ಆಳ್ವಾಸ್‌ ಪಿಯು ಕಾಲೇಜಿನ ಅಭಿಜ್ಞಾ ಎಸ್‌.ಎಂ ಗೆ ಶೇ 89

Upayuktha
0


ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಾಮರ್ಸ್ ವಿಭಾಗದ ವಿದ್ಯಾರ್ಥಿನಿ ಅಭಿಜ್ಞಾ ಎಸ್‌.ಎಂ ಶೇ.89 ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಆಳ್ವಾಸ್ ಶಿಕ್ಷಣ ಸಮೂಹದ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತಿರುವ ಈಕೆ, ಸಾಂಸ್ಕೃತಿಕ ವಿಭಾಗದ ಸಾಧನೆಗಳಿಗಾಗಿ ಸಂಸ್ಥೆಯ ಉಚಿತ ಶಿಕ್ಷಣ ಯೋಜನೆಯಡಿ ಆಯ್ಕೆಯಾಗಿದ್ದರು.


ಭರತನಾಟ್ಯ ಸೀನಿಯರ್ ಗ್ರೇಡ್, ಕರ್ನಾಟಕ ಸಂಗೀತ ಜೂನಿಯರ್ ಗ್ರೇಡ್, ಯಕ್ಷಗಾನದಲ್ಲಿ ಆಳ್ವಾಸ್ ಧೀಂಕಿಟದ ವಿದ್ಯಾರ್ಥಿನಿ. ತಂದೆ ಮಣಿಯೂರು ಗೋವರ್ಧನ ಅವರು ಅಧ್ಯಾಪಕರಾಗಿದ್ದು, ತಾಯಿ ವಿದುಷಿ ಕಾಂತಿ ಜಿ ಭಟ್. ಮೂಡುಬಿದಿರೆಯಲ್ಲಿ ವಾಸ್ತವ್ಯವಿದ್ದಾರೆ.


ಈಕೆಗೆ ಆಳ್ವಾಸ್ ಸಾಂಸ್ಕೃತಿಕ ವೈಭವ ಮೂಲಕ ಕರ್ನಾಟಕದ ಅನೇಕ ಕಡೆ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟವರು ಡಾ. ಎಂ. ಮೋಹನ ಆಳ್ವ ಅವರು.


ಮುಂದೆ ಬೆಂಗಳೂರಿನ ವೋಗ್ ಆರ್ಟ್ ಅಂಡ್ ಫ್ಯಾಶನ್ ಡಿಸೈನಿಂಗ್ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಬಿ.ಡಿಸೈನಿಂಗ್ ಕೋರ್ಸ್ ಕಲಿಯಲು ಇಚ್ಛಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top