ಎಸ್.ಡಿ.ಎಂ. ಬಿ.ಎಡ್ ಕಾಲೇಜು ಉಜಿರೆ: ಹಿರಿಯ ವಿದ್ಯಾರ್ಥಿಗಳ ಪುನರ್ ಸಮ್ಮಿಲನ ಕಾರ್ಯಕ್ರಮ

Upayuktha
0


ಉಜಿರೆ: ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್). ಹಾಗೂ ಶಿಕ್ಷಕರ ತರಬೇತಿ ಸಂಸ್ಥೆ (ಡಿ.ಎಡ್) ನಲ್ಲಿ ಹಿರಿಯ ವಿದ್ಯಾರ್ಥಿಗಳ ಪುನರ್ ಸಮ್ಮಿಲನ ಕಾರ್ಯಕ್ರಮವು ಶುಕ್ರವಾರ (ಏ.24) ನಡೆಯಿತು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ್ ಆಲ್ಬರ್ಟ್ ಸಲ್ಡಾನ್ಹ ಮಾತನಾಡುತ್ತಾ “ಹಳೆಯ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳ ನೆನಪುಗಳನ್ನು ಮತ್ತು ಪ್ರಸ್ತುತ ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯದ ಜೊತೆಗೆ ಅನುಭವಗಳನ್ನು ಹಂಚಿಕೊಳ್ಳಲು ಸುಂದರವಾದ ವೇದಿಕೆ” ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.


ಡಿ.ಎಡ್. ಕಾಲೇಜಿನ ಹಳೆವಿದ್ಯಾರ್ಥಿ ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆ ಧರ್ಮಸ್ಥಳದ ಶಿಕ್ಷಕರಾದ ಜೋಸೆಫ್ ಟಿ ಎಂ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ “ ಡಿ.ಎಡ್. ತರಬೇತಿಯು ಬದುಕಿನ ಪಾಠವನ್ನು ಕಲಿಸಿಕೊಟ್ಟಿದೆ. ಮಕ್ಕಳೊಂದಿಗೆ ಮಕ್ಕಳಾಗಿ ನಮ್ಮ ಜ್ಞಾನ ಸಂಪತ್ತನ್ನು ವಿದ್ಯಾರ್ಥಿಗಳಿಗೆ ನೀಡಿ ಸಮಾಜವನ್ನು, ದೇಶವನ್ನು ಸುಸ್ಥಿರ ಮಾಡುವಂತ ಶಿಕ್ಷಕರಾಗುವುದರೊಂದಿಗೆ ನ್ಯಾಯ, ನಿಷ್ಠೆ, ಕರುಣೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು” ಹೇಳಿದರು.


ಡಿ.ಎಡ್. ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಪುಷ್ಪಾವತಿ ಕೆ ಶ್ರೀ ಧ ಮಂ.ಅ.ಹಿ.ಪ್ರಾ. ಶಾಲೆ ಉಜಿರೆಯ ಶಿಕ್ಷಕಿ ಮಾತನಾಡುತ್ತಾ “ನಮ್ಮ ಡಿ.ಎಡ್. ಕಾಲೇಜು ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳೊಂದಿಗಿನ ಸಂಬಂಧ ಮತ್ತು ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರ ಬದ್ಧತೆ ಹೇಗಿರಬೇಕೆಂಬುದನ್ನು ಕಲಿಸಿಕೊಟ್ಟಿದೆ” ಎಂದು ಹೇಳುತ್ತಾ ತಾನು ಡಿ.ಎಡ್. ಮಾಡುವಾಗ ಪಡೆದ ಅನುಭವಗಳನ್ನು ಎಳೆ ಎಳೆಯಾಗಿ ಹಂಚಿಕೊಂಡರು.


ಬಿ.ಎಡ್. ಕಾಲೇಜಿನ ಹಳೆವಿದ್ಯಾರ್ಥಿನಿ ಶ್ರೀ ಧ.ಮಂ.ಪಿ.ಯು ಕಾಲೇಜು ಉಜಿರೆಯ ಉಪನ್ಯಾಸಕಿಯಾದ ಪ್ರತೀಕ್ಷಾ ಜೈನ್ ಮಾತನಾಡುತ್ತಾ “ಹಳೆಯ ವಿದ್ಯಾರ್ಥಿಗಳ ನಾಯಕತ್ವ, ಸ್ವಯಂ ಪ್ರೇರಿತ ಬದ್ಧತೆ, ಸದ್ಭಾವನೆ ಚಿಂತನೆಗಳೆಲ್ಲವನ್ನೂ ಹಂಚಿಕೊಳ್ಳಲು ಹಾಗೂ ಮಾರ್ಗದರ್ಶನ ಮಾಡಲು ಹಳೆಯ ವಿದ್ಯಾರ್ಥಿಗಳ ಸಂಘವು ಸೂಕ್ತವಾದ ವೇದಿಕೆಯಾಗಿದೆ. ಬಿ.ಎಡ್. ತರಗತಿಗಳಲ್ಲಿ ಕಲಿತಂತಹ ಪಾಠಗಳು, ಪ್ರಯೋಗಗಳು ಮತ್ತು ಜೀವನ ಉತ್ಸಾಹ ಎಲ್ಲವೂ ಕೂಡ ಅವಿಸ್ಮರಣೀಯ” ಎಂದು ಹೇಳುತ್ತಾ ತಮ್ಮ ಅನುಭವಗಳೊಂದಿಗೆ ಅನಾವರಣಗೊಳಿಸಿದರು.


ಬಿ.ಎಡ್. ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಧನುಷ್ ಕೆ ಪಿ ಮಾತನಾಡಿ “ನನ್ನ ಬಿ.ಎಡ್. ವ್ಯಾಸಂಗವು ಸದಾ ನೂತನವಾದ ಅನುಭವವನ್ನೇ ನೀಡುತ್ತದೆ. ಅಲ್ಲಿ ನಾನು ಗಳಿಸಿಕೊಂಡ ವ್ಯಕ್ತಿತ್ವದ ಗುಣಗಳು ನನ್ನ ಜೀವನಕ್ಕೆ ಕೈಗನ್ನಡಿಯಾಗಿದೆ. ಯಾವುದೇ ಸಮಸ್ಯೆಯನ್ನು ಎದುರಿಸುವ ತಾಳ್ಮೆ ಹಾಗೂ ಚಿಂತನಾಶಕ್ತಿಯನ್ನು ನೀಡಿದೆ.  ಹಾಗಾಗಿ ನಮಗೆ ದಾರಿದೀಪವಾದ ಎಲ್ಲಾ ಶಿಕ್ಷಕರನ್ನು ಸದಾ ನಾವು ಸ್ಮರಿಸಿಕೊಳ್ಳೋಣ” ಎಂದು ಹೇಳಿದರು.


ಸಂಘದ ವತಿಯಿಂದ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮತ್ತು ಡಿ.ಎಡ್. ಬಿ.ಎಡ್. ನ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳೆಲ್ಲರೂ ಭಾಗವಹಿಸಿದ್ದರು.


ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಸಾಯಿಧೃತಿ ಮತ್ತು ತಂಡ ಪ್ರಾರ್ಥಿಸಿ, ಪಲ್ಲವಿ ಸ್ವಾಗತಿಸಿ, ಪ್ರಜ್ಞ ವಂದಿಸಿ, ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top