ಸಾಧನೆ ಮಾಡಲು ಪ್ರತಿಭೆ ಅಷ್ಟೇ ಅಲ್ಲ, ಸತತ ಪ್ರಯತ್ನವು ಮುಖ್ಯ

Upayuktha
0


ನಾವು ಯಶಸ್ವಿಯಾದವರನ್ನು ನೋಡಿದಾಗ,

“ಅವರಿಗೆ ದೇವರು ವಿಶೇಷ ಪ್ರತಿಭೆ ಕೊಟ್ಟಿದ್ದಾನೆ” ಎಂದುಕೊಳ್ಳುತ್ತೇವೆ.ಆದರೆ ಆ ಸಾಧನೆಯ ಹಿಂದೆ ಇರುವ ಮೌನ ಕಥೆಯನ್ನು ಗಮನಿಸಿದರೆ, ಪ್ರತಿಭೆಗಿಂತಲೂ ಸತತ ಪ್ರಯತ್ನವೇ ಅಲ್ಲಿ ಪ್ರಮುಖ ಪಾತ್ರವಹಿಸಿರುವುದನ್ನು ತಿಳಿಯಬಹುದು. ಪ್ರತಿಭೆ ಎನ್ನುವುದು ಒಂದು ಬೀಜದಂತಿದೆ.


ಆ ಬೀಜಕ್ಕೆ ನೀರು, ಬೆಳಕು, ಸಹನೆ ಮತ್ತು ಸಮಯ ಸಿಗದಿದ್ದರೆಅದು ಮೊಳಕೆಯೊಡೆಯುವುದೇ ಇಲ್ಲ. ಅದೇ ರೀತಿ, ಪ್ರತಿಭೆ ಇದ್ದರೂ ಅದನ್ನು ಬೆಳೆಸುವ ಪ್ರಯತ್ನ ಇಲ್ಲದಿದ್ದರೆ ಅದು ಕೇವಲ ಸಾಮರ್ಥ್ಯವಾಗಿಯೇಉಳಿದುಹೋಗುತ್ತದೆ.ಪ್ರತಿದಿನಸ್ವಲ್ಪ-ಸ್ವಲ್ಪ ಮುನ್ನಡೆ,ಸೋಲಿನಲ್ಲಿಯೂ ಕೈ ಬಿಡದ ಮನೋಭಾವ, ಟೀಕೆಗಳ ನಡುವೆಯೂ ಮುಂದುವರಿಯುವ ಧೈರ್ಯ ಇವುವೇ ಸತತ ಪ್ರಯತ್ನದ ನಿಜವಾದ ಅರ್ಥ.


ಒಮ್ಮೆ ಮಾಡಿದ ಶ್ರಮಕ್ಕಿಂತ,ಮರುಮರು ಮಾಡಿದ ಪ್ರಯತ್ನವೇ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆ.ಇತಿಹಾಸ ನೋಡಿದರೆ,ಬಹುತೇಕ ಮಹಾನ್ ಸಾಧಕರು ಆರಂಭದಲ್ಲಿ ಸಾಮಾನ್ಯರೇ ಆಗಿದ್ದರು.


ಆದರೆ ಅವರು ಹೊಂದಿದ್ದದ್ದು ಒಂದೇ ಒಂದು ಗುಣ ನಿಲ್ಲದ ಪ್ರಯತ್ನ.ಅವರು ಸೋಲನ್ನು ಅಂತ್ಯವೆಂದು ಅಲ್ಲ, ಒಂದು ಪಾಠವೆಂದು ನೋಡಿದರು.ಆದುದರಿಂದ, ನಮ್ಮೊಳಗಿನ ಪ್ರತಿಭೆ ಕಡಿಮೆ ಎಂದು ಬೇಸರಪಡುವ ಅಗತ್ಯವಿಲ್ಲ.ಪ್ರಯತ್ನ ಮಾಡುವ ಮನಸ್ಸಿದ್ದರೆ,ಸಾಧನೆ ಅನಿವಾರ್ಯ.ಯಾಕೆಂದರೆ ಜೀವನದಲ್ಲಿ ಗೆಲ್ಲಿಸುವುದು ಪ್ರತಿಭೆ ಮಾತ್ರವಲ್ಲ  ಪ್ರತಿಭೆಯನ್ನು ಬೆಳೆಸುವ ಸತತ ಪ್ರಯತ್ನವು ಪಾತ್ರವಹಿಸುತ್ತದೆ.


ಒಂದು ದಿನ ನಾನು ನನ್ನನ್ನೇ ಕೇಳಿಕೊಂಡೆ“ನನ್ನಲ್ಲಿ ಪ್ರತಿಭೆ ಇದೆಯೇ?”ಉತ್ತರ ಸಿಗಲಿಲ್ಲ.ಆದರೆ ಮತ್ತೊಂದು ಪ್ರಶ್ನೆ ಕೇಳಿದಾಗ ಉತ್ತರ ಸ್ಪಷ್ಟವಾಯಿತು “ನಾನು ಎಷ್ಟು ಪ್ರಯತ್ನಿಸಿದ್ದೇನೆ?”ಪ್ರತಿಭೆ ಕೆಲವರಿಗೆ ಸಹಜವಾಗಿ ದೊರೆಯುತ್ತದೆ.ಆದರೆ ಅದು ದೀಪವಿದ್ದಂತೆಬೆಳಗಿಸಲು ಎಣ್ಣೆ ಬೇಕು.ಆ ಎಣ್ಣೆಯೇ ಸತತ ಪ್ರಯತ್ನ.ಪ್ರಯತ್ನ ಮಾಡದೇ ಇದ್ದ ಪ್ರತಿಭೆಮೂಲೆ ಸೇರುವ ಪುಸ್ತಕದಂತೆ.ಪುಟಗಳಿವೆ, ಅರ್ಥವಿದೆ,


ಆದರೆ ಓದುಗರಿಲ್ಲದ ಕಾರಣ ಮೌನ.ಪ್ರಯತ್ನ ಮಾತ್ರ ಬೇರೆ.ಅದು ನಿಧಾನವಾಗಿ ನಡೆಯುತ್ತದೆ, ಒಮ್ಮೆ ಬೀಳುತ್ತದೆ, ಮತ್ತೆ ಎದ್ದುಕೊಳ್ಳುತ್ತದೆ, ಯಾರಿಗೂ ಗೊತ್ತಾಗದಂತೆ ಒಳಗಿಂದಲೇ ಬಲವಾಗುತ್ತದೆ.


ನಾವು ಸೋಲನ್ನು ನೋಡಿದಾಗನಮ್ಮ ಸಾಮರ್ಥ್ಯವನ್ನೇ ಪ್ರಶ್ನಿಸುತ್ತೇವೆ.ಆದರೆ ಸೋಲು ಕೇಳುವ ಪ್ರಶ್ನೆ ಒಂದೇ—

“ನೀನು ನಿಲ್ಲುತ್ತೀಯಾ, ಅಥವಾ ಮುಂದುವರೆಯುತ್ತೀಯಾ?”


ಸಾಧನೆ ಎಂದರೆ ಒಂದು ದಿನದ ಸಾಧನೆ ಅಲ್ಲ. ಪ್ರತಿದಿನದ ಒಪ್ಪಿಗೆv“ಇಂದು ಕೂಡ ನಾನು ಕೈ ಬಿಡುವುದಿಲ್ಲ”ಎಂಬ ನಿರ್ಧಾರ. ಆದ್ದರಿಂದ,ಪ್ರತಿಭೆ ಇಲ್ಲವೆಂದು ಹಿಂಜರಿಯಬೇಡಿ. ಪ್ರಯತ್ನ ಇರುವ ಮನಸ್ಸು. ಒಂದು ದಿನ ನಿಮ್ಮನ್ನೇ ಅಚ್ಚರಿಗೊಳಿಸುತ್ತದೆ.


-ಪ್ರಣೀತಾ

ಎಸ್‌.ಡಿ.ಎಂ ಕಾಲೇಜ್‌, ಉಜಿರೆ


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top