ಚೇತನ ಪಿಯು ವಾಣಿಜ್ಯ ಮಹಾವಿದ್ಯಾಲಯದ ಅಭೂತಪೂರ್ವ ಸಾಧನೆ

Upayuktha
0



ಹುಬ್ಬಳ್ಳಿ: ನಗರದ ಉಣಕಲ್ ಪ್ರದೇಶದಲ್ಲಿರುವ ಚೇತನ ಪಿಯು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶ್ರೇಷ್ಠ ಫಲಿತಾಂಶ ಗಳಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ.


ವಿದ್ಯಾರ್ಥಿನಿ ಕುಮಾರಿ ವಿದ್ಯಾ ನೀಲಣ್ಣವರ ಅವರು ಶೇಕಡಾ 97.50 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಕಾರ್ತಿಕ್ ಗಾಣಿಗೇರ್ ಅವರು ಶೇಕಡಾ 97.16 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ರಾಜೇಶ್ವರಿ ಬುರ್ಜೀ ಅವರು ಶೇಕಡಾ 92.16 ಹಾಗೂ ರಿಜ್ವಾನಾ ಬಾನು ಅರಳಿಕಟ್ಟಿ ಅವರು ಶೇಕಡಾ 92.00 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.


ಇದೇ ವೇಳೆ, ಮೇಲ್ಕಂಡ ವಿದ್ಯಾರ್ಥಿಗಳು ವ್ಯವಹಾರ ಅಧ್ಯಯನ ಮತ್ತು ಸಂಖ್ಯಾಶಾಸ್ತ್ರ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.


ಈ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ವಿಶ್ವನಾಥ ಎಂ. ಕೊರವಿ, ಪ್ರಾಚಾರ್ಯರಾದ ಡಾ. ಅಶೋಕ್ ವಡಕಣ್ಣವರ, ಡಾ. ಕೆ.ಸಿ. ಪಾಂಗಿ ಹಾಗೂ ಪಿಯುಸಿ ವಿಭಾಗದ ಮುಖ್ಯಸ್ಥರಾದ ಪ್ರೊ. ಸ್ವಾತಿ ಕ್ಯಾತಣ್ಣವರ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top