ಆರ್.ಐ.ಎಸ್.ಎಂ. ಸ್ವಾಯತ್ತ ವಿವಿ ಸ್ಥಾಪನೆಗೆ ನಿರ್ಧಾರ

Upayuktha
0

ಮಂಗಳೂರು: ಅಮೆರಿಕದ ಸ್ಟೇಟ್ ಯುನಿವರ್ಸಿಟಿ ಆಫ್ ನ್ಯೂಯಾರ್ಕ್ (ಆಲ್ಬನಿ) ಪಾಲುದಾರಿಕೆಯಡಿ ಗೋಕುಲ ಶಿಕ್ಷಣ ಪ್ರತಿಷ್ಠಾನ (ವೈದ್ಯಕೀಯ), ಬೆಂಗಳೂರಿನಲ್ಲಿ ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಮ್ಯಾನೇಜ್‍ಮೆಂಟ್ (ಆರ್‍ಐಎಸ್‍ಎಂ)   ಸ್ವಾಯತ್ತ ವಿಶ್ವವಿದ್ಯಾಲಯ  ಸ್ಥಾಪಿಸಲು ಮುಂದಾಗಿದೆ.


ಶೈಕ್ಷಣಿಕ ಕ್ಷೇತ್ರವನ್ನು ವಾಸ್ತವ ಜಗತ್ತಿಗೆ ಹೆಚ್ಚು  ಪ್ರಸ್ತುತಗೊಳಿಸುವ ಮತ್ತು ಭವಿಷ್ಯದ ಕೌಶಲಗಳ ಜೊತೆಗೆ ಸಂಪರ್ಕ ಸೇತುವೆ ನಿರ್ಮಿಸುವ ಉದ್ದೇಶದಿಂದ ಗೋಕುಲ ಶಿಕ್ಷಣ ಪ್ರತಿಷ್ಠಾನವು (ವೈದ್ಯಕೀಯ) ಹೊಸ ಸ್ವಾಯತ್ತ ವಿಶ್ವವಿದ್ಯಾಲಯ ಸ್ಥಾಪಿಸಲಿದೆ. ಪ್ರತಿಷ್ಠಾನದಡಿ ಈಗಾಗಲೇ ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ, ರಾಮಯ್ಯ ವೈದ್ಯಕೀಯ ಕಾಲೇಜು ಮತ್ತು ರಾಮಯ್ಯ ಸ್ಮಾರಕ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ ಎಂದು ಇಡಿ ಮತ್ತು ಸಿಎಸ್‍ಓ ಗುರುಚರಣ್ ಗೊಲ್ಲೇರ್ಕೇರಿ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಹೊಸ ವಿವಿ ಸಂಶೋಧನೆ ಮತ್ತು ವಾಸ್ತವ ಜಗತ್ತಿಗೆ ಹೆಚ್ಚು ಸ್ಪಂದಿಸಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದಕ್ಕೆ ಒತ್ತು ನೀಡಲಿದೆ. ಜಾಗತಿಕವಾಗಿ ಮಾನದಂಡಗಳಿಗೆ ಅನುಗುಣವಾದ, ಉದ್ಯಮ ವಲಯಕ್ಕೆ ಹೆಚ್ಚು ಪ್ರಯೋಜನಕಾರಿಯಾದ ಮ್ಯಾನೇಜ್‍ಮೆಂಟ್ ಶಿಕ್ಷಣ  ನೀಡಲಿದೆ. ಸ್ವಾಯತ್ತ ವಿವಿ 2026ರ ಆಗಸ್ಟ್‍ನಿಂದ ಕಾರ್ಯಾರಂಭ ಮಾಡಲಿದೆ. ಇಲ್ಲಿ ಬಿಬಿಎ ಮತ್ತು ಎಂಬಿಎ ಜತೆಗೆ ಕಂಪ್ಯೂಟರ್ ಸೈನ್ಸ್ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ (ಎಐ) ಬಿ. ಟೆಕ್, ಏರೊಸ್ಪೇಸ್ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್ ಸೈನ್ಸಸ್ ಮುಂತಾದ ವಿಶೇಷ ಕೋರ್ಸ್‍ಗಳಿರುತ್ತವೆ. ಕೈಗಾರಿಕಾ ಪ್ರಾಯೋಜಿತ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಿ, ಇಂಟರ್ನ್‍ಶಿಪ್‍ಗಳು, ಲೈವ್ ಪ್ರಾಜೆಕ್ಟ್‍ಗಳು ಮತ್ತು ಕ್ಯಾಪ್‍ಸ್ಟೋನ್ ಕಾರ್ಯಗಳ ಮೂಲಕ ಪ್ರಾಯೋಗಿಕ ಅನುಭವ ನೀಡಿ ವಾಸ್ತವ ಪ್ರಪಂಚದ ಕೌಶಲಗಳನ್ನು ಅಭಿವೃದ್ಧಿಪಡಿಸಲಿದೆ. ಆಲ್ಬನಿ ವಿವಿ ಪಾಲುದಾರಿಕೆಯಲ್ಲಿ ಸ್ಕೂಲ್ ಆಫ್ ಆರಂಭವಾಗಲಿದೆ ಎಂದು ಆಲ್ಬನಿ ವಿವಿ ಅಧ್ಯಕ್ಷ ಹವಿಡನ್ ರೋಡ್ರಿಗಸ್ ಹೇಳಿದ್ದಾರೆ.


ಮುಖ್ಯ ವಸತಿ ಕ್ಯಾಂಪಸ್ ಬೆಂಗಳೂರಿನ ದೇವನಹಳ್ಳಿ ಬಳಿಯ ಮಾಹಿತಿ ತಂತ್ರಜ್ಞಾನ ಹೂಡಿಕೆ ಪ್ರದೇಶದಲ್ಲಿ ನಿರ್ಮಾಣವಾಗಲಿದ್ದು, ಮುಂದಿನ ವರ್ಷ ಈ ಸುಸಜ್ಜಿತ ಕ್ಯಾಂಪಸ್ ಕಾರ್ಯ ನಿರ್ವಹಿಸುತ್ತದೆ. ಅದುವರೆಗೆ ಯಲಹಂಕದ ತಾತ್ಕಾಲಿಕ ಕ್ಯಾಂಪಸ್‍ನಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಪ್ರಕಟಣೆ ತಿಳಿಸಿದೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top