ಮಂಗಳೂರು: "ಮಾನಸಿಕ ತುಮುಲಗಳು ಹೆಚ್ಚಾಗಿ ಮನಸ್ಸು ಕಹಿಯಾದಾಗ" ಹರಟೆ" ಯಂತಹ ಕಾರ್ಯಕ್ರಮಗಳು ಚೇತೋಹಾರಿಯಾಗಿ ಗೋಚರಿಸುತ್ತವೆ. ಸಾಮಾಜಿಕ ಪ್ರಸ್ತುತತೆಯ ವಿಷಯಗಳನ್ನಿರಿಸಿಕೊಂಡು ಒಂದಷ್ಟು ಮಂದಿಗಳು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ವಿಚಾರಗಳ ಬಗ್ಗೆ ಹಾಸ್ಯಮಯವಾಗಿ ಖಂಡನೆ - ಮಂಡನೆಗಳನ್ನು ಮಾಡುತ್ತಾ ಜನಜಾಗೃತಿಯನ್ನೂ ಮಾಡಬಹುದು. ಜೊತೆಗೆ ಇತ್ತೀಚೆಗೆ ಎಲ್ಲರನ್ನೂ ಕಾಡುವ ಒಂಟಿತನದಿಂದ ಪಾರುಗಾಣಿಸಬಹುದು" ಎಂದು ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ" ನನಗೆ" ಸಂಘಟನೆಯ ಸಂಚಾಲಕರೂ ಆದ ಪಿ. ರವಿಶಂಕರ ಕಾರಂತರು ಹೇಳಿದರು.
ಅವರು ಕೋಡಿಕಲ್ ನ ವಿಪ್ರ ವೇದಿಕೆಯ ತಿಂಗಳ ಕಾರ್ಯಕ್ರಮದಲ್ಲಿ ಸಮನ್ವಯಕಾರರಾಗಿ ಭಾಗವಹಿಸಿ ಮಾತನಾಡಿದರು.
ನಿರ್ಧಾರಿತ ವಿವಾಹ ಹಾಗೂ ಪ್ರೇಮ ವಿವಾಹಗಳ ಸಾಧಕ- ಭಾದಕಗಳ ಬಗ್ಗೆ ವಾದಿ- ಪ್ರತಿವಾದಿಗಳು ವಿಷಯ ಮಂಡನೆ ಮಾಡಿದರು. ಪ್ರೇಮ ವಿವಾಹದ ಬಗ್ಗೆ ಡಾ.ಜೆ.ಎನ್.ಭಟ್, ಟಿ.ವಿಶ್ವೇಶ್ವರ ಭಟ್, ದುರ್ಗಾದಾಸ್ ಕಟೀಲು ವಾದಿಸಿದರು. ನಿರ್ಧಾರಿತ ವಿವಾಹದ ಬಗ್ಗೆ ಶ್ರೀಮತಿಯರಾದ ವಿದ್ಯಾ ಗಣೇಶ್ ರಾವ್, ಸುಧಾರಾಣಿ, ಪ್ರಭಾವತಿ ಮಡಿ ಹಾಗೂ ಸ್ವಪ್ನ ಅವಿನಾಶ್ ವಿಷಯ ಮಂಡಿಸಿದರು.
ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯರು ಸ್ವಾಗತ- ಪರಿಚಯ ಮಾಡಿದರು. ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಮತಿ ಭಾಗ್ಯಲಕ್ಷೀ ಹಾಗೂ ಶ್ರೀ ಗಂಗಾಧರ್ ಭಟ್ ,ವೈ ದಂಪತಿಗಳನ್ನು ಗೌರವಾಧ್ಯಕ್ಷ ಜಯರಾಮ ಪದಕಣ್ಣಾಯ ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ಕೋಶಾಧಿಕಾರಿ ಕಿಶೋರ ಕೃಷ್ಣ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


