ಪುತ್ತೂರು: ಅಕ್ಷಯ ಪದವಿ ಕಾಲೇಜಿನಲ್ಲಿ ವಾಗ್ವೈಭವ ಸಂಸ್ಕೃತ ಸಂಘದಿಂದ ಅಭ್ಯುದಯ ಭಿತ್ತಿಪತ್ರ ಅನಾವರಣ ಕಾರ್ಯಕ್ರಮವು ನಡೆಯಿತು.
ವಿವೇಕಾನಂದ ಇಂಗ್ಲೀಷ್ ಮೀಡಿಯಂ ಶಾಲೆಯ ಸಂಸ್ಕೃತ ಶಿಕ್ಷಕಿ ಆಗಿರುವ ಶ್ರೀಮತಿ ಸವಿತಾ ಅವರು ಭಿತ್ತಿಪತ್ರಿಕೆಯನ್ನು ಅನಾವರಣಗೊಳಿಸಿ ದೀಪ ಪ್ರಜ್ವಲನೆಗೈದರು. ಅವರು ಸಂಸ್ಕೃತದ ಪೋಷಣೆ ಬೆಳವಣಿಗೆ ಎಲ್ಲವೂ ವಿದ್ಯಾರ್ಥಿಗಳ ಕೈಯಲ್ಲಿದೆ. ಬಿತ್ತಿ ಪತ್ರಿಕೆಯಲ್ಲಿ ನಿತ್ಯ ಪಂಚಾಂಗವೂ ಮೂಡಿ ಬರಲಿ ಎಂದುಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ. ಪ ಪಕ್ಕಳಮುಂದಿನ ದಿನಗಳಲ್ಲಿಅಕ್ಷಯ ಕಾಲೇಜಿನಲ್ಲಿ ಸಂಸ್ಕೃತ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚು ಬೆಳೆಯಲೆಂದು,ನಿಮ್ಮ ಭವಿಷ್ಯವು ಉಜ್ವಲವಾಗಲಿ ಎಂದು ಶುಭಹಾರೈಸಿದರು.
ವಾಗ್ವೈಭವ ಸಂಸ್ಕೃತಸಂಘದ ಸಂಯೋಜಕಿ ಶ್ರೀಮತಿ ಸಾಯಿ ಕೃಪಾ ಕೆ ಪ್ರಸ್ತಾವನೆ ಗೈದರು. ಸಂಸ್ಕೃತ ಸಂಘದ ಅಧ್ಯಕ್ಷ ಅಕ್ಷಿತ್ ಕೆ ಆರ್ ದ್ವಿತೀಯ ಬಿಕಾಂ,ಕಾರ್ಯದರ್ಶಿ ಕುಮಾರಿ ಅಪೇಕ್ಷ ಕೆಜಿ ಶೆಟ್ಟಿ, ದ್ವಿತೀಯ ಬಿ ಸಿ ಎಉಪಸ್ಥಿತರಿದ್ದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿಯರಾದ ಕುಮಾರಿ ರಕ್ಷಿತಾ.ಎನ್ ,ರಕ್ಷಿತಾ ಕೆ, ಸ್ವಾತಿ, ಪ್ರಣಮ್ಯ ಎಂ.ಎಸ್ಪ್ರಾರ್ಥಿಸಿದರು. ಐಕ್ಯೂ ಏ ಸಿ ಸಂಯೋಜಕೀಯದ ಶ್ರೀಮತಿರಶ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ರಕ್ಷಾ ಕೆಆರ್ ದ್ವಿತೀಯ ಬಿಸಿಎ ವಿದ್ಯಾರ್ಥಿನಿ, ಸಂಸ್ಕೃತ ಸಂಘದ ಖಜಾಂಚಿಯು ಅತಿಥಿಗಳನ್ನು ಪರಿಚಯಿಸಿದರು. ಪ್ರಥಮ ಬಿಕಾಂ ವಿದ್ಯಾರ್ಥಿನಿ ಸಂಘದ ಜೊತೆ ಕಾರ್ಯದರ್ಶಿಯು ಆದ ಕುಮಾರಿ ರಶ್ಮಿ ರಾವ್ ಸ್ವಾಗತಿಸಿದರು. ದ್ವಿತೀಯ ಬಿಸಿಎವಿದ್ಯಾರ್ಥಿನಿ ಅಪೇಕ್ಷ ಕೆಜೆ ಶೆಟ್ಟ ವಂದಿಸಿದರು. ಪ್ರಥಮ ಬಿಕಾಂ ವಿದ್ಯಾರ್ಥಿನಿ ಜೊತೆ ಕಾರ್ಯದರ್ಶಿ ಆದ ಯಶಸ್ವಿ ಬಿಕೆ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


