“ಅಧಿಕ ಮಾಸದಲ್ಲಿ ಗ್ರಂಥ ದಾನ- ಜ್ಞಾನ ದಾನದ ಮಹಾಪುಣ್ಯ”
ಪುಸ್ತಕ:
ಭಗವದ್ಗೀತೆ: ಬದುಕಿನ
ಕೈಪಿಡಿ
ಲೇಖಕರು:
ಡಾ. ಗುರುರಾಜ ಪೋಶೆಟ್ಟಿಹಳ್ಳಿ
ಭಗವದ್ಗೀತೆಯನ್ನು
ಕೇವಲ ವೈರಾಗ್ಯ ಅಥವಾ ಪಾರಮಾರ್ಥಿಕ ಗ್ರಂಥವೆಂದು
ನೋಡುವ ಸಾಮಾನ್ಯ ಭ್ರಮೆಯನ್ನು ಪ್ರಶ್ನಿಸುವ ಚಿಂತನಾತ್ಮಕ ಕೃತಿ ಇದು. ಡಾ.
ಗುರುರಾಜ ಪೋಶೆಟ್ಟಿಹಳ್ಳಿ ಅವರು ಗೀತೆಯನ್ನು ಜೀವನದ
ಪ್ರತಿಯೊಂದು ಹಂತಕ್ಕೂ ದಿಕ್ಕು ತೋರುವ “ಬದುಕಿನ ಕೈಪಿಡಿ” ಯಾಗಿ ಪರಿಚಯಿಸುತ್ತಾರೆ.
ಈ ಕೃತಿಯ ಮುಖ್ಯ ವೈಶಿಷ್ಟ್ಯವೆಂದರೆ- “ವೈರಾಗ್ಯ”ವನ್ನು ಜೀವನ ತ್ಯಾಗವಲ್ಲ, ಮೋಹ
ತ್ಯಾಗವೆಂದು ವಿವರಿಸುವ ದೃಷ್ಟಿಕೋನ. ಜೀವನದ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಹೊಂದಿದವನೇ ಗೀತೆಯ ನಿಜ ಸಂದೇಶವನ್ನು ಅರಿತುಕೊಳ್ಳಬಲ್ಲನು
ಎಂಬ ಲೇಖಕರ ನಿಲುವು ಕೃತಿಗೆ ವಿಶಿಷ್ಟತೆ ನೀಡುತ್ತದೆ.
ಯುವಜನತೆಗೆ
ಈ ಕೃತಿ ವಿಶೇಷ ಪ್ರೇರಣೆಯಾಗುತ್ತದೆ.
ಸಂಯಮ, ನಿಷ್ಠೆ, ಸತ್ಸಂಗ ಮತ್ತು ಕರ್ತವ್ಯನಿಷ್ಠೆಯ ಮೌಲ್ಯಗಳನ್ನು ಸರಳ ಕನ್ನಡದಲ್ಲಿ ಜೀವನಸ್ಪರ್ಶಿಯಾಗಿ
ನಿರೂಪಿಸಲಾಗಿದೆ. ಗೀತೆ ಮುದುಕರಿಗಲ್ಲ, ಬದುಕಿನಲ್ಲಿ
ಸರಿಯಾದ ದಿಕ್ಕನ್ನು ಹುಡುಕುತ್ತಿರುವ ಯುವಕರಿಗೇ ಅತ್ಯಂತ ಅಗತ್ಯವೆಂಬ ಸಂದೇಶ ಕೃತಿಯ ಜೀವಾಳವಾಗಿದೆ.
ಸಮಸ್ತ
ಮಾನವಕುಲಕ್ಕೆ ಅನ್ವಯಿಸುವ ಗೀತೆಯ ಸಂದೇಶವನ್ನು ಲೇಖಕರು ಸಾಮಾಜಿಕ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸಿದ್ದಾರೆ. ಅಹಂಕಾರದ ತ್ಯಾಗ, ಸಮದೃಷ್ಟಿ ಮತ್ತು ಸಕಲ ಜೀವಿಗಳ ಮೇಲಿನ
ಪ್ರೀತಿ ಇವುಗಳನ್ನು ಆಧುನಿಕ ಬದುಕಿನ ಅವಿಭಾಜ್ಯ ಮೌಲ್ಯಗಳಾಗಿ ಸ್ಥಾಪಿಸಲಾಗಿದೆ.
ಪ್ರಣವ
ಮೀಡಿಯಾ ಹೌಸ್ ಪ್ರಕಾಶನದ ಪರಿಕಲ್ಪನೆ
ಮತ್ತು ನಿರ್ವಹಣೆ ಯಲ್ಲಿ ಮೂಡಿಬಂದಿರುವ ಈ
ಕೃತಿ, ಅಧಿಕ ಜ್ಯೇಷ್ಠ (ಪುರುಷೋತ್ತಮ)
ಮಾಸದ ಅಂಗವಾಗಿ “ಗ್ರಂಥ ಬಾಗಿನ” ರೂಪದಲ್ಲಿ ಭಕ್ತರಿಗೆ ವಿತರಿಸಲಾಗುತ್ತಿದೆ. ಭುಜಂಗ ರಾವ್ ಸಾಳುಂಕೆ ದಂಪತಿಗಳ
ಗ್ರಂಥದಾನ ಹಾಗೂ ಶ್ರೀ ಜಟಲಿಂಗೇಶ್ವರ
ಸ್ವಾಮಿ ಅಂಬಾಭವಾನಿ ದೇವಿ ದೇವಸ್ಥಾನ ಟ್ರಸ್ಟ್ನ ಸಹಯೋಗ ಈ
ಕಾರ್ಯಕ್ಕೆ ಮತ್ತಷ್ಟು ಪುಣ್ಯಮಯತೆ ನೀಡಿದೆ.
ಈ ಕೃತಿ ಕೇವಲ ಓದಿಗಾಗಿ
ಮಾತ್ರವಲ್ಲ, ಮನನ ಮಾಡಿ ಬದುಕಿನಲ್ಲಿ
ಅಳವಡಿಸಿಕೊಳ್ಳಲು ಯೋಗ್ಯವಾದ ಪ್ರೇರಣಾದಾಯಕ ಗ್ರಂಥವಾಗಿದೆ. ಆಸಕ್ತರು ಗ್ರಂಥ ಬಾಗಿನಕ್ಕೆ ಸಂಪರ್ಕಿಸಿ 97393 69621
ಕೃತಿ
ಪರಿಚಯ:
ಕೆ.ವಿ.ಪದ್ಮಾವತಿ,
ಪ್ರಾಂಶುಪಾಲರು,
ಜನನಿ ಪಿ.ಯು .ಕಾಲೇಜು, ಬೆಂಗಳೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



