ಮಾನವ ಹಕ್ಕುಗಳ ಆಯೋಗದಿಂದ ಕಿರುಚಿತ್ರ ಸ್ಪರ್ಧೆ

Upayuktha
0

 


ಮಂಗಳೂರು: ನವದೆಹಲಿಯ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 2015 ರಿಂದ ಮಾನವ ಹಕ್ಕುಗಳ ಕುರಿತು ಕಿರುಚಿತ್ರ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದೆ. 2026 ರಲ್ಲಿ ಸ್ಪರ್ಧೆಯ 12 ನೇ ಆವೃತ್ತಿಗೆ, ದೇಶದ ನಾಗರಿಕರಿಂದ ಆನ್‍ಲೈನ್‍ನಲ್ಲಿ ಪ್ರವೇಶಗಳನ್ನು ಆಹ್ವಾನಿಸಿದೆ.

ಮೊದಲ, ಎರಡನೇ ಮತ್ತು ಮೂರನೇ ಅತ್ಯುತ್ತಮ ಚಿತ್ರಕ್ಕೆ ಬಹುಮಾನದ ಮೊತ್ತವು ಕ್ರಮವಾಗಿ ರೂ. 2 ಲಕ್ಷ, ರೂ.1.50 ಲಕ್ಷ ಮತ್ತು ರೂ.1 ಲಕ್ಷ ಆಗಿರುತ್ತದೆ. ಆಯೋಗವು ಮೂರು ನಗದು ಪ್ರಶಸ್ತಿಗಳು, ಪ್ರಮಾಣಪತ್ರಗಳು ಮತ್ತು ಟ್ರೋಫಿಗಳ ಜೊತೆಗೆ, ತೀರ್ಪುಗಾರರು ಶಿಫಾರಸು ಮಾಡಿದ ಗರಿಷ್ಠ 4 ಚಿತ್ರಗಳಿಗೆ ತಲಾ ರೂ.50 ಸಾವಿರ ನಗದು ಬಹುಮಾನದೊಂದಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಕಿರುಚಿತ್ರಗಳು ಹಿಂದಿ ಅಥವಾ ಯಾವುದೇ ಭಾರತೀಯ ಭಾಷೆಯಲ್ಲಿರಹುದು. ಇಂಗ್ಲಿಷ್ ನಲ್ಲಿ ಉಪಶೀರ್ಷಿಕೆಗಳನ್ನು ಹಾಕಿರಬೇಕು. ಕಿರುಚಿತ್ರದ ಅವಧಿ ಕನಿಷ್ಠ 3 ನಿಮಿಷಗಳು ಮತ್ತು ಗರಿಷ್ಠ 10 ನಿಮಿಷಗಳು. ಪ್ರವೇಶಗಳನ್ನು ಸ್ವೀಕರಿಸಲು ಕೊನೆಯ ದಿನ ಜೂನ್ 30.  ಗೂಗಲ್ ಡ್ರೈವ್ ಬಳಸಿ ಆನ್‍ಲೈನ್‍ನಲ್ಲಿ ಕಿರುಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬೇಕು.

ನಿಯಮಗಳು ಮತ್ತು ಷರತ್ತುಗಳು ಮತ್ತು ಅರ್ಜಿ ನಮೂನೆಯ ಪ್ರತಿಯನ್ನು  ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವೆಬ್‍ಸೈಟ್ ನಿಂದ ಡೌನ್‍ಲೋಡ್ ಮಾಡಬಹುದು.

ಮಾನವ ಹಕ್ಕುಗಳ ಸಂಸ್ಕøತಿ ಮತ್ತು ಸಂವೇದನೆಯನ್ನು  ಮೂಡಿಸುವ ಉದ್ದೇಶದ   ಸ್ಪರ್ಧೆಯಲ್ಲಿ ಸಾರ್ವಜನಿಕರು ಯಾವುದೇ ವಯೋಮಿತಿಯ ನಿಬರ್ಂಧವಿಲ್ಲದೇ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 011-24663281/24663367  ಸಂಪರ್ಕಿಸಬಹುದು ಎಂದು ಎನ್.ಹೆಚ್.ಆರ್.ಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಉಪನಿರ್ದೇಶಕ ಜೈಮಿನಿ ಕುಮಾರ್ ಶ್ರೀವಾಸ್ತವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top