ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ

Upayuktha
0



ಮಂಗಳೂರು ಮೇ 02: ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಇತ್ತೀಚೆಗೆ ವೇ|ಮೂ|ಬ್ರಹ್ಮಶ್ರೀ ಉಳಿಯ ಶ್ರೀ ವಿಷ್ಣು ಅಸ್ರರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿತು. ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಅಂಗವಾಗಿ ಭಜನಾ ನಾಮ ಸಂಕೀರ್ತನೆಯಲ್ಲಿ ವಿಶ್ವ ಕೊಂಕಣಿ ಕೇಂ ದ್ರದ ಅದ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. 


ಭಜನಾ ಮಂಗಲೋತ್ಸವದ ನಂತರ ದೇವರಿಗೆ ವಿಶೇಷ ಸೀಯಾಳಭಿಷೇಕ, ಪಂಚಾಮೃತಾಭಿಷೇಕ, ಶ್ರೀ ಗಣಪತಿ ಹವನ, ಚಂಡಿಕಾ ಹವನದ ಪೂರ್ಣಾಹುತಿ ನಡೆದು ಮಹಾಪೂಜೆ, ಅನ್ನಸಂತರ್ಪಣೆಯು ನಡೆಯಿತು.



ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಪಥಮ ಮಕ್ಕಳ ಮೇಳ, ಸರಾಯೂ ಬಾಲ ಯಕ್ಷ ವೃಂದ (ರಿ) ಇವರಿಂದ ನರಕಾಸುರ ಮೋಕ್ಷ ಎಂಬ ಯಕ್ಷಗಾನವು ವರ್ಕಾಡಿ ಶ್ರೀ ರವಿ ಅಲೆವೂರಾಯ ನಿರ್ದೇಶನದಲ್ಲಿ ಮೂಡಿಬಂತು. ರಾತ್ರಿ ಶ್ರೀ ಗೋಪಾಲ ಕೃಷ್ಣ ದೇವರಿಗೆ ವಿಶೇಷ ರಂಗಪೂಜೆಯೊAದಿಗೆ ಪ್ರತಿಷ್ಠಾ ಮಹೋತ್ಸವವು ಅದ್ದೂರಿಯಾಗಿ ಮುಗಿಯಿತು.


ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ.ಕೆ.ಸಿ. ನಾಯ್ಕ್, ಟ್ರಸ್ಟಿ ಸಂಜೀತ್ ನಾಯ್ಕ್, ಅಂಜು ಆಳ್ವ ನಾಯ್ಕ್, ಗೌರವ ಸಲಹೆಗಾರರಾದ ಅನಂತಕೃಷ್ಣ ಭಟ್, ದೈವಜ್ಞ ಸಿ.ವಿ.ಪೊದುವಾಳ್, ರಮೇಶ್ ಕೆ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
To Top