ಕಲಬುರಗಿ: ಶ್ರೀ ಶೆಟ್ಟಿ ಸಂಗಪ್ಪ ಸ್ಮಾರಕ ಶಾಲೆಗೆ ಎಸ್‌ಎಸ್‌ಎಲ್‌ಸಿ ಶೇಕಡ 99.8ರಷ್ಟು ಫಲಿತಾಂಶ

Upayuktha
0


ಕಲಬುರಗಿ: ನಗರದ ಅಳಂದ ರಸ್ತೆಯಲ್ಲಿರುವ ಶ್ರೀ ಶೆಟ್ಟಿ ಸಂಗಪ್ಪ ಸ್ಮಾರಕ ಶಾಲೆ ಈ ಬಾರಿಯ ಎಸ್ ಎಸ್ ಎಲ್ ಸಿ ಯಲ್ಲಿ ಶೇ. 99.8 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ.


ಶಾಲೆಯು ವರ್ಷದಿಂದ ವರ್ಷಕ್ಕೆ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದ್ದು ಈ ಬಾರಿ ಶೇ. 99.8ರಷ್ಟು ಫಲಿತಾಂಶ ದಾಖಲಿಸಿ ಶಾಲೆಗೆ ಕೀರ್ತಿ ತಂದಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ನ್ಯಾಯವಾದಿ ಮತ್ತು ಗೃಹ ರಕ್ಷಕ ದಳದ ಮಾಜಿ ಸಮಾದೇಷ್ಟರಾದ ಗಿರಿಜಾ ಶಂಕರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಶಾಲೆಯಲ್ಲಿ ಶೇ. 95.36 ಅಂಕ ಪಡೆದ ರುಚಿ ಅಗ್ರಸ್ಥಾನ ಪಡೆದು ಕೀರ್ತಿ ತಂದಿದ್ದಾಳೆ. ಸ್ವಾತಿ ಶೇ. 91.36, ವೈಷ್ಣವಿ ಶೇಕಡ 90.72 ಆನಂದ್ ಶೇ. 89.60, ವಿನಯ್ ಕುಮಾರ್ ಶೇ. 88, ಐಶ್ವರ್ಯ ಶೇ. 86.56, ನೀರಜ್ ಶೇ. 85.92, ಸೌಂದರ್ಯ ಶೇ.85.28, ಸುಬ್ರಹ್ಮಣ್ಯ ಶೇ. 82.72 ಹಾಗೂ ಸಾಗರ್  ಶೇ.81.28 ಅಂಕ ಪಡೆದು ಶಾಲೆಯ ಗೌರವ ಹೆಚ್ಚಿಸಿದ್ದಾರೆ.


ಶಾಲೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷ ಗಿರಿಜಾ ಶಂಕರ್ ಶೆಟ್ಟಿ, ಸುಜಾತಾ ಗಿರಿಜಾ ಶಂಕರ್ ಶೆಟ್ಟಿ, ಸಂಗಪ್ಪ ಜಿ. ಶೆಟ್ಟಿ, ಅಮೂಲ್ಯ ಎಸ್. ಗುತ್ತೇದಾರ್, ಸತೀಶ್ ವಿ.ಗುತ್ತೇದಾರ್, ಸವಿತಾ ಗುತ್ತೇದಾರ್ ಹಾಗೂ ಶಾಲಾ ಪ್ರಾಂಶುಪಾಲರು ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top