ಆಡುವ ಮಾತುಗಳು ಜನರನ್ನು ಉದ್ರೇಕಿಸಿ, ಹಿಂಸೆಗೆ ಪ್ರಚೋದನೆ ಕೊಡುವಂತಿರಬಾರದು.
ಮೊನ್ನೆ ನಿರ್ಗತಿಕ ಶಾಸಕರುಗಳು ಪಕ್ಷಾತೀತರಾಗಿ, ಭಿಕ್ಷುಕರಂತೆ IPL ಕ್ರಿಕೇಟ್ ಟಿಕೇಟ್‌ನ್ನು ವಿಧಾನ ಸಭೆಯಲ್ಲಿ ಭಿಕ್ಷೆ ಬೇಡಿ ಪಡೆಯುತ್ತಿರುವಾಗ, ಬೆಗ್ಗರ್ಸ್ ಕಾಲೋನಿಯ ಸಮೀಪ ಸಜ್ಜನ ಜನಪ್ರತಿನಿಧಿಗಳೂ ಇದ್ದಾರೆ ಎನ್ನುವಂತೆ ಒಂದಿಬ್ಬರು 'IPL ಭಿಕ್ಷಾಟನೆಯನ್ನು ವಿರೋಧಿಸಿ' ಸಜ್ಜನರೆನಿಸಿಕೊಂಡಿದ್ದರು.
ಇವತ್ತು ಸಜ್ಜನ ರಾಜಕಾರಣಿ ಸುರೇಶ್‌ಕುಮಾರ್‌ರವರು ತಮ್ಮ ಫೇಸ್‌ಬುಕ್‌ನಲ್ಲಿ ಗಂಭೀರ ವಿಚಾರದ ಬಗ್ಗೆ ಗಮನ ಸೆಳೆಯುವ ಒಂದು ಮಾತಾಡಿದ್ದಾರೆ.
ಕೈ ಪಕ್ಷದವರು ತಮ್ಮ ಎದುರಾಳಿ RSS ಮತ್ತು ಎದುರಾಳಿ ಪಕ್ಷವನ್ನು ನಿಂದಿಸುವ ಬರದಲ್ಲಿ, ಉದ್ದೇಶ ಪೂರ್ವಕವಾಗಿ ಕೈ ಪಕ್ಷದ ಉನ್ನತ ವರಿಷ್ಠರು ಆಡುತ್ತಿರುವ ಅನಾರೋಗ್ಯಕರ ಪ್ರಚೋದನಾಕಾರಿ ಮಾತಿನ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಕೈ ಪಕ್ಷದ ವರಿಷ್ಠರ ಮಾತುಗಳು ಖಂಡನೀಯವಾದುದು.
ಯಾವುದೇ ರಾಜಕೀಯ ಪಕ್ಷದವರಿಗೆ ತಮ್ಮ ವಿರೋಧಿ ಪಕ್ಷದವರನ್ನೂ, ವಿರೋಧಿ ಸಂಘಟನೆಗಳನ್ನೂ ಸೈದ್ಧಾಂತಿಕವಾಗಿ ವಿರೋಧಿಸುವ, ಟೀಕಿಸುವ, ವಿಡಂಬಿಸುವ ಹಕ್ಕು, ಅವಕಾಶ ಇದ್ದೇ ಇರುತ್ತದೆ.
ಆರೋಗ್ಯಕರವಾದ ಜಗಳ, ಭಿನ್ನ ಅಭಿಪ್ರಾಯಗಳ ಪ್ರತಿಪಾದನೆ, ವಿರೋಧ, ಟೀಕೆ, ವಿಡಂಬನೆಗಳು ಸಾಮಾಜಿಕ ಮತ್ತು ರಾಜಕಾರಣದಲ್ಲಿ ಸಹಜ.
ಆದರೆ, ಹಾಗೆ ವಿರೋಧಿಸುವಾಗ, ಟೀಕಿಸುವಾಗ, ವಿಡಂಬಿಸುವಾಗ ಅದಕ್ಕೊಂದು ಸೌಜನ್ಯದ ಚೌಕಟ್ಟಿರಬೇಕು. ಅದು ಜನರನ್ನು ಉದ್ರೇಕಿಸಿ, ಹಿಂಸೆಗೆ ಪ್ರಚೋದನೆ ಕೊಡುವಂತಿರಬಾರದು. ಯಾವ ಪಕ್ಷವೂ ಹಿಂಸೆಗೆ ಪ್ರಚೋದನೆ ಕೊಡುವ ಮಟ್ಟಕ್ಕೆ ಇಳಿಯಬಾರದು.
ವಿರೋಧಿಸುವಾಗ, ಟೀಕಿಸುವಾಗ ವಿವೇಕದ ಚೌಕಟ್ಟನ್ನು, ಎಲ್ಲೆಯನ್ನು, ಸೌಜನ್ಯವನ್ನು ಮೀರಿ ಹಿಂಸೆಗೆ ಪ್ರಚೋದನೆ ಕೊಡುವ ಮಾತಾಡಿದರೆ... ಎದುರಾಳಿ ಪಕ್ಷ, ಸಂಘಟನೆ, ವ್ಯಕ್ತಿಗಳಿಗೆ ಎಷ್ಟು ಶಿಥಿಲ ಮಾಡಬಹುದೋ ಅದು ಮುಖ್ಯವಲ್ಲ. ಹಿಂಸೆಗೆ ಪ್ರಚೋದನೆ ಕೊಡುವ ಮಾತುಗಳು ಆಡಿದವರ ಪಕ್ಷ, ಸಂಘಟನೆ, ವ್ಯಕ್ತಿಗಳಿಗೇ ಹೆಚ್ಚು ಡ್ಯಾಮೇಜ್ ಮಾಡುತ್ತದೆ ಮತ್ತು ಸ್ವಾಸ್ಥ್ಯ ಸಮಾಜಕ್ಕೂ ಅಪಾಯ ತರುತ್ತದೆ.
ಯಾರೂ, ಯಾವ ಪಕ್ಷಗಳೂ, ಯಾವ ಸಂಘಟನೆಗಳೂ ಈ ಮಟ್ಟಕ್ಕೆ ಇಳಿಯದಿರಲಿ.
https://www.facebook.com/share/v/18EhyVuDW3/
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

