ಸತ್ಯದ ಅನಾವರಣ ಮಾಧ್ಯಮದ ಜವಾಬ್ದಾರಿ: ಪಿ.ಬಿ.ಹರೀಶ್ ರೈ

Upayuktha
0


ಮಂಗಳೂರು: ಮಾಧ್ಯಮವು ಸಮಾಜದ ಕೈಗನ್ನಡಿ. ಮಾಧ್ಯಮಗಳು ಸಮಾಜದ ನೈಜ ಚಿತ್ರಣವನ್ನು, ಆಗುಹೋಗುಗಳನ್ನು, ಸಾಧನೆ ಮತ್ತು ಸಮಸ್ಯೆಗಳನ್ನು ನೇರವಾಗಿ ಜನತೆಗೆ ತಲುಪಿಸುತ್ತಿವೆ. ಸತ್ಯದ ಅನಾವರಣ ಮಾಧ್ಯಮದ ಜವಾಬ್ದಾರಿ ಎಂದು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಹೇಳಿದರು.


ರೋಟರಿ ಕ್ಲಬ್ ಮಂಗಳೂರು ನಾರ್ತ್ ಇದರ ವತಿಯಿಂದ ನಗರದ ಮಲ್ಲಿಕಟ್ಟೆಯ ರೋಟರಿ ಬಾಲ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾಧ್ಯಮ ಮತ್ತು ಸಮಾಜ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.


ಇಂದಿನ ವಿದ್ಯಾಥಿಗಳು , ಯುವ ಜನತೆ ಓದಿನಿಂದ ವಿಮುಖರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲ ವಿಚಾರಗಳು ಸತ್ಯ ಎಂದು ನಂಬುವ ಸ್ಥಿತಿ ಇದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ದಿನ ಪತ್ರಿಕೆಗಳು ನೈಜ ಸುದ್ದಿಯ ಜತೆಗೆ ಜ್ಞಾನದ ಆಗರವಾಗಿದೆ.  ಪತ್ರಿಕೆ ಓದುವಂತೆ ಮಕ್ಕಳನ್ನು ಪ್ರೇರೇಪಿಸುವುದು ಹಿರಿಯರ ಜವಾಬ್ದಾರಿ ಎಂದು ಅವರು ಹೇಳಿದರು.


ರೋಟರಿ ಕ್ಲಬ್ ಮಂಗಳೂರು ನಾರ್ತ್   ಅಧ್ಯಕ್ಷ ಡಾ.ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಾಂಭವಿ ಪ್ರಭು, ನಿಕಟಪೂರ್ವ ಅಧ್ಯಕ್ಷ ಮೋಹನ್ ನಾಯರ್, ನಿಯೋಜಿತ ಅಧ್ಯಕ್ಷ ಸುದರ್ಶನ್ ನಾಯಕ್ , ಡಾ.ಸತೀಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಆರ್.ಎಂ.ಗೊಗೆರಿ  ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಗಣೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top