ಶಿರ್ಡಿಯಲ್ಲಿ ರಾಮನವಮಿ ಸಂಭ್ರಮ: ಕಲಾ ಸೌರಭದ ಬಹುಭಾಷಾ ಸಂಗೀತ-ನೃತ್ಯ ಕಲೋತ್ಸವಕ್ಕೆ ಭಕ್ತರ ಮೆಚ್ಚುಗೆ

Upayuktha
0


ಶಿರ್ಡಿ: ಮುಂಬೈನ ಪ್ರತಿಷ್ಠಿತ ಕಲಾ ಸಂಸ್ಥೆ ಕಲಾ ಸೌರಭ ತನ್ನ 33ನೇ ವಾರ್ಷಿಕೋತ್ಸವದ ಅಂಗವಾಗಿ ‘ಸಂಸ್ಕಾರ-2026’ ಸರಣಿಯ ನಾಲ್ಕನೇ ಕಾರ್ಯಕ್ರಮವನ್ನು ಮಾರ್ಚ್ 27ರಂದು ಶಿರ್ಡಿ ಶ್ರೀ ಸಾಯಿಬಾಬಾ ಸಾನಿಧ್ಯದಲ್ಲಿ ಯಶಸ್ವಿಯಾಗಿ ಆಯೋಜಿಸಿತು. ರಾಮನವಮಿ ಜಾತ್ರಾ ನಿಮಿತ್ತ ನಡೆದ ಈ ಕಾರ್ಯಕ್ರಮ ‘ಶ್ರೀ ಸಾಯಿ ರಾಮ ಸ್ತುತಿ – ಗೀತ ಗಾನಾಮೃತ’ ಶೀರ್ಷಿಕೆಯಡಿ ಬಹುಭಾಷಾ ಸಂಗೀತ ಹಾಗೂ ನೃತ್ಯ ಸಂಯೋಜನೆಯಾಗಿ ಭಕ್ತರನ್ನು ರಂಜಿಸಿತು.


ಸುಮಾರು 50ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ ಈ ಕಲೋತ್ಸವವನ್ನು ಉದ್ಯಮಿ ಉದಯ್ ಶೆಟ್ಟಿ ಉದ್ಘಾಟಿಸಿದರು. ವಿವಿಧ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕಲಾ ಸೌರಭದ ದೀರ್ಘಕಾಲದ ಸಾಂಸ್ಕೃತಿಕ ಸೇವೆಯನ್ನು ಅವರು ಪ್ರಶಂಸಿಸಿದರು.


ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಅವರ ನಿರ್ದೇಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ, ತುಳು ಸೇರಿದಂತೆ ಹಲವು ಭಾಷೆಗಳ ಭಕ್ತಿ ಗೀತೆಗಳು ಮತ್ತು ನೃತ್ಯಗಳು ಮನಮೋಹಕವಾಗಿ ಮೂಡಿ ಬಂದವು. ಅಮಿತಾ ಕಲಾ ಮಂದಿರ (ಮುಂಬೈ), ಪುಷ್ಪಾಂಜಲಿ ನಾಟ್ಯ ಅಕಾಡೆಮಿ (ಬೆಂಗಳೂರು) ಮತ್ತು ನೃತ್ಯಾಂಕಿತ ಡಾನ್ಸ್ ಅಕಾಡೆಮಿ ತಂಡಗಳು ವೈವಿಧ್ಯಮಯ ನೃತ್ಯ ಪ್ರದರ್ಶನ ನೀಡಿ ಗಮನಸೆಳೆದವು.


ಯಕ್ಷಗಾನ ರೂಪಕ ‘ಶ್ರೀರಾಮಾಂಜನೇಯಂ’ ವಿಶೇಷ ಆಕರ್ಷಣೆಯಾಗಿದ್ದು, ಗಾಯಕರಾದ ಡಾ. ಕೋಮಲ್, ಸನ್ನಿಧಿ ಶೆಟ್ಟಿ, ವಿಶ್ವನಾಥ ಶೆಟ್ಟಿ ಸೇರಿದಂತೆ ಹಲವರು ಭಕ್ತಿಗಾನಗಳಿಂದ ಕಾರ್ಯಕ್ರಮವನ್ನು ಮೆರಗುಗೊಳಿಸಿದರು.


ಶಿರ್ಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಕಲಾವಿದರನ್ನು ಸಾಯಿ ಶಾಲು ಮತ್ತು ಪ್ರಸಾದ ನೀಡಿ ಗೌರವಿಸಲಾಯಿತು. ಸಾವಿರಾರು ಭಕ್ತರು ನೇರವಾಗಿ ವೀಕ್ಷಿಸಿದ ಈ ಕಾರ್ಯಕ್ರಮವನ್ನು ಲಕ್ಷಾಂತರ ಮಂದಿ ಆನ್‌ಲೈನ್ ಮೂಲಕವೂ ಆಸ್ವಾದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top