದೇಶಕ ಸುರೇಶ್ ಅಡಿಗ  ಪ್ರತಿಕ್ರಿಯಿಸಿ, ಹಾಸ್ಟೆಲ್ ಸೀಟ್‍ಗಿಂತ ಹೆಚ್ಚಿನ ಅರ್ಜಿಗಳು  ಬರುತ್ತಿರುವುದರಿಂದ ಎಲ್ಲರಿಗೂ ಸಿಗುತ್ತಿಲ್ಲ. ಹೆಚ್ಚುವರಿ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಒದಗಿಸಲು ಬಾಡಿಗೆ ಕಟ್ಟಡಗಳನ್ನು ಗುರುತಿಸಿ ಹೆಚ್ಚುವರಿ ಪ್ರವೇಶ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.


ಒಳ ಮೀಸಲಾತಿ ಮತ್ತು ಜಾತಿ ಸಮೀಕ್ಷೆಗಳ ಸಂದರ್ಭದಲ್ಲಿ ಉಂಟಾಗುವ  ಪರಿಶಿಷ್ಟ ಜಾತಿಯ ಆದಿದ್ರಾವಿಡರ ಉಪಜಾತಿ ಗೊಂದಲಗಳಿಗೆ  ಪರಿಹರಿಸಿ, ಸ್ಪಷ್ಟ ಮಾಹಿತಿಯನ್ನು ನೀಡುವಂತೆ ಸಮುದಾಯದ ಮುಖಂಡರು ಹೇಳಿದರು.

ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಅವರ ಸಮಾಧಿ ಸ್ಥಳದ ಅಭಿವೃದ್ಧಿ ಕಾಮಗಾರಿಯು ಅರಣ್ಯ ಇಲಾಖೆಯ ಆಕ್ಷೇಪಣೆಗಳಿಂದಾಗಿ ಸ್ಥಗಿತಗೊಂಡಿದ್ದು,  ಅಭಿವೃದ್ಧಿ ತಡವಾಗುತ್ತಿದೆ  ಎಂದು ಸ್ಥಳೀಯ ದಲಿತ ಮುಖಂಡರು ಮತ್ತು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದರು.

ಉಳ್ಳಾಲ ತಾಲೂಕು ನಡುಪದವು ಸರ್ಕಾರಿ ಶಾಲೆಗೆ ಹೋಗಲು ರಸ್ತೆಯ ವ್ಯವಸ್ಥೆ ಇರುವುದಿಲ್ಲ.  ಹಾಗೂ ಹುಲ್ಲುಗಳು ತುಂಬಿರುವುದರಿಂದ ಹಾವುಗಳು ಶಾಲೆಗಳ ಒಳಗೆ ಬರುತ್ತವೆ. ಅಸೈಗೋಳಿ ಗ್ರೇಸಿ ಶಾಲೆಯ ಮುಂಭಾಗದಲ್ಲಿ ಮದ್ಯಪಾನ ಬಾಟಲ್‍ಗಳನ್ನು ಎಸೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿರುತ್ತದೆ. ಈ ಬಗ್ಗೆ ಈಗಾಗಲೇ ಪೆÇಲೀಸ್ ಇಲಾಖೆಗೆ ತುಂಬಾ ದೂರು  ನೀಡಲಾಗಿರುತ್ತದೆ. ಆದರೆ ಇದರ ಬಗ್ಗೆ ಕ್ರಮ ವಹಿಸಿರುವುದಿಲ್ಲ. ಮತ್ತು ಕುಂಟನಗುರಿ  ಶಾಲೆಯ ಆವರಣದ ಕಾಲು ದಾರಿಯ ಒಳಗೆ ಸಾರ್ವಜನಿಕರು ನಡೆದಾಡುವುದು ಕಂಡು ಬಂದಿದ್ದು,  ಕಾಲು ದಾರಿಯನ್ನು ಮುಚ್ಚಿ ತಂತಿ ಬೇಲಿಯನ್ನು ಅಳವಡಿಸಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಉಳ್ಳಾಲ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಸೂಚಿಸಿದರು.  

ಕುಲಶೇಖರದಲ್ಲಿ ಶಿಥಿಲಗೊಂಡ ಕಟ್ಟಡದಲ್ಲಿ ಒಂದು ಕೊರಗ ಕುಟುಂಬ ಈ ಬಹಳ ವರ್ಷಗಳಿಂದ ವಾಸವಾಗಿದ್ದು,  ಅವರಿಗೆ ವಾಸಿಸಲು ಯಾವುದೇ ಮೂಲಭೂತ ಸೌರ್ಕಯ ಇಲ್ಲದೇ ಇರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಪರಿಶೀಲಿಸಿ ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು  ನಿರ್ಲಕ್ಷ್ಯ ವಹಿಸದೆ ಒದಗಿಸಿಕೊಡುವಂತೆ ಸಮುದಾಯದ ಮುಖಂಡರು ಒತ್ತಾಯಿಸಿದರು.

ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬೇಡ್ಕರ್ ಭವನಕ್ಕೆ ಸುಣ್ಣ ಬಣ್ಣ ಬಳಿಯುವುದು, ಆವರಣ ಗೋಡೆ ಮತ್ತು ಗೇಟ್ ಅಳವಡಿಕೆ ಮತ್ತು ಶೌಚಾಲಯ ಅಭಿವೃದ್ಧಿ ಕಾಮಗಾರಿ ಮುಕ್ತಾಯಗೊಂಡಿದ್ದು ಬಿಲ್ ಮೊತ್ತ ರೂ. 5 ಲಕ್ಷ  ಪಾವತಿ ಮಾಡಲಾಗಿದೆ ಮತ್ತು ಸಿಸಿ ಟಿವಿ ಅಳವಡಿಕೆಗೆ ಕ್ರಿಯಾಯೋಜನೆ ತಯಾರಿಸಿ ಅನುದಾನ ಕಾಯ್ದಿರಿಸಲಾಗಿದ್ದು, ಸಿಸಿಟಿವಿ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಮಂಗಳೂರು ತಾಲೂಕು ಪಂಚಾಯತ್  ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಹೊಳ್ಳ ತಿಳಿಸಿದರು.

ಸುರತ್ಕಲ್‍ನಲ್ಲಿರುವ ಅಂಬೇಡ್ಕರ್ ಭವನವು ಪಾಳು ಬಿದ್ದಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ  ಕಾರ್ಯಕ್ರಮಕ್ಕೆ ಉಪಯೋಗವಿಲ್ಲದಂತಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಹಿಂದಿನ ಸಭೆಯಲ್ಲಿ ಸಮುದಾಯದ ಮುಖಂಡ ಗೋಪಾಲ ಇವರು ಕೋರಿದ್ದರು. ಆದರೆ ಈವರೆಗೆ ಪೆÇಲೀಸ್ ಇಲಾಖೆಯಿಂದ ಸೀಸ್ ಮಾಡಿರುವ ಗಾಡಿಗಳನ್ನು ತೆರವುಗೊಳಿಸಿರುವುದಿಲ್ಲ. ಹಾಗೂ ಭವನಕ್ಕೆ ತೆರಳುವ ದಾರಿಯು ಮಣ್ಣಿನ ಮಾರ್ಗವಾಗಿರುತ್ತದೆ. ತೆರಳಲು ಕಷ್ಟಕರವಾಗಿದ್ದು ರಸ್ತೆ ಅಗಲೀಕರಣ ಮಾಡಿ ಕೊಡುವಂತೆ ಹಾಗೂ ಮುಖ್ಯ ಬಹಳ ರಸ್ತೆಯಲ್ಲಿ ಅಂಬೇಡ್ಕರ್ ಭವನದ ನಾಮಫಲಕ ಹಾಕಲು ಸೂಕ್ತ ಕ್ರಮವಹಿಸಲು  ಮಂಗಳೂರು ತಹಶೀಲ್ದಾರ್ ರಮೇಶ್ ಟಿ.ಬಾಬು ಹೇಳಿದರು.


ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಭೂಮಿ ಸಮಸ್ಯೆ, ಮನೆ ನಿರ್ಮಿಸಲು ಕಟ್ಟಡ ಪರವಾನಗಿ ಪಡೆಯಲು ಮತ್ತು ದಾಖಲೆಗಳ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸ್ಥಳೀಯ ಪಂಚಾಯತ್/ನಗರಸಭೆ ಕಚೇರಿ ಹಾಗೂ ಸಂಬಂಧಪಟ್ಟ ಇಲಾಖೆಗಳು  ಸಹಕರಿಸಬೇಕು ಎಂದು ಪರಿಶಿಷ್ಟ ಪಂಗಡದ ಮುಖಂಡರು ಸಭೆಯಲ್ಲಿ ಹೇಳಿದರು.

ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments
Post a Comment (0)
To Top