ಸಂತ ಫಿಲೋಮಿನಾ ಕಾಲೇಜಿನಲ್ಲಿ “ಜಿಯೋಜೆಬ್ರಾ” ಕಾರ್ಯಾಗಾರ

Upayuktha
0

ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಇದರ ಗಣಿತಶಾಸ್ತ್ರ ವಿಭಾಗ,ಇನೋವೇಷನ್ ಹಬ್ ಸೆಂಟರ್ ಫಾರ್ ಇನೋವೇಷನ್ ಅಂಡ್ ಎಂಟರ್‌ಪ್ರಿನರ್‌ಶಿಪ್ ಹಾಗೂ ನ್ಯೂ ಏಜ್ ಇಂಕ್ಯೂಬೇಷನ್ ನೆಟ್‌ವರ್ಕ್ ಸಹಯೋಗದಲ್ಲಿ “ಜಿಯೋಜೆಬ್ರಾ ಮೂಲಕ ಗಣಿತೀಯ ಪರಿಕಲ್ಪನೆಗಳ ದೃಶ್ಯೀಕರಣ” ಎಂಬ ವಿಷಯವನ್ನು ಪ್ರಾಯೋಗಿಕವಾಗಿ ಉಪಯೋಗಿಸುವ ಕಾರ್ಯಾಗಾರವನ್ನು ಏಪ್ರಿಲ್ 2 ರಂದು ಆಯೋಜಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೋ ವಹಿಸಿ, ತಮ್ಮ ಭಾಷಣದಲ್ಲಿ ಅವರು ತಮ್ಮ ಪಿಎಚ್.ಡಿ ಸಂಶೋಧನೆಯ ಅನುಭವಗಳನ್ನು ಹಂಚಿಕೊಂಡು, ತಮ್ಮ ಸಂಶೋಧನೆ ಭೌತಶಾಸ್ತ್ರ ಕ್ಷೇತ್ರಕ್ಕೆ ಸೇರಿದದ್ದಾಗಿದ್ದರೂ ಅದರಲ್ಲಿ ಗಣಿತದ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು ಎಂದು ಹೇಳಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಅಗತ್ಯವಾದ ಮೂಲಭೂತ ಗಣಿತ ಜ್ಞಾನವನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು.


ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ. ರಮಾನಂದ ಎಚ್. ಎಸ್., ಪ್ರಾಧ್ಯಾಪಕರು, ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು, ವಾಮಂಜೂರು, ಅವರು ಈ ಕಾಲೇಜು ತಮಿಗೆ ವಿಶೇಷವಾದದ್ದು ಎಂದು ತಿಳಿಸಿ, ಇಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕುಮಾರಿ ಶಿವಾನಿ, ಸಹಾಯಕ ಪ್ರಾಧ್ಯಾಪಕಿ, ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ವಾಮಂಜೂರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಕ್ಷಿತಾ ಕೆ. ಶೆಟ್ಟಿ, ಸ್ನಾತಕೋತ್ತರ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರತೀಕ್ಷಾ,ದೀಪಿಕಾ ಅಂಜು ಜೇಮ್ಸ್ ಉಪಸ್ಥಿತರಿದ್ದರು.


ಕಾರ್ಯಕ್ರಮದ ಆರಂಭದಲ್ಲಿ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿಯರಾದ ಮಾನಸಾ ಮತ್ತು ಅಶ್ವಿನಿ ಪ್ರಾರ್ಥನೆ ಸಲ್ಲಿಸಿದರು. ತನುಜಾ ಎನ್.ಪಿ., ಗಣಿತ ವಿಭಾಗ ಮುಖ್ಯಸ್ಥರು ಸ್ವಾಗ ಸಹಾಯಕ ಪ್ರಾಧ್ಯಾಪಕಿ ರಕ್ಷಿತಾ ಕೆ. ಶೆಟ್ಟಿ ವಂದನಾರ್ಪಣೆ ಮಾಡಿದರು. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಪ್ರೀಮಲ್ ಜೆಸ್ವಿಟಾ ಬ್ರಾಗ್ಸ್ ಕಾರ್ಯಕ್ರಮ ನಿರೂಪಣೆ ಮಾಡಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top