ಜಾಗತಿಕ ಆರೋಗ್ಯ ದಿನ

Upayuktha
0


ಹಲೋ, ಹೇಗಿದ್ದೀರಾ!


ಮನುಷ್ಯನ ಮುಖ್ಯವಾದ ಸಂಪತ್ತು ಯಾವುದೆಂದರೆ ಅದು ಆರೋಗ್ಯ ಮಾತ್ರ. ಅದಕ್ಕೆ "ಶರೀರಮಾದ್ಯಂ ಖಲು ಧರ್ಮ ಸಾಧನಮ್" ಎಂದು ಹೇಳುತ್ತಾರೆ. ಜೀವನದಲ್ಲಿ ಧರ್ಮ ಮಾರ್ಗದಲ್ಲಿ ನಡೆಯಲು ಆರೋಗ್ಯ ತುಂಬ ಅವಶ್ಯಕ.


ನಮ್ಮ ಆರೋಗ್ಯವನ್ನು ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಿದ್ದಾರೆ. ನಮ್ಮ ಶರೀರದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಔಷಧ, ಮಾತ್ರೆ, ಕೆಲವೊಂದು ಸಲ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಪರಿಹಾರ ಕಂಡು ಕೊಳ್ಳಬಹುದು.

ಆದರೆ ಮಾನಸಿಕ ಆರೋಗ್ಯ ಹಾಳು ಮಾಡಿಕೊಂಡರೆ ಅದು ನಮ್ಮ ದೈಹಿಕ ಆರೋಗ್ಯದ ಮೇಲೆಯೂ ಸಹ ಪರಿಣಾಮ ಬೀರಬಹುದು. ಸಿಟ್ಟು, ಅಸೂಯೆ, ಖಿನ್ನತೆ, ನಮ್ಮ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಒಂದೊಂದು ಸಾರಿ ಮಾನಸಿಕ ಆರೋಗ್ಯದಲ್ಲಿ ಏರುಪೇರು ಆದರೆ ಅದು ನಮ್ಮನ್ನು ಖಿನ್ನತೆಯ ಕಡೆಗೆ ದೂಡುವುದಲ್ಲದೆ, ಅದು ಆತ್ಮಹತ್ಯೆಯ ಕಡೆಗೂ ಎಳೆಯ ಬಲ್ಲದು.


ಅದಕ್ಕೆ ಜನರಲ್ಲಿ ಆರೋಗ್ಯದ. ಕಡೆಗೆ ತಿಳುವಳಿಕೆ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 7ನೇ ತಾರೀಖು  "ಜಾಗತಿಕ ಆರೋಗ್ಯ ದಿನ" ಎಂದು ಘೋಷಿಸಲಾಗಿದೆ.


ನಮ್ಮ ದೈಹಿಕ ಆರೋಗ್ಯಕ್ಕೆ ಮಿತವಾದ ಆಹಾರ, ಉತ್ತಮ ನಿದ್ರೆ, ಯೋಗ, ವ್ಯಾಯಾಮ, ಉತ್ತಮ ಅಡಿಪಾಯ ಹಾಕಿದರೆ, ಉತ್ತಮ ಪುಸ್ತಕಗಳನ್ನು ಓದುವುದು, ಹಿತವಾದ ಸಂಗೀತ, ಆಧ್ಯಾತ್ಮ, ಉಳಿದವರ ಜೊತೆ ಸಹಬಾಳ್ವೆ, ಮಾನಸಿಕ ನೆಮ್ಮದಿ, ಅತಿಯಾಸೆ ತ್ಯಜಿಸುವುದು, ನಮ್ಮನ್ನು ಉತ್ತಮ ಮಾನಸಿಕ ಆರೋಗ್ಯ ಮತ್ತು ದೀರ್ಘಾಯುಷ್ಯದ ಕಡೆಗೆ ಒಯ್ಯುತ್ತವೆ. ಬನ್ನಿ, ಉತ್ತಮ ಆರೋಗ್ಯವನ್ನು ರೂಢಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡೋಣ. ಏನಂತೀರಾ?


-ಗಾಯತ್ರಿ ಸುಂಕದ, ಬದಾಮಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top