ಇಳಕಲ್‌ಗೆ ಆಗಮಿಸಿದ ಜನಾರ್ಧನ್ ರೆಡ್ಡಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ

Upayuktha
0

ಚಿಕ್ಕ ಓತಗೇರಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ



ಇಳಕಲ್: ಮಾಜಿ ಸಚಿವ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ಧನ ರೆಡ್ಡಿ  ಇಳಕಲ್ ನಗರಕ್ಕೆ ಶನಿವಾರದಂದು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಇಲಕಲ್ ನಗರದ ಹೊರವಲಯದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.


ಇಳಕಲ್  ನಗರದಲ್ಲಿ  ಅದ್ದೂರಿಯಾಗಿ ಸ್ವಾಗತಿಸಿದ ಅಭಿಮಾನಿಗಳು  ನಂತರ ಚಿಕ್ಕ ಓತಗೇರಿ ಗ್ರಾಮಕ್ಕೆ  ಅದ್ದೂರಿಯಾಗಿ ಸ್ವಾಗತಿಸಿದರು. ಗ್ರಾಮದಲ್ಲಿ ನೂತನವಾಗಿ ಉದ್ಘಾಟನೆಗೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಗಾಲಿ ಜನಾರ್ಧನ್ ರೆಡ್ಡಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. 


ನೂತನವಾಗಿ ನಿರ್ಮಾಣವಾದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ  ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಜನಾರ್ದನ್ ರೆಡ್ಡಿ   ಮನುಕುಲಕ್ಕೆ ಒಳಿತನ್ನು ಬಯಸಿದ ಮಹಾನ ದೇವತೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ದರ್ಶನ ಪಡೆದಿದ್ದು ನನ್ನ ಪುಣ್ಯ, ಸುಂದರವಾಗಿ ದೇವಸ್ಥಾನ ನಿರ್ಮಾಣವಾಗಿದೆ ಆ ತಾಯಿ ಗ್ರಾಮಸ್ಥರು ಎಲ್ಲರಿಗೂ ಒಳಿತನ್ನ ಮಾಡಲಿ ಎಂದು ಮಾತನಾಡಿದರು. 


ಗ್ರಾಮಸ್ಥರ ಪರವಾಗಿ  ಮಾಜಿ ಸಚಿವರಿಗೆ ಹೃದಯಪೂರ್ವಕವಾಗಿ ಸತ್ಕರಿಸಿದರು. ಈ ಸಂದರ್ಭದಲ್ಲಿ  ಮನೋಹರಗೌಡ ಗೌಡರ, ಗ್ರಾಮದವರಾದ ಮಲ್ಲನಗೌಡ ಮರಿಗೌಡರ,  ಗೋವಿಂದ ಗೌಡರ, ಶರಣಪ್ಪ ಗುಡಿಹಾಳ,ಗ್ಯಾನಪ್ಪ ಕಂದಕೂರ, ಮಹಾಂತೇಶ ಕಂದಕೂರ, ಶಿವಪ್ಪ ಮೂಲಿಮನಿ,ಬಸವರಾಜ ಕಂದಕೂರ, ಅಶೋಕ ಕಂದಕೂರ, ಅಯ್ಯನಗೌಡ  ಮೂಲಿಮನಿ, ಶಶಿಧರ್ ತಾರಿವಾಳ,ವೆಂಕನಗೌಡ ಮರಿಗೌಡರ,  ಈರನಗೌಡ ಗೌಡರ ಓತಗೇರಿ ಹಾಗೂ ಗ್ರಾಮದ ಗುರುಹಿರಿಯರು, ಮತ್ತು  ಹಿರೇ ಓತಗೇರಿ ಗ್ರಾಮದ ಯುವ ಮಿತ್ರರು ಉಪಸ್ಥಿತರಿದ್ದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top