ಪಂಚ ರಾಜ್ಯ ಚುನಾವಣಾ ಫಲಿತಾಂಶ-ಬಿಜೆಪಿ ವಿಕ್ರಮ: ಮಾಣಿ ಮಹಾಶಕ್ತಿ ಕೇಂದ್ರ ವತಿಯಿಂದ ಕೊಡಜೆಯಲ್ಲಿ ವಿಜಯೋತ್ಸವ

Upayuktha
0

ಮಾಣಿ: ಭಾರತದ ಹೆಚ್ಚಿನ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಮತ್ತು ಬಿಜೆಪಿ ಮಿತ್ರ ಪಕ್ಷ NDA ಆಡಳಿತ ನಡೆಸುತ್ತಿದ್ದು ಇಂದು ನಡೆದ ಪುದುಚೇರಿ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಏಕಾಂಗಿಯಾಗಿ ಸಂಪೂರ್ಣ ಬಹುಮತದೊಂದಿಗೆ ಆಡಳಿತಕ್ಕೆ ಬಂದಿದೆ. ಆ ಮೂಲಕ ಪ್ರಧಾನಿ ಮೋದಿಜಿಯ "ಸಂಪೂರ್ಣ ಅಭಿವೃದ್ಧಿ" ಯೋಜನೆ ಜನರನ್ನು  ಆಕರ್ಷಿಸಿರುವುದು ಮಾತ್ರವಲ್ಲದೆ ಬಿಜೆಪಿ ಭಾರತದ ಏಕೈಕ ಆಶಾಕಿರಣ ಎಂಬ ನಂಬಿಕೆ ಜನರಿಗೆ ಬಂದಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಗೃಹ ಮಂತ್ರಿ ಅಮಿತ್ ಶಾ, ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಧಾನಿ ಮೋದಿಜಿಯವರಿಗೆ  ಅಭಿನಂದನೆಗಳ ಸಲ್ಲಿಸಿ ಮಾಣಿ ಮಹಾಶಕ್ತಿ ಕೇಂದ್ರ ವತಿಯಿಂದ ಕೊಡಜೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು.


ಅನಂತಾಡಿ, ನೆಟ್ಲಮೂಡ್ನೂರು, ಮಾಣಿ, ಪೆರಾಜೆ ಶಕ್ತಿ ಕೇಂದ್ರಗಳ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕೊಡಾಜೆಯ ಜುಂಕ್ಷನ್ ನಲ್ಲಿ ಸಿಡುಮದ್ದು ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.


ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿ ಸನತ್ ಕುಮಾರ್ ರೈ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ್ ರೈ,ಪ್ರಧಾನ ಕಾರ್ಯದರ್ಶಿ ನಾಗೇಶ್ ಭಂಡಾರಿ,ನೆರಳಕಟ್ಟೆ CA ಬ್ಯಾಂಕ್ ಅಧ್ಯಕ್ಷ  ಪುಷ್ಪಾರಾಜ ಚೌಟ, ನಿರ್ದೇಶಕ ನಾರಾಯಣ ಶೆಟ್ಟಿ, ಅಶೋಕ್ ರೈ, ಮಾಣಿ ಶಕ್ತಿ ಕೇಂದ್ರ ಪ್ರಮುಖ್ ಹರೀಶ್ ಕುಲಾಲ್, ನೆಟ್ಲ ಮೂಡ್ನೂರು ಶಕ್ತಿ ಕೇಂದ್ರ ಪ್ರಮುಖ್ ಧನಂಜಯ, ಪೆರಾಜೆ ಶಕ್ತಿ ಕೇಂದ್ರ ಪ್ರಮುಖ್ ಶ್ರೀನಿವಾಸ್, ಹರೀಶ್ ಪಾಣುರ್,ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಬಂಟ್ರಿಂಜಾ, ಜೀವನ್ ಪೆರಾಜೆ, ಸುಶೀಲ ಆನಂದ್, ಬೂತ್ ಅಧ್ಯಕ್ಷರಾದ ರಮೇಶ್ ಗೌಡ,  ಲೋಕೇಶ್ ಗೌಡ, ಪದಾಧಿಕಾರಿಗಳಾದ ಕಿರಣ್ ಬಂಟ್ರಿಜ,ದಯಾನಂದ ಗೌಡ, ಶಿವರಾಮ್ ಶೆಟ್ಟಿ, ಸತೀಶ್ ಗೌಡ, ವಿನೀತ್, ಕುಸುಮಧರ್ ಗೌಡ,  ಪೂವಪ್ಪ ಗೌಡ  ಹಾಗೂ ಪಕ್ಷದ ಹಲವಾರು ಕಾರ್ಯಕರ್ತರು, ಪ್ರಮುಖರು ಸಭೆಯಲ್ಲಿ ಭಾಗವಹಿಸಿದರು



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top