ಕೋಲ್ಕತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ರಾಜ್ಯದಾದ್ಯಂತ ತೀವ್ರ ಕುತೂಹಲದ ನಡುವೆ ನಡೆದಿದ್ದು, ಅಂತಿಮ ಹಂತಕ್ಕೆ ಸಾಗುತ್ತಿದ್ದಂತೆ ಭಾರತೀಯ ಜನತಾ ಪಕ್ಷವು 200ಕ್ಕೂ ಅಧಿಕ ಸ್ಥಾನಗಳ ಗೆಲುವಿನೊಂದಿಗೆ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೇರಿದೆ. ಮೂರು ದಶಕಗಳ ಎಡಪಕ್ಷಗಳ ಆಡಳಿತ ಕೊನೆಗಾಣಿಸಿ ಅಧಿಕಾರಕ್ಕೇರಿದ್ದ ತೃಣಮೂಲ ಕಾಂಗ್ರೆಸ್ ಮೂರು ಅವಧಿಗಳಲ್ಲಿ ಬಂಗಾಳವನ್ನು ಆಳಿದ ಬಳಿಕ 2026ರ ಚುನಾವಣೆಯಲ್ಲಿ ಸೋಲು ಅನುಭವಿಸಿ, ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟಿದೆ.
ಮತಗಳ ಎಣಿಕೆಯ ಆರಂಭಿಕ ಸುತ್ತುಗಳಲ್ಲಿ ಸಮಬಲದ ಪೈಪೋಟಿ ಕಂಡುಬಂದರೂ, ಮಧ್ಯಾಹ್ನದ ನಂತರ ಟ್ರೆಂಡ್ ಬಿಜೆಪಿ ಪರವಾಗಿ ತಿರುಗಿದುದು ಗಮನಾರ್ಹವಾಗಿದೆ.
ದೀರ್ಘಕಾಲದಿಂದ ಅಧಿಕಾರದಲ್ಲಿದ್ದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ನಿರೀಕ್ಷಿತ ಬೆಂಬಲ ಸಿಗದೆ ಹಿನ್ನಡೆ ಎದುರಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಸರ್ಕಾರ ವಿರೋಧಿ ಅಲೆ, ಕೆಲವು ಪ್ರದೇಶಗಳಲ್ಲಿ ಸಂಘಟನಾ ದುರ್ಬಲತೆ ಮತ್ತು ಪ್ರತಿಪಕ್ಷದ ಆಕ್ರಮಕ ಪ್ರಚಾರ- ಎಲ್ಲವೂ ಸೇರಿ ಫಲಿತಾಂಶದ ದಿಕ್ಕು ಬದಲಿಸಿದಂತಾಗಿದೆ.
ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳಲ್ಲಿ ಬಿಜೆಪಿ ಸಾಧಿಸಿರುವ ಮುನ್ನಡೆ ವಿಶೇಷವಾಗಿ ಗಮನ ಸೆಳೆದಿದೆ. ಗಡಿಭಾಗ ಜಿಲ್ಲೆಗಳು ಮತ್ತು ತೃಣಮೂಲದ ಬಲಕೋಟೆಗಳೆಂದೇ ಪರಿಗಣಿಸಲ್ಪಟ್ಟ ಪ್ರದೇಶಗಳಲ್ಲೂ ಮತದಾರರ ಅಭಿಪ್ರಾಯದಲ್ಲಿ ಬದಲಾವಣೆ ಕಂಡುಬಂದಿದೆ. ಮತ ಎಣಿಕೆಯ ಮುಂದಿನ ಹಂತಗಳಲ್ಲಿ ಈ ಮುನ್ನಡೆ ಇನ್ನಷ್ಟು ಬಲಪಡುತ್ತಿರುವ ಸೂಚನೆಗಳು ದೊರೆಯುತ್ತಿವೆ.
ಇದರ ನಡುವೆ, ಎಡಪಕ್ಷಗಳು ಹಾಗೂ ಕಾಂಗ್ರೆಸ್ ಒಕ್ಕೂಟ ರಾಜ್ಯ ರಾಜಕೀಯದಲ್ಲಿ ತಮ್ಮ ಪ್ರಭಾವವನ್ನು ಮರಳಿ ಸಾಧಿಸಲು ವಿಫಲವಾಗಿದ್ದು, ಕೆಲವೇ ಕ್ಷೇತ್ರಗಳಿಗೆ ಸೀಮಿತವಾಗಿವೆ.
ಒಟ್ಟಾರೆ, ಇಂದಿನ ಫಲಿತಾಂಶ ಪಶ್ಚಿಮ ಬಂಗಾಳದಲ್ಲಿ ಮಹತ್ವದ ರಾಜಕೀಯ ಬದಲಾವಣೆಗೆ ದಾರಿ ಮಾಡಿಕೊಡುತ್ತಿರುವುದು ಸ್ಪಷ್ಟವಾಗಿದೆ. ಬಿಜೆಪಿ ಸರ್ಕಾರ ರಚನೆಗೆ ಸಜ್ಜಾಗುತ್ತಿದ್ದರೆ, ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಇದು ಆತ್ಮಪರಿಶೀಲನೆಯ ಘಟ್ಟವಾಗುತ್ತಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


