ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಸ್ವರ್ಗದಲ್ಲೊಂದು ಹಾಸ್ಯ ಸಂಜೆ

Upayuktha
0

 


 

ಉಡುಪಿ: ಹೋಂ ಡಾಕ್ಟರ್ಸ್ ಫೌಂಡೇಶನ್ ಉಡುಪಿ ಪ್ರವರ್ತಿತ ಸ್ವರ್ಗ ಆಶ್ರಮ ಕೊಳಲಗಿರಿ ಇದರ ಸ್ವಂತ ಸ್ಥಳ ಮತ್ತು ಕಟ್ಟಡ  ಸಹಾಯಾರ್ಥಕವಾಗಿ ಕೊಳಲಗಿರಿ ಸಿಂಧೂರ ಸಭಾಂಗಣದಲ್ಲಿ ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಸ್ವರ್ಗದಲ್ಲೊಂದು ಹಾಸ್ಯ ಸಂಜೆ ಕಾರ್ಯಕ್ರಮ ಮೇ 17 ಭಾನುವಾರ ನಡೆಯಿತು.

 

ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್ ಅವರನ್ನು ಹಾಸ್ಯ ಸಾಮ್ರಾಟ್ ಬಿರುದಿನೊಂದಿಗೆ ಗೌರವಿಸಲಾಯಿತು. ಮನು ಹಂದಾಡಿ, ಬಸವರಾಜ್ ಮಹಾಮನಿ, ಡಾ. ಬೆಣ್ಣೆ ಬಸವರಾಜ್ ರವರಿಂದ ಹಾಸ್ಯದ ಹಬ್ಬವೇ ನಡೆಯಿತು.

 

ಸಂದರ್ಭದಲ್ಲಿ ಹೋಂ ಡಾಕ್ಟರ್ ಫೌಂಡೇಶನ್ ಇದರ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿಯವರನ್ನು ಕಲಾವಿದರು ಗೌರವಿಸಿದರು. ವೇದಿಕೆಯಲ್ಲಿ ಹೋಂ ಡಾಕ್ಟರ್ ಫೌಂಡೇಶನ್ ಸದಸ್ಯರಾದ ಡಾ.ಸುಮಾ ಶೆಟ್ಟಿ, ಬಂಗಾರಪ್ಪ ಉದಯ್ ನಾಯ್ಕ್, ಅರುಣ್ ಜತ್ತನ್, ಪ್ರವೀಣ್ ಜತ್ತನ್, ಜೀವನ್ ಜತ್ತನ್, ಸುದರ್ಶನ್ ಜತ್ತನ್, ಕಿರಣ್ ಜತ್ತನ್, ಮಿಲಿತ್ ಹೆಗ್ಡೆ, ರಾಘವೇಂದ್ರ ಪೂಜಾರಿ, ವಾಣಿಶ್ರೀ, ಸುಂದರ್ ಪೂಜಾರಿ, ರಾಘವೇಂದ್ರ ಕರ್ವಾಲು, ಸಂಧ್ಯಾ ಶೆಣೈ ಮುಂತಾದವರು ಉಪಸ್ಥಿತರಿದ್ದರು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top