ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ದ್ಯಾಮವ್ವಮ್ಮ ದುರ್ಗಮ್ಮರ ಜಾತ್ರೆ ಪ್ರಾರಂಭ

Upayuktha
0

ಭಕ್ತ ಸಾಗರದಲ್ಲಿ ತೆಗ್ಗಿ ಗ್ರಾಮದೇವತೆಗಳ ಮಹಾರಥೋತ್ಸವ




ಗುಳೇದಗುಡ್ಡ: ಗುಳೇದಗುಡ್ಡ ಸಮೀಪದ ತೆಗ್ಗಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆಗಳಾದ ದ್ಯಾಮವ್ವಮ್ಮ ಮತ್ತು ದುರ್ಗವ್ವಮ್ಮರ ಜಾತ್ರೆ ಇಂದು ಸಂಭ್ರಮ ಸಡಗರದಿಂದ ಪ್ರಾರಂಭಗೊಂಡಿದೆ. ಮುಂಜಾನೆ ಗ್ರಾಮದೇವತೆಗಳ ತವರ ಮನೆಯಾದ ಬಡಿಗೇರ ಅವರ ಮನೆತನದವರಿಂದ ಗ್ರಾಮದೇವತೆಗಳು ಉಡಿ ತುಂಬಿಸಿಕೊಂಡು, ನಂತರ ಒಂಬತ್ತು ಬಾಬದ ಮನೆಯವರು ಹಾಗೂ ಗ್ರಾಮದ ಪ್ರತಿಯೊಂದು ಮನೆತನದವರು ಗ್ರಾಮದೇವತೆಗಳಿಗೆ ಬಂಗಾರ, ಬೆಳ್ಳಿ, ಹೂವು, ಹಣ್ಣು, ಸೀರೆ, ಹಸಿರು ಬಳೆ, ಎಲೆ, ಅಡಿಕೆ, ಉತ್ತತ್ತಿ, ಅರಸಿನಕೊಂಬು, ಬಾಳೆಹಣ್ಣು ಸೇರಿದಂತೆ ಸಾವಿರಾರು ಭಕ್ತರ ಸಮೂಹದವರು ದೇವತೆಗಳಿಗೆ ಸಂಭ್ರಮ ಸಡಗರ ಹಾಗೂ ಭಕ್ತಿಭಾವದಿಂದ ಉಡಿ ತುಂಬಿದರು.


ತೆಗ್ಗಿ ಗ್ರಾಮದ ಕುರಿಯವರ ಮನೆಯಿಂದ ರಥದ ಕಳಸವನ್ನು ತಂದು, ಮೇಟಿ ಅವರ ಮನೆಯಿಂದ ರಥದ ಹಗ್ಗವನ್ನು ಡೊಳ್ಳಿನ ವಾದ್ಯಗಳೊಂದಿಗೆ ತಂದು ಗ್ರಾಮದೇವತೆಗಳನ್ನು ರಥದಲ್ಲಿ ಎರಿಸಿಕೊಂಡು ತೆಗ್ಗಿ, ರಾಘಾಪೂರು, ತಿಮ್ಮಸಾಗರ, ಕೆಲವಡಿ, ನಿಂಗಾಪೂರ, ತೋಗಣಸಿ, ಹಂಸನೂರು, ಹಿರೇಬೂದಿಹಾಳ, ರೈಲ್ವೆ ಸ್ಟೇಶನ್  ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಹಾಗೂ ಗೋವಾ ರಾಜ್ಯದಿಂದ ಬಂದ ಭಕ್ತರು ಸೇರಿದಂತೆ ಸಾವಿರಾರು ಭಕ್ತಿ ಸಾಗರದಲ್ಲಿ ಗ್ರಾಮ ದೇವತೆಗಳ ಮಹಾರಥೋತ್ಸವ ಸಂಭ್ರಮ ಸಡಗರದಿಂದ ಜರುಗಿತು. ರಥೋತ್ಸವದ ನಂತರ ಒಂದೊತ್ತು ಇದ್ದ ಗ್ರಾಮದ ಪ್ರತಿಯೊಂದು ಮನೆತನದವರಿಗೆ ಗ್ರಾಮದೇವತೆಗಳ ಹಂದರದಲ್ಲಿ ಉಡಿ ತುಂಬಿಸಿಕೊAಡು ಪ್ರಸಾದ ಸ್ವೀಕರಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top