ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯ ವಾರ್ಷಿಕ ಮಹಾಸಭೆ ಸಂಪನ್ನ; ನೂತನ ಪದಾಧಿಕಾರಿಗಳ ಆಯ್ಕೆ

Upayuktha
0




ಕಾಸರಗೋಡು: ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ) ಕಾಸರಗೋಡು ಸಂಸ್ಥೆಯ ವಾರ್ಷಿಕ ಮಹಾಸಭೆಯು ಇಂದು (ಮೇ 31)  ನೀರ್ಚಾಲಿನ ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.


ಸಭೆಯಲ್ಲಿ ಸಂಸ್ಥೆಯ ಕಳೆದ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿ, ಅಂಗೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ಮುಂದಿನ ಸಾಲಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಗಡಿನಾಡಿನ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಸಂಸ್ಥೆಯ ವತಿಯಿಂದ ಒದಗಿಸಲಿರುವ ವಿವಿಧ ಸವಲತ್ತುಗಳು ಮತ್ತು ಯೋಜನೆಗಳನ್ನು ಸಭೆಯ ಮುಂದೆ ಪ್ರಸ್ತುತಪಡಿಸಲಾಯಿತು. ವೇದಿಕೆಯ ಅಪ್ರತಿಮ ಕಲಾವಿದರು ಸಂಸ್ಥೆಯೊಂದಿಗಿನ ತಮ್ಮ ಒಂದು ವರ್ಷದ ಸೃಜನಶೀಲ ಅನುಭವಗಳನ್ನು ಈ ಸಂದರ್ಭದಲ್ಲಿ ಹೆಮ್ಮೆಯಿಂದ ಹಂಚಿಕೊಂಡರು.


2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ:

ಮಹಾಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಮಂಡಳಿಯನ್ನು ಒಮ್ಮತದಿಂದ ಆರಿಸಲಾಯಿತು. ಸಂಸ್ಥೆಯ ಗೌರವಾಧ್ಯಕ್ಷರಾಗಿ ಗಣೇಶ್ ಪ್ರಸಾದ್ ಆಳ್ವ, ಅಧ್ಯಕ್ಷರಾಗಿ ಶ್ರೀಮತಿ ರಾಜೇಶ್ವರಿ ಎಂ.ವಿ., ಉಪಾಧ್ಯಕ್ಷರಾಗಿ ಅಪ್ಪಣ್ಣ ಸೀತಾಂಗೋಳಿ ಹಾಗೂ ಕಾರ್ಯದರ್ಶಿಯಾಗಿ ಗುರುರಾಜ್ ಎಂ.ಆರ್. ಅವರು ಆಯ್ಕೆಯಾದರು. ಹಾಗೆಯೇ ಜೊತೆ ಕಾರ್ಯದರ್ಶಿಯಾಗಿ ಕುಮಾರಿ ವರ್ಷಾ ಪಿ. ಮತ್ತು ಕೋಶಾಧಿಕಾರಿಯಾಗಿ ಶ್ರೀಮತಿ ಜಯಪ್ರಭಾ ವೈ. ಅವರನ್ನು ಜವಾಬ್ದಾರಿಗೆ ನಿಯೋಜಿಸಲಾಯಿತು. ಇದರೊಂದಿಗೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕುಮಾರಿ ದೀಕ್ಷಾ ಕುಲಾಲ್, ಮಹೇಶ್ ಪುಣಿಯೂರು ಮತ್ತು ಬಾಲಕೃಷ್ಣ  ನಾಯ್ಕ್   ಹೇರೂರ್ ಅವರು ಒಮ್ಮತದಿಂದ ಆಯ್ಕೆಯಾದರು.


ಮಾಸ್ಟರ್ ಹನ್ಶಿತ್ ಆಳ್ವ  ಸ್ವಾಗತಿಸಿದರು. ಕುಮಾರಿ ನವ್ಯಶ್ರೀ ಕುಲಾಲ್ ಧನ್ಯವಾದ ಸಮರ್ಪಿಸಿದರು. ಸಭೆಯಲ್ಲಿ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಕಲಾವಿದರು, ಪೋಷಕರು, ಹಿತೈಷಿಗಳು ಹಾಗೂ ಪ್ರೋತ್ಸಾಹಕರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top